ಆ್ಯಪ್ನಗರ

ವಕೀಲರಿಗೂ ಪರಿಹಾರದ ಹಣ ನೀಡಿ

ಲಕ್ಷ್ಮೇಶ್ವರ : ಕೋವಿಡ್‌-19 ಹಿನ್ನೆಲೆಯಲ್ಲಿಅನೇಕ ವೃತ್ತಿನಿರತರಿಗೆ ಆಪತ್ಕಾಲದ ಪರಿಹಾರದ ಹಣ ಘೋಷಣೆ ಮಾಡಿದಂತೆ ರಾಜ್ಯದಲ್ಲಿರುವ ಎಲ್ಲವಕೀಲ ಸದಸ್ಯರಿಗೂ ಸಹ ಪರಿಹಾರ ಹಣ ಬಿಡುಗಡೆ ಮಾಡುವ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ಸಹಾಯ ಹಸ್ತ ಚಾಚಬೇಕೆಂದು ಆಗ್ರಹಿಸಿ ವಕೀಲರ ಸಂಘದಿಂದ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

Vijaya Karnataka 25 Jun 2020, 5:00 am
ಲಕ್ಷ್ಮೇಶ್ವರ : ಕೋವಿಡ್‌-19 ಹಿನ್ನೆಲೆಯಲ್ಲಿಅನೇಕ ವೃತ್ತಿನಿರತರಿಗೆ ಆಪತ್ಕಾಲದ ಪರಿಹಾರದ ಹಣ ಘೋಷಣೆ ಮಾಡಿದಂತೆ ರಾಜ್ಯದಲ್ಲಿರುವ ಎಲ್ಲವಕೀಲ ಸದಸ್ಯರಿಗೂ ಸಹ ಪರಿಹಾರ ಹಣ ಬಿಡುಗಡೆ ಮಾಡುವ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ಸಹಾಯ ಹಸ್ತ ಚಾಚಬೇಕೆಂದು ಆಗ್ರಹಿಸಿ ವಕೀಲರ ಸಂಘದಿಂದ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web 5105002022 LXR 3_25
ಲಕ್ಷ್ಮೇಶ್ವರದ ವಕೀಲರ ಸಂಘದಿಂದ ಕೋವಿಡ್‌-19 ಹಿನ್ನೆಲೆಯಲ್ಲಿ ವಕೀಲರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಮಾರ್ಚ್ ತಿಂಗಳಿಂದ ಜೂನ್‌ ತಿಂಗಳವರೆಗೂ ನ್ಯಾಯಾಲಯದ ಕಾರ್ಯಕಲಾಪ ಸ್ಥಗಿತಗೊಂಡಿದ್ದವು. ಇದರಿಂದ ಬಹುತೇಕ ವಕೀಲರು ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಮೂರು ತಿಂಗಳಿಂದಲೂ ಯಾವುದೇ ಆದಾಯವಿಲ್ಲದೆ ಕುಟುಂಬ ನಿರ್ವಹಿಸುವುದು ಕಷ್ಟದಾಯಕ. ಈ ಹಿನ್ನೆಲೆಯಲ್ಲಿತುರ್ತು ಸಂಕಷ್ಟ ನಿವಾರಣೆಗೆ ಸರಕಾರ ಆಪತ್ಕಾಲದ ಪರಿಹಾರ ಮೊತ್ತದಲ್ಲಿರಾಜ್ಯದ ಎಲ್ಲವಕೀಲರಿಗೂ ಪರಿಹಾರದ ಹಣ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿವಿನಂತಿಸಲಾಗಿದೆ.

ರಾಜ್ಯ ವಕೀಲರ ಹಾಗೂ ಬೆಂಗಳೂರು ವಕೀಲರ ಸಂಘದ ಪ್ರತಿಭಟನೆಗೆ ನೈತಿಕ ಬೆಂಬಲ ನೀಡುವ ಹಿನ್ನೆಲೆಯಲ್ಲಿನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ಮೂಲಕ ಈ ಮನವಿ ಸಲ್ಲಿಸಲಾಗಿದೆ ಎಂದು ಮನವಿಯಲ್ಲಿತಿಳಿಸಲಾಗಿದೆ.

ವಕೀಲರ ಸಂಘದ ಅಧ್ಯಕ್ಷ ಬಿ.ಎಸ್‌.ಪಾಟೀಲ, ಉಪಾಧ್ಯಕ್ಷ ಎನ್‌.ಐ.ಬೆಲ್ಲದ, ಎನ್‌.ಐ.ಸೊರಟೂರ, ಎಂ.ಎಂ.ಗದಗ,ಎ.ಬಿ.ಪಾಟೀಲ, ಬಿ.ಎಸ್‌.ಬಾಳೇಶ್ವರಮಠ, ವಿ.ಎಸ್‌.ಪಶುಪತಿಹಾಳ, ಐ.ಜಿ. ಹುಲಬಜಾರ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ