ಆ್ಯಪ್ನಗರ

ಪ್ರವಚನ ಕೇಳುವುದರಿಂದ ಮನಸ್ಸಿಗೆ ಶಾಂತಿ

ಮುಳಗುಂದ: ಪುರಾಣ,ಪ್ರವಚನಗಳು ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತವೆ.ಆದ್ದರಿಂದ ಶಿವಯೋಗಿಗಳ ಜೀವನ ಚರಿತ್ರೆ ಅವರ ಆಚಾರ ವಿಚಾರಗಳನ್ನು ಜೀವನದಲ್ಲಿಅಳವಡಿಸಿಕೊಂಡು ನಡೆದಲ್ಲಿಜೀವನ ಸಾರ್ಥಕವಾಗುತ್ತದೆ ಎಂದು ಗವಿಮಠ ಮುಳಗುಂದ -ಧಾರವಾಡ ಮುರುಘಾಮಠದ ಪಿಠಾಧ್ಯಕ್ಷ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

Vijaya Karnataka 5 Sep 2019, 5:00 am
ಮುಳಗುಂದ: ಪುರಾಣ,ಪ್ರವಚನಗಳು ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತವೆ.ಆದ್ದರಿಂದ ಶಿವಯೋಗಿಗಳ ಜೀವನ ಚರಿತ್ರೆ ಅವರ ಆಚಾರ ವಿಚಾರಗಳನ್ನು ಜೀವನದಲ್ಲಿಅಳವಡಿಸಿಕೊಂಡು ನಡೆದಲ್ಲಿಜೀವನ ಸಾರ್ಥಕವಾಗುತ್ತದೆ ಎಂದು ಗವಿಮಠ ಮುಳಗುಂದ -ಧಾರವಾಡ ಮುರುಘಾಮಠದ ಪಿಠಾಧ್ಯಕ್ಷ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
Vijaya Karnataka Web peace of mind by listening to discourse
ಪ್ರವಚನ ಕೇಳುವುದರಿಂದ ಮನಸ್ಸಿಗೆ ಶಾಂತಿ


ಅವರು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದ ಆವರಣದಲ್ಲಿಶ್ರಾವಣ ಮಾಸದ ಅಂಗವಾಗಿ ನಡೆದ ಒಂದು ತಿಂಗಳಕಾಲ ಅಥಣಿ ಮುರುNೕಂದ್ರ ಶಿವಯೋಗಿಗಳ ಪುರಾಣ ಪ್ರವಚನ ಮಂಗಲೋತ್ಸವ ಹಾಗೂ ಬಾಲಲೀಲಾ ಮಹಾಂತ ಶಿವಯೋಗಿಗಳ 196ನೇ ಜಯಂತ್ಯುತ್ಸವದ ಸಾನ್ನಿಧ್ಯವನ್ನು ವಹಿಸಿಕೊಂಡು ಮಾತನಾಡಿ, ಶಿವಯೋಗಿಗಳ ಆಚಾರ,ವಿಚಾರ,ಭಕ್ತಿ,ಶ್ರದ್ಧೆಯಿಂದ ನಾವು ನಡೆದುಕೊಂಡರೆ ಫಲ ಪುಣ್ಯ ಪ್ರಾಪ್ತಿಯಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ,ಸುಖ ದೊರೆಯುತ್ತದೆ ಎಂದರು.

ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಶ್ರಾವಣದಲ್ಲಿಪುರಾಣ ಪ್ರವಚನಗಳಿಂದ ಶಿವಯೋಗಿಗಳ, ಶರಣರ ಚಿಂತನೆ,ಅವರ ಆಚಾರ ವಿಚಾರಗಳನ್ನು ಕೇಳುವುದರಿಂದ ಶಾಂತಿ,ನೆಮ್ಮದಿ ಸಿಗುತ್ತದೆ ಎಂದರು.

ಸಾನ್ನಿಧ್ಯವನ್ನು ಗವಿಮಠ ಮುಳಗುಂದ ಹಾಗೂ ಮುರುಘಾಮಠ ಧಾರವಾಡದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಕಂಪ್ಲಿಕಲ್ಮಠದ ಅಭಿನವ ಪ್ರಭು ಮಹಾಸ್ವಾಮೀಜಿ, ಪುರಾಣ ಮಂಗಲ ನುಡಿಯನ್ನು ಪಂಚಾಕ್ಷರಿ ಶಾಸ್ತ್ರಿಗಳು ಮರಿದೇವರಮಠ ಹೇಳಿದರು. ಶಂಕ್ರಪ್ಪ ಮಡ್ಡಿ ಸಂಗೀತ ಸೇವೆ, ಮಲ್ಲಪ್ಪ ಬಳ್ಳಾರಿ ತಬಲಾ ಸೇವೆ ನೀಡಿದರು. ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಅಧ್ಯಕ್ಷತೆವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಆರ್‌.ಎನ್‌.ದೇಶಪಾಂಡೆ, ಎಂ.ಡಿ.ಬಟ್ಟೂರ, ಎಸ್‌.ಎಂ.ನೀಲಗುಂದ, ಜಾತ್ರಾ ಸಮಿತಿ ಅಧ್ಯಕ್ಷ ಷಣ್ಮುಖಪ್ಪ ಬಡ್ನಿ ಆಗಮಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ