ಆ್ಯಪ್ನಗರ

ಬಡತನ ವಿದ್ಯೆಗೆ ಅಡ್ಡಿಯಾಗದು

ರೋಣ: ಸರಕಾರದ ಉತ್ತಮ ಯೋಜನೆಗಳಿಂದ ಬಡತನ ಮತ್ತು ಹಸಿವು ವಿದ್ಯೆಗೆ ಅಡ್ಡಿಬರಲಾರದು. ವಿದ್ಯಾರ್ಜನೆಯಿಂದ ಜೀವನದಲ್ಲಿಸಾಧನೆ ಮಾಡಲು ಸಾಧ್ಯ ಎಂದು ತಾಪಂ ಉಪಾಧ್ಯಕ್ಷೆ ಇಂದಿರಾ ತೇಲಿ ಹೇಳಿದರು.

Vijaya Karnataka 24 Sep 2019, 5:00 am
ರೋಣ: ಸರಕಾರದ ಉತ್ತಮ ಯೋಜನೆಗಳಿಂದ ಬಡತನ ಮತ್ತು ಹಸಿವು ವಿದ್ಯೆಗೆ ಅಡ್ಡಿಬರಲಾರದು. ವಿದ್ಯಾರ್ಜನೆಯಿಂದ ಜೀವನದಲ್ಲಿಸಾಧನೆ ಮಾಡಲು ಸಾಧ್ಯ ಎಂದು ತಾಪಂ ಉಪಾಧ್ಯಕ್ಷೆ ಇಂದಿರಾ ತೇಲಿ ಹೇಳಿದರು.
Vijaya Karnataka Web 23 RON 3_25
ರೋಣ ತಾಲೂಕಿನ ಹಿರೇಹಾಳ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಿಸಲಾಯಿತು.


ಅವರು ತಾಲೂಕಿನ ಹಿರೇಹಾಳದ ಸರಕಾರಿ ಪ್ರೌಢಶಾಲೆ 8ನೇ ತರಗತಿಯ ವಿದ್ಯಾರ್ಥಿಗಳಿಗೆ 2019-20ನೇ ಶೈಕ್ಷಣಿಕ ಸಾಲಿನ ಉಚಿತ ಸೈಕಲ್‌ ವಿತರಿಸಿ ಮಾತನಾಡಿದರು.

ವಿದ್ಯೆಯಿಂದ ಮಾತ್ರ ಬಡತನ ನಿವಾರಣೆ ಸಾಧ್ಯ ಎಂಬ ವಿಚಾರದಿಂದ ಈ ಹಿಂದೆಯೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ದೂರ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಲೆಗೆ ತಲುಪಲು ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸೈಕಲ್‌ ನೀಡಲಾಗುತ್ತಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ ಮಾತನಾಡಿದರು

ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸಿ, ಕೇಂದ್ರ ಮತ್ತು ರಾಜ್ಯ ಸರಕಾರ ಎಲ್ಲಸರಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾದಷ್ಟು ಹಣ ಖರ್ಚು ಮಾಡುತ್ತಿದೆ ಎಂದರು

ಜಿಪಂ ಸದಸ್ಯ ಪಡಿಯಪ್ಪ ಪೂಜಾರ, ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಹೇಮಾವತಿ ಕಡದಳ್ಳಿ, ವೀರುಪಾಕ್ಷಗೌಡ ಪಾಟೀಲ, ಎಸ್‌.ಎಸ್‌.ಚನ್ನಪ್ಪಗೌಡ್ರ, ಎಂ.ಎ.ತರಪದಾರ, ಮುತ್ತಣ್ಣ ಲಿಂಗನಗೌಡ್ರ, ಅನೀಲಕುಮಾರ ಪಲ್ಲೇದ, ಮುತ್ತು ಕಡಗದ, ಶಿವಾನಂದ ಜಿಡ್ಡಿಬಾಗಿಲ,ರಾಮನಗೌಡ ಪಾಟೀಲ, ಭೀಮಶಿ ಮಾದರ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ