ಆ್ಯಪ್ನಗರ

‘ಪಂಚಮಸಾಲಿ ಮತ’ ಗ್ರಂಥ ಉತ್ಸವ, ಲೋಕಾರ್ಪಣೆ

ಮುಂಡರಗಿ: ಪಂಚಮಸಾಲಿ ಸೇವಾ ಸಮಿತಿ ಆಶ್ರಯದಲ್ಲಿ ಗದಗಿನ ಡಾ.ಬಿ.ಆರ್‌.ಅಂಬೇಡ್ಕರ ಭವನದಲ್ಲಿ ಜು.28ರಂದು ಬೆಳಗ್ಗೆ 11 ಕ್ಕೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಡಾ.ಡಿ.ಎ.ಉಪಾಧ್ಯ ವಿರಚಿತ 'ಪಂಚಮಸಾಲಿ ಮತ' ಗ್ರಂಥ ಉತ್ಸವ ಮತ್ತು ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪಂಚಮಸಾಲಿ ಸಮಾಜ ಯುವ ಘಟಕದ ಜಿಲ್ಲಾಧ್ಯಕ್ಷ ಶಿವರಾಜಗೌಡ ಹಿರೇಮನಿಪಾಟೀಲ ತಿಳಿಸಿದರು.

Vijaya Karnataka 26 Jul 2019, 5:00 am
ಮುಂಡರಗಿ: ಪಂಚಮಸಾಲಿ ಸೇವಾ ಸಮಿತಿ ಆಶ್ರಯದಲ್ಲಿ ಗದಗಿನ ಡಾ.ಬಿ.ಆರ್‌.ಅಂಬೇಡ್ಕರ ಭವನದಲ್ಲಿ ಜು.28ರಂದು ಬೆಳಗ್ಗೆ 11 ಕ್ಕೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಡಾ.ಡಿ.ಎ.ಉಪಾಧ್ಯ ವಿರಚಿತ 'ಪಂಚಮಸಾಲಿ ಮತ' ಗ್ರಂಥ ಉತ್ಸವ ಮತ್ತು ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪಂಚಮಸಾಲಿ ಸಮಾಜ ಯುವ ಘಟಕದ ಜಿಲ್ಲಾಧ್ಯಕ್ಷ ಶಿವರಾಜಗೌಡ ಹಿರೇಮನಿಪಾಟೀಲ ತಿಳಿಸಿದರು.
Vijaya Karnataka Web panchamasali vaat granth festival lokarpana
‘ಪಂಚಮಸಾಲಿ ಮತ’ ಗ್ರಂಥ ಉತ್ಸವ, ಲೋಕಾರ್ಪಣೆ


ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಗದಗ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಿಂದ ಗ್ರಂಥ ಮೆರವಣಿಗೆ ನಡೆಯಲಿದೆ. ಶಿರಹಟ್ಟಿ ಶ್ರೀ ಫಕೀರೇಶ್ವರಸ್ವಾಮಿ ಮಠದ ಆನೆಯ ಮೇಲೆ ಅಂಬಾರಿ ಕೂರಿಸಿ ಅದರಲ್ಲಿ ಪಂಚಮಸಾಲಿ ಸಮಾಜದ ಇತಿಹಾಸ ಹೊಂದಿರುವ ಪಂಚಮಸಾಲಿ ಗ್ರಂಥವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ ಎಂದರು.

524 ಪುಟಗಳ ಗ್ರಂಥವನ್ನು ಶಾಸಕ ಸಿ.ಸಿ.ಪಾಟೀಲ ಅನಾವರಣ ಮಾಡುವರು. ಶಾಸಕ ಬಸವರಾಜ ಪಾಟೀಲ ಯತ್ನಾಳ ಉದ್ಘಾಟಿಸುವರು. ಶಾಸಕ ಮುರುಗೇಶ ನಿರಾಣಿ ಗ್ರಂಥ ಬಿಡುಗಡೆ ಮಾಡುವರು. ಗ್ರಂಥ ರಚನೆಕಾರ ಡಾ.ಡಿ.ಎಲ್‌.ಉಪಾಧ್ಯ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಗುತ್ತದೆ. ಡಾ.ಎಲ್‌.ವಿ.ಪಾಟೀಲ ಉಪನ್ಯಾಸ ನೀಡುವರು. ಶಾಸಕ ಕಳಕಪ್ಪ ಬಂಡಿ ಸಾಧಕರಿಗೆ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಗ್ರಂಥ ಲೇಖಕರಿಗೆ ಸನ್ಮಾನಿಸುವರು. ಗಣ್ಯ ಉದ್ಯಮಿ ವಿಜಯಕುಮಾರ ಗಡ್ಡಿ ಅಧ್ಯಕ್ಷ ತೆ ವಹಿಸುವರು ಎಂದರು.

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಜಿಪಂ ಅಧ್ಯಕ್ಷ ಎಸ್‌.ಪಿ.ಬಳಿಗಾರ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ವೀರುಪಾಕ್ಷ ಪ್ಪ ಬಳ್ಳಾರಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಹಾಲಪ್ಪ ನಂದಿಹಳ್ಳಿ, ಪ್ರಭಣ್ಣ ಹುಣಸಿಕಟ್ಟಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.

ಮುಂಡರಗಿ ಪಂಚಮಸಾಲಿ ಸಮಾಜ ತಾಲೂಕು ಅಧ್ಯಕ್ಷ ಎಸ್‌.ವಿ.ಪಾಟೀಲ ಮಾತನಾಡಿ, ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಒಂದಾದದ್ದು ಪಂಚಮಸಾಲಿ ಸಮಾಜ. ಮೂಲ ಕೃಷಿ ಉದ್ಯೋಗ ಹೊಂದಿದ ಈ ಸಮಾಜದ ಕುರಿತು ಯಾವುದೇ ಗ್ರಂಥ ಬಂದಿಲ್ಲ. ಈಗ ಗ್ರಂಥ ರಚನೆಗೊಂಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಸಮಾಜದ ಇಂತಹ ಉತ್ತಮ ಕಾರ್ಯಕ್ರಮಕ್ಕೆ ಎಲ್ಲ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಅಶೋಕ ಹಂದ್ರಾಳ, ಈರಣ್ಣ ಹಕ್ಕಂಡಿ, ಮಂಜುನಾಥ ಇಟಗಿ, ಪ್ರಕಾಶಗೌಡ ಪಾಟೀಲ, ದೇವಪ್ಪ ಇಟಗಿ, ಸಿದ್ದು ದೇಸಾಯಿ, ನಾಗರಾಜ ಮುರಡಿ, ಅಂದಪ್ಪ ಉಳ್ಳಾಗಡ್ಡಿ, ಅಯ್ಯಪ್ಪ ಅಂಗಡಿ, ಬಿ.ಬಿ.ಸೂರಪ್ಪಗೌಡ್ರ, ಶಿವರಾಜಗೌಡ ಶಿವನಗೌಡ, ಆರ್‌.ವೈ.ಪಾಟೀಲ, ಶಿವಾನಂದ ಕಮತಾರ, ಬಿ.ವಿ.ಪಾಟೀಲ, ಶರಣಪ್ಪ ಕಲ್ಲೂರ, ಶೇಖಪ್ಪ ಆಲೂರ, ಬಸವರಾಜ ಕೊತಂಬ್ರಿ, ಬಿ.ಕೆ.ಪಾಟೀಲ, ನಿಂಗನಗೌಡ ಪಾಟೀಲ, ಮಹೇಶ ಜಂತ್ಲಿ, ಮಹೇಶ ಹೆಬಸೂರ, ಸುನೀಲ್‌ , ಉಮೇಶ ಅಂಕದ, ಮುತ್ತು ಅಳವಂಡಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ