ಆ್ಯಪ್ನಗರ

ನೀರು ಪೋಲು ತಡೆಯಿರಿ: ಸಿ.ಸಿ.ಪಾಟೀಲ

ನರಗುಂದ : ತಾಲೂಕಿನಲ್ಲಿ 24*7 ನೀರು ಪೂರೈಕೆಯಾಗುತ್ತಿದ್ದು ನೀರಿನ ಪೋಲು ಹೆಚ್ಚಾಗಿದೆ, ನಲ್ಲಿಗಳಿಗೆ ಕಾಕ್‌ ಜೋಡಿಸಲು ಕ್ರಮ ಕೈಗೊಂಡು ನೀರಿನ ಸದ್ಬಳಕೆ ಮಾಡಿ ಎಂದು ಶಾಸಕ ಸಿ.ಸಿ.ಪಾಟೀಲ ಮನವಿ ಮಾಡಿಕೊಂಡರು.

Vijaya Karnataka 12 Jun 2019, 5:00 am
ನರಗುಂದ : ತಾಲೂಕಿನಲ್ಲಿ 24*7 ನೀರು ಪೂರೈಕೆಯಾಗುತ್ತಿದ್ದು ನೀರಿನ ಪೋಲು ಹೆಚ್ಚಾಗಿದೆ, ನಲ್ಲಿಗಳಿಗೆ ಕಾಕ್‌ ಜೋಡಿಸಲು ಕ್ರಮ ಕೈಗೊಂಡು ನೀರಿನ ಸದ್ಬಳಕೆ ಮಾಡಿ ಎಂದು ಶಾಸಕ ಸಿ.ಸಿ.ಪಾಟೀಲ ಮನವಿ ಮಾಡಿಕೊಂಡರು.
Vijaya Karnataka Web GDG-11NRD2
ನರಗುಂದ ಬನಹಟ್ಟಿಯಲ್ಲಿ ಜಲಾಮೃತ ಜನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ಶಾಸಕ ಸಿ.ಸಿ.ಪಾಟೀಲ.


ತಾಲೂಕಿನ ಬನಹಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ತಾಲೂಕಾ ಮಟ್ಟದ ಸ್ವಚ್ಚ ಮೇವ ಜಯತೆ ಹಾಗೂ ಜಲಾಮೃತ ಜನಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರು ಹರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ನೀರನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿ ಹರಿದು ಹೋದರೆ ಮುಂದಿನ ಪೀಳಿಗೆಗೆ ಕೆಟ್ಟ ದಿನಗಳನ್ನು ಬಿಟ್ಟು ಹೋಗಬೇಕಾಗುತ್ತದೆ, ಈಗಲೇ ಜಾಗೃತರಾಗಿ ಪರಿಸರ ರಕ್ಷ ಣೆ ಮಾಡಿ, ನೀರು ಪೋಲು ತಡೆಯಿರಿ, ಗ್ರಾಪಂ ಅಧಿಕಾರಿಗಳು ನಲ್ಲಿಗಳಿಗೆ ಕ್ಯಾಪ್‌ ಹಾಕಲು ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿದ್ದ ಸೊಲಬಯ್ಯ ಸ್ವಾಮಿಗಳು, ಅಧ್ಯಕ್ಷ ತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಈಶ್ವರಗೌಡ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಕನಕರಡ್ಡಿ, ನಿವೃತ್ತ ಶಿಕ್ಷ ಕ ಬಿ.ಬಿ.ಕುಂಬಾರ ಪರಿಸರ ರಕ್ಷ ಣೆ ಎಲ್ಲರ ಹೋಣೆ ಇದೆ ಎಂದರು. ವೇದಿಕೆ ಮೇಲೆ ಉಪಾಧ್ಯಕ್ಷ ಶಿವಪ್ಪ ಬ್ಯಾಹಟ್ಟಿ, ಎಪಿಎಂಸಿ ಅಧ್ಯಕ್ಷ ಹನಮಂತ ಹದಗಲ್ಲ, ಸಹಾಯಕ ಕೃಷಿ ನಿರ್ದೇಶಕ ಚೆನ್ನಪ್ಪ ಅಂಗಡಿ, ಎಂ.ಎಸ್‌.ಪಾಟೀಲ, ಜಿ.ಎಸ್‌.ಆದೆಪ್ಪನವರ, ಚಂದ್ರು ದಂಡಿನ, ಈರಮ್ಮ ಜೋಗಿ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ