ಆ್ಯಪ್ನಗರ

ಶಾಂತಿಯುತ ಮತದಾನಕ್ಕೆ ಸಹಕಾರ ಅಗತ್ಯ

ಗಜೇಂದ್ರಗಡ : ಚುನಾವಣೆ ನೀತಿ ಸಂಹಿತೆಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಂತಿ, ಸುವ್ಯವಸ್ಥೆ ಜತೆಗೆ ಮುಕ್ತ, ನ್ಯಾಯ ಸಮ್ಮತ ಮತದಾನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ನರಗುಂದ ಉಪ ವಿಭಾಗದ ಡಿಎಸ್ಪಿ ಎಸ್‌.ಐ. ಪಾಟೀಲ ಹೇಳಿದರು.

Vijaya Karnataka 10 Apr 2019, 5:00 am
Vijaya Karnataka Web GDG-9GJD1
ಗಜೇಂದ್ರಗಡ ಪೊಲೀಸ್‌ ಠಾಣೆ ಬಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮತದಾರ ಜಾಗೃತಿ ಕುರಿತ ಸಭೆಯಲ್ಲಿ ನರಗುಂದ ಉಪ ವಿಭಾಗದ ಡಿಎಸ್ಪಿ ಎಸ್‌.ಐ. ಪಾಟೀಲ ಮಾತನಾಡಿದರು.
ಗಜೇಂದ್ರಗಡ : ಚುನಾವಣೆ ನೀತಿ ಸಂಹಿತೆಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಂತಿ, ಸುವ್ಯವಸ್ಥೆ ಜತೆಗೆ ಮುಕ್ತ, ನ್ಯಾಯ ಸಮ್ಮತ ಮತದಾನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ನರಗುಂದ ಉಪ ವಿಭಾಗದ ಡಿಎಸ್ಪಿ ಎಸ್‌.ಐ. ಪಾಟೀಲ ಹೇಳಿದರು.

ಸ್ಥಳೀಯ ಪೊಲೀಸ್‌ ಠಾಣೆಯ ಬಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮತದಾರ ಜಾಗೃತಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಿಂದ ಚುನಾವಣಾ ಆಯೋಗ ನಿಗದಿ ಪಡಿಸಿದ ಮತದಾನ ಕೇಂದ್ರ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ. ಮತದಾರರು ಶಾಂತಿಯಿಂದ ಸರದಿಯಲ್ಲಿ ಬಂದು ಮತ ಚಲಾಯಿಸಬೇಕು. ಇದಕ್ಕಾಗಿ ಅಗತ್ಯ ಸಿಬ್ಬಂದಿ ನೇಮಕ ನಡೆದಿದೆ ಎಂದರು.

ರೋಣ ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ರಮೇಶ ಜಲಗೇರಿ ಮಾತನಾಡಿದರು. ಸಿಬ್ಬಂದಿ ಸುರೇಶ ಮಂತಾ, ಕನಕಪ್ಪ ಜಮಾದಾರ, ಎಸ್‌.ಎಸ್‌. ಹುಲ್ಲೂರ, ಎ.ಎಮ್‌. ಮುಲ್ಲಾ, ಮಹೇಶ ಬಳ್ಳಾರಿ, ಚಂದ್ರಶೇಖರ ಪಾಟೀಲ, ಪ್ರೇಮಾ ಶಿರಹಟ್ಟಿ, ಗೀತಾ ಉಪ್ಪಾರ, ಪ್ರಕಾಶ ಅಂಬೋರೆ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ