ಆ್ಯಪ್ನಗರ

ಮುದ್ರಣ ಕಾಶಿಯಲ್ಲಿ ಪ್ರಿಂಟಿಂಗ್‌ ಸ್ತಬ್ಧ

​ಮುಂಡರಗಿ: ಮುದ್ರಣ ಕಾಶಿ ಗದಗನಲ್ಲಿಪ್ರಿಂಟಿಂಗ್‌ ಸದ್ದು ಸ್ತಬ್ಧವಾಗಿದೆ. ಲಾಕ್‌ಡೌನ್‌ ನಿಂದಾಗಿ ಮುದ್ರಣ ಉದ್ಯಮ ಸಂಪೂರ್ಣ ನೆಲಕ್ಕಚ್ಚಿದ್ದು, ಪ್ರಿಂಟಿಂಗ್‌ ಪ್ರೆಸ್‌ ಮಾಲೀಕರು, ಪ್ರಕಾಶಕರು, ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ.

Vijaya Karnataka 12 May 2020, 5:00 am
ಸಿ.ಕೆ.ಗಣಪ್ಪನವರ
Vijaya Karnataka Web printing is quiet in the printing area
ಮುದ್ರಣ ಕಾಶಿಯಲ್ಲಿ ಪ್ರಿಂಟಿಂಗ್‌ ಸ್ತಬ್ಧ

ಮುಂಡರಗಿ: ಮುದ್ರಣ ಕಾಶಿ ಗದಗನಲ್ಲಿಪ್ರಿಂಟಿಂಗ್‌ ಸದ್ದು ಸ್ತಬ್ಧವಾಗಿದೆ. ಲಾಕ್‌ಡೌನ್‌ ನಿಂದಾಗಿ ಮುದ್ರಣ ಉದ್ಯಮ ಸಂಪೂರ್ಣ ನೆಲಕ್ಕಚ್ಚಿದ್ದು, ಪ್ರಿಂಟಿಂಗ್‌ ಪ್ರೆಸ್‌ ಮಾಲೀಕರು, ಪ್ರಕಾಶಕರು, ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ.

ಬೆಂಗಳೂರು, ಮಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿಅತಿ ಹೆಚ್ಚು ಮುದ್ರಣ ಯಂತ್ರಗಳು, ಪ್ರಕಾಶಕರು ಗದಗನಲ್ಲಿದ್ದಾರೆ. ಲಗ್ನಪತ್ರಿಕೆ, ಆಮಂತ್ರಣ ಪತ್ರಿಕೆ ಜತೆಗೆ ಪುಸ್ತಕ, ಗೈಡ್‌, ಕ್ಯಾಲೆಂಡರ್‌ ಮುದ್ರಣ ವರ್ಷಪೂರ್ತಿ ನಡೆಯುತ್ತಿತ್ತು.

ಗದಗ -ಬೆಟಗೇರಿ ಅವಳಿ ನಗರದಲ್ಲಿ120 ಮುದ್ರಣ ಯಂತ್ರಗಳಿವೆ. ಜಿಲ್ಲೆಯಲ್ಲಿಸುಮಾರು 160 ಕ್ಕೂ ಹೆಚ್ಚು ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆಪ್‌ಸೆಟ್‌ ಪ್ರಿಂಟಿಂಗ್‌ ಪ್ರೆಸ್‌, ಡಿಜಿಟಲ್‌, ಸ್ಕ್ರೀನ್‌ ಪ್ರಿಂಟಿಂಗ್‌, ಕ್ಯಾಲೆಂಡರ್‌, ಡಿಕ್ಷನರಿ, ವಿವಿಧ ಕ್ವಿಜ್‌ ಬುಕ್‌ಗಳು, ಕತೆ, ನಾಟಕ ಪುಸ್ತಕಗಳ ಪ್ರಕಟಣೆ ಈಗ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಮಾಲೀಕರು, ಕೆಲಸಗಾರರು ನಿರುದ್ಯೋಗಿಗಳಾಗಿದ್ದಾರೆ.

ಪಠ್ಯ ಪುಸ್ತಕ ಪ್ರಕಟಣೆ ಬಂದ್‌ :
ಗದಗನಲ್ಲಿ10ಕ್ಕೂ ಹೆಚ್ಚು ದೊಡ್ಡ ಪ್ರಕಾಶಕರು, ಮುದ್ರಕರು ಕ್ಯಾಲೆಂಡರ್‌, ಗೈಡ್‌, ಪಠ್ಯ ಪುಸ್ತಕಗಳನ್ನು ಮುದ್ರಿಸಿ ರಾಜ್ಯಾದ್ಯಂತ ಸರಬರಾಜು ಮಾಡುತ್ತಾರೆ. ಸರಕಾರ ಪೂರೈಸುವ ಪಠ್ಯವೂ ಗದಗನಲ್ಲಿಮುದ್ರಣವಾಗುತ್ತದೆ. ಆದರೆ ಕೊರೊನಾ ಲಾಕ್‌ಡೌನ್‌ ಕಾರಣದಿಂದ ಪಠ್ಯಪುಸ್ತಕ ಮುದ್ರಣ ಆರಂಭವಾಗಿಲ್ಲ.

600 ಕುಟುಂಬಗಳು ಬೀದಿಗೆ
ಜಿಲ್ಲೆಯಲ್ಲಿ160ಕ್ಕೂ ಹೆಚ್ಚು ಮುದ್ರಣ ಯಂತ್ರಗಳಿವೆ. ಡಿಟಿಪಿ ಆಪರೇಟರ್‌, ಪ್ರಿಂಟರ್‌, ಬೈಂಡರ್‌ ಸಹಿತ 600ಕ್ಕೂ ಹೆಚ್ಚು ಕುಟುಂಬಗಳ ಈ ಉದ್ಯಮ ಅವಲಂಬಿಸಿದೆ. ಈ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ ಎನ್ನುತ್ತಾರೆ ಪ್ರಕಾಶಕ ಬಸವರಾಜ ಶಾಬಾದಿಮಠ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ