ಆ್ಯಪ್ನಗರ

ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮುಖ್ಯ

ಗದಗ : ದೇಶದ ಭವಿಷ್ಯ ಶಾಲಾ ವರ್ಗಕೋಣೆಯಲ್ಲಿ ನಿರ್ಮಾಣವಾದರೇ, ಮಕ್ಕಳ ಸರ್ವತೋಮುಖ ಬೆಳವಣಿಗೆ ಶೈಕ್ಷ ಣಿಕ ಪ್ರಕ್ರಿಯೆ ಮೇಲೆ ಅವಲಂಬಿತವಾಗಿದೆ. ಮಕ್ಕಳ ಸರ್ವತೋಮುಖ ಪ್ರಗತಿಯಲ್ಲಿ ಸಮುದಾಯ, ಶಿಕ್ಷ ಕರ ಮತ್ತು ಪಾಲಕರ ಪಾತ್ರ ಪ್ರಮುಖವಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಉಪನ್ಯಾಸಕ ಸಿದ್ದಲಿಂಗೇಶ ಸಜ್ಜನಶೆಟ್ಟರ ಹೇಳಿದರು.

Vijaya Karnataka 1 Apr 2019, 5:00 am
ಗದಗ : ದೇಶದ ಭವಿಷ್ಯ ಶಾಲಾ ವರ್ಗಕೋಣೆಯಲ್ಲಿ ನಿರ್ಮಾಣವಾದರೇ, ಮಕ್ಕಳ ಸರ್ವತೋಮುಖ ಬೆಳವಣಿಗೆ ಶೈಕ್ಷ ಣಿಕ ಪ್ರಕ್ರಿಯೆ ಮೇಲೆ ಅವಲಂಬಿತವಾಗಿದೆ. ಮಕ್ಕಳ ಸರ್ವತೋಮುಖ ಪ್ರಗತಿಯಲ್ಲಿ ಸಮುದಾಯ, ಶಿಕ್ಷ ಕರ ಮತ್ತು ಪಾಲಕರ ಪಾತ್ರ ಪ್ರಮುಖವಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಉಪನ್ಯಾಸಕ ಸಿದ್ದಲಿಂಗೇಶ ಸಜ್ಜನಶೆಟ್ಟರ ಹೇಳಿದರು.
Vijaya Karnataka Web GDG-31SALIM4-61416
ಗದಗ ನಗರದ ಅಬ್ದುಲ್‌ ಕಲಾಂ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು.


ಎಸ್‌ಎಂಇ ಸಂಸ್ಥೆಯ ಅಬ್ದುಲ್‌ ಕಲಾಂ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವೈಜ್ಞಾನಿಕ ಕ್ಷೇತ್ರದಲ್ಲಿ ಸೃಜನಾತ್ಮಕವಾಗಿ ಕಾರ್ಯನಿರ್ವಹಿಸಿದ ವåಹಾನ ಪುರುಷ ಡಾ.ಎಪಿಜೆ ಅಬ್ದುಲ್‌ ಕಲಾಂ ಹೆಸರಿನ ಈ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಪಾಲಕರು ಮತ್ತು ಶಿಕ್ಷ ಕರ ಮಾರ್ಗದರ್ಶನದಂತೆ ಭವಿಷ್ಯದಲ್ಲಿ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಸ್‌ಎಂಇ ಸಂಸ್ಥೆಯ ಅಕಾಡೆಮಿ ಕೌನ್ಸಿಲ್‌ ವೈಸ್‌ ಚೇರ್ಮನ್‌ ಡಾ. ಪ್ಯಾರಾಲಿ ನೂರಾನಿ ಮಾತನಾಡಿ, ಈ ಸಂಸ್ಥೆಯ ಅಡಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ , ವಿವಿಧ ಪದವಿ ಹಾಗೂ ಗಣಕಯಂತ್ರ ವಿಜ್ಞಾನ ಸ್ನಾತಕೋತ್ತರ ಪದವಿ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷ ಬ.ಕೆ. ಖಾಜಿ ಮಾತನಾಡಿ, ಎಸ್‌ಎಂಇ ಸಂಸ್ಥೆಯಲ್ಲಿ ಶೀಘ್ರವೇ ಶಿಶು ಕೇಂದ್ರಿತ ಶಿಕ್ಷಣದಿಂದ ಪಿಜಿವರೆಗೂ ಶೈಕ್ಷಣಿಕ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎ.ಎಂ. ಬದಾಮಿ. ಪ್ರಾಚಾರ್ಯ ಪ್ರೇಮಾನಂದ ರೋಣದ, ವಿದ್ಯಾರ್ಥಿ ಪ್ರತಿನಿಧಿ ಅಬ್ದುಲ ರೆಹಮಾನ ಮತ್ತು ಕಾವ್ಯಾ, ಅಬ್ದುಲ ಕಲಾಂ ಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ