ಆ್ಯಪ್ನಗರ

ಕಾನೂನು ಉಲ್ಲಂಘಿಸಿದರೆ ದಂಡ

ಗದಗ : ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು.

Vijaya Karnataka 7 Mar 2019, 5:00 am
ಗದಗ : ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು.
Vijaya Karnataka Web GDG-6RUDRAGOUD19


ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಜಿಲ್ಲೆಯ ಶಿಕ್ಷ ಣ ಸಂಸ್ಥೆ ಹಾಗೂ ಕಚೇರಿಗಳು ತಂಬಾಕು ಮುಕ್ತವಾಗಿಸಲು ಅವರಣದ ವ್ಯಾಪ್ತಿಯಲ್ಲ್ತಿ ಎಲ್ಲೊ ಲೈನ್‌ ಕಡ್ಡಾಯವಾಗಿ ಹಾಕಬೇಕು. ಕಾನೂನು ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಸಂಸ್ಥೆ ಮುಖ್ಯಸ್ಥರು ದಂಡ ವಿಧಿಸುವುದರ ಮೂಲಕ ಕ್ರಮಕೈಕೊಳ್ಳಲು ಸೂಚಿಸಿದರು.

ಜಿಲ್ಲಾ ಸಮೀಕ್ಷ ಣಾಧಿಕಾರಿ ಡಾ.ಸತೀಶ ಬಸರೀಗಿಡದ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 249 ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ. ತಂಬಾಕು ನಿಯಂತ್ರಣ ಕುರಿತು ಮಾಡಲಾದ ಐಇಸಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ವ್ಯಾಪಾರಸ್ಥರು ಸೆಕ್ಷ ನ್‌ 4 ಹಾಗೂ ಸೆಕ್ಷ ನ್‌ 6 ಅಂದರೆ ಧೂಮಪಾನ ನಿಷೇಧ ಹಾಗೂ 18 ವರ್ಷದೊಳಗಿನವರಿಗೆ ತಂಬಾಕು ಮಾರಾಟ ನಿಷೇಧ ಎಂಬ ನಾಮಫಲಕ ಕಡ್ಡಾಯವಾಗಿ ಬಿತ್ತರಿಸಲು ಸೂಚಿಸುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದರು. ಲೈಸೆನ್ಸ್‌ನಲ್ಲಿ ಈ ಷರತ್ತು ಕಡ್ಡಾಯವಾಗಿ ಸೇರಿಸಲು ತಿಳಿಸಿದರು.

ತಹಸೀಲ್ದಾರರ ನೇತೃತ್ವದ ತಾಲೂಕು ಮಟ್ಟದ ತನಿಖಾದಳದ ಮೂಲಕ ಇನ್ನು ಹೆಚ್ಚಿನ ಕಾರ್ಯಾಚರಣೆ ನಡೆಸುವುದರ ಮೂಲಕ ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಮಾಡಲು ಸೂಚಿಸಿದರು. ಬೀಡಿ ಸಿಗರೇಟ್‌ ಹಾಗೂ ತಂಬಾಕು ಉತ್ಪನ್ನಗಳನ್ನು ( ಕಡ್ಡಿ ಪುಡಿ)ಯನ್ನು ಬಿಡಿಬಿಡಿಯಾಗಿ ಮಾರಾಟ ಮಾಡುವುದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಕೈಕೊಳ್ಳಲು ಆದೇಶಿಸಿದರು. ಧೂಮಪಾನ ಮಾಡುವ ಅಡೆÜ್ಡಗಳ ಮೇಲೆ ಕಾನೂನು ರೀತಿ ಶಿಸ್ತು ಕ್ರಮ ಕೈಕೊಳ್ಳಲು ಸೂಚಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರ ಗೋಪಾಲ ಸುರಪುರ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 625 ತಂಬಾಕು ವ್ಯಸನಿಗಳು ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ಲಭ್ಯವಿರುವ ನಿಕೋಟಿನ್‌ ಗಮ್ಸ್‌ ಹಾಗೂ ನಿಕೋಟಿನ್‌ ಪ್ಯಾಚಸ್‌ಗಳ ಸದುಪಯೋಗ ಪಡೆದಿರುವ ಕುರಿತು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಡಾ.ವೀರುಪಕ್ಷ ರಡ್ಡಿ ಮಾದಿನೂರು ಮಾತನಾಡಿದರು.

ನಗರಸಭೆ ಆಯುಕ್ತ ಮನ್ಸೂರ ಅಲಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಗಣೇಶ, ಅಬಕಾರಿ ಇಲಾಖೆ, ತೆರಿಗೆ ಇಲಾಖೆ, ಶಿಕ್ಷ ಣ ಇಲಾಖೆ, ಜೆಟಿ ಕಾಲೇಜಿನ ಪ್ರಾಚಾರ‍್ಯ ಸಿ.ಲಿಂಗಾರೆಡ್ಡಿ, ಪ್ರಾಚಾರ‍್ಯ ಡಾ.ಬಿ.ಜಿ.ಹಿರೇಮಠ, ಆಹಾರ ಸುರಕ್ಷ ತಾಧಿಕಾರಿ ಡಿ.ಎಸ್‌.ಅಂಗಡಿ, ಆರ್‌.ಎನ್‌. ಗಡಾದ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷ ಣ ಸಂಸ್ಥೆಯ ಮುಖ್ಯಸ್ಥರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ