ಆ್ಯಪ್ನಗರ

ನೆರೆ ಭೀಕರತೆಗೆ ವಿದ್ಯುತ್‌ ಕಂಬ ಸಾಕ್ಷಿ ..!

​ನರಗುಂದ : ಕಂಡು, ಕೇಳರಿಯದ ಮಲಪ್ರಭಾ ಪ್ರವಾಹ ಉಕ್ಕಿ ಹರಿದಿದೆ. ಯಾವ ಮಟ್ಟಕ್ಕೆ ಪ್ರವಾಹ ಏರಿ ಬಂತು ಎಂಬುದಕ್ಕೆ ಸಾಕ್ಷಿಯಾಗಿ ವಿದ್ಯುತ್‌ ಕಂಬವೊಂದು ಪ್ರವಾಹದ ಮಟ್ಟ ತೋರಿಸುತ್ತಿದೆ.

Vijaya Karnataka 18 Aug 2019, 5:00 am
ಪ್ರಭು ಗುಡಾರದ
Vijaya Karnataka Web GDG-14NRD4

ನರಗುಂದ : ಕಂಡು, ಕೇಳರಿಯದ ಮಲಪ್ರಭಾ ಪ್ರವಾಹ ಉಕ್ಕಿ ಹರಿದಿದೆ. ಯಾವ ಮಟ್ಟಕ್ಕೆ ಪ್ರವಾಹ ಏರಿ ಬಂತು ಎಂಬುದಕ್ಕೆ ಸಾಕ್ಷಿಯಾಗಿ ವಿದ್ಯುತ್‌ ಕಂಬವೊಂದು ಪ್ರವಾಹದ ಮಟ್ಟ ತೋರಿಸುತ್ತಿದೆ.

ಈ ವಿದ್ಯುತ್‌ ಕಂಬ ಇರುವುದು ಜಲಾವೃಗೊಂಡ ಹಳೆ ಬೂದಿಹಾಳಕ್ಕೆ ಹೋಗುವ ದಾರಿ ಪಕ್ಕ. ಸುಮಾರು 20 ಅಡಿ ಎತ್ತರದಲ್ಲಿ ಪ್ರವಾಹದ ನೀರು ಆವರಿಸಿತ್ತು ಎಂಬುದನ್ನು ವಿದ್ಯುತ್‌ ಕಂಬದ ಅಂಚಿಗೆ ಸಿಲುಕೊಂಡ ಟೆಂಗಿನ ಗರಿಯೆ ಸಾಕ್ಷಿಯಾಗಿದೆ.

ಹಳೆ ಬೂದಿಹಾಳದಲ್ಲಿರುವ ಮನೆಗಳು ಸಂಪೂರ್ಣ ಜಲಾವೃತಗೊಂಡು ಗೂಡಿಸಿಗುಂಡಾರ ಮಾಡಿದೆ. 200 ಮೀಟರ್‌ ಉದ್ದ ಗ್ರಾಮದ ಸಂಪರ್ಕ ರಸ್ತೆ ಕೊಚ್ಚಿ ಹೋಗಿದ್ದು ಜೆಸಿಬಿಯಿಂದ ತಾತ್ಕಾಲಿಕ ದುರಸ್ತಿ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರನ್ನು ಕೇಳಿದಾಗ, ವಿದ್ಯುತ್‌ ಕಂಬಗಳು ನೆರೆಯಲ್ಲಿ ಮುಳುಗಿದ್ದವು. ಇಂತಹ ಪ್ರವಾಹ ನೋಡಿಲ್ಲ, ಕೇಳಿಯೂ ಇಲ್ಲ ಎಂದು 80 ವರ್ಷದ ವಯೋವೃದ್ದರೊಬ್ಬರು ಹೇಳಿದರು.

1950 ರ ಆಸು ಪಾಸಿನಲ್ಲಿ ನವೀಲು ತೀರ್ಥದ ಜಲಾಶಯ ನಿರ್ಮಾಣವಾಗುವುದಕ್ಕು ಮೊದಲು ಗ್ರಾಮಕ್ಕೆ ಹೊಂದಿಕೊಂಡು ಪ್ರವಾಹ ಬಂದಿದ್ದನ್ನು ಕೇಳಿದ್ದೇವೆ. ಶತಮಾನಗಳಿಂದ ಇಂತಹ ಪ್ರವಾಹ ಬಂದಿಲ್ಲ. 1972ರಲ್ಲಿ ನಿರ್ಮಾಣಗೊಂಡ ನವೀಲು ತೀರ್ಥದ ಜಲಾಶಯ ಇತಿಹಾಸದಲ್ಲೆ ಮೊದಲ ಭಾರಿಗೆ ದೊಡ್ಡ ಮಳೆ ಸುರಿದು ಒಂದು ಲಕ್ಷ ಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಮಲಪ್ರಭೆ ಬಂದಿದ್ದು ಅಷ್ಟೆ ನೀರು ಹೊರ ಬಿಟ್ಟಿರುವುದು ಇದೆ ಮೊದಲು. ಇದರಿಂದ ಪ್ರವಾಹದ ಸ್ಥಿತಿ ಅರಿಯದ ಗ್ರಾಮಸ್ಥರು ಊರು ತೊರೆದು ಹೋಗಲು ಹಿಂದೇಟು ಹಾಕಿದ್ದು, ಕೊಣ್ಣೂರ ಸೇರಿದಂತೆ ಐದು ಗ್ರಾಮಗಳು ಮುಳುಗಿ ಹೋದ ಘಟನೆ ಇತಿಹಾಸ ಸೇರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ