ಆ್ಯಪ್ನಗರ

ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರರ ರಕ್ಷಣೆ

ನರಗುಂದ: ಕ್ಷಣ ಕ್ಷಣಕ್ಕೂ ನದಿ ಪ್ರವಾಹ ಏರುತ್ತಿರುವ ಸಂದರ್ಭದಲ್ಲಿಕೊಣ್ಣೂರು ಬಳಿ ಹುಬ್ಬಳ್ಳಿ -ವಿಜಯಪುರ ಹೆದ್ದಾರಿ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರು ದಾಟಲು ಹೋಗಿ ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರರಿಬ್ಬರನ್ನು ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

Vijaya Karnataka 9 Sep 2019, 5:00 am
ನರಗುಂದ: ಕ್ಷಣ ಕ್ಷಣಕ್ಕೂ ನದಿ ಪ್ರವಾಹ ಏರುತ್ತಿರುವ ಸಂದರ್ಭದಲ್ಲಿಕೊಣ್ಣೂರು ಬಳಿ ಹುಬ್ಬಳ್ಳಿ -ವಿಜಯಪುರ ಹೆದ್ದಾರಿ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರು ದಾಟಲು ಹೋಗಿ ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರರಿಬ್ಬರನ್ನು ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
Vijaya Karnataka Web 8NRD1B_25
ಕೊಣ್ಣೂರ ಸೇತುವೆ ಪಕ್ಕದ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು ದಾಟಲು ಹೋಗುತ್ತಿದ್ದ ಬೈಕ್‌ ಸವಾರರನ್ನು ಜೆಸಿಬಿ ಚಾಲಕ ಹಾಗೂ ಯುವಕರು ರಕ್ಷಿಸಿದರು.


ಕೊಣ್ಣೂರಲ್ಲಿಮಲಪ್ರಭಾ ನದಿಗೆ ಅಡ್ಡಲಾಗಿರುವ ಹುಬ್ಬಳ್ಳಿ -ವಿಜಯಪುರ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದಾಗ ಕೊಣ್ಣೂರಿನಿಂದ ಗೋವನಕೊಪ್ಪಕ್ಕೆ ಹೋಗುವ ಜನ ಹರಿಯುವ ನೀರಲ್ಲಿಕೈ ಹಿಡಿದು ದಾಟಿದ್ದಾರೆ. ಬೈಕ್‌ ಸವಾರರು ಮೊಣಕಾಲುದ್ದ ಹರಿಯುವ ನೀರಲ್ಲಿದಾಟಿದ್ದಾರೆ. ಆದರೆ ಜೆಸಿಬಿಯಿಂದ ರಸ್ತೆಗೆ ಅಡ್ಡಲಾಗಿ ಹರಿ ತೋಡಿದ್ದರಿಂದ ಜನರಿಗೆ ಹೋಗದಂತೆ ಎಚ್ಚರಿಕೆ ನೀಡಿದರೂ ಕಲ್ಲಾಪುರದ ಉಮೇಶ ಹಾಗೂ ಪ್ರವೀಣ ಎಂಬ ಯುವಕರು ಬೈಕ್‌ ಹತ್ತಿ ನೀರು ದಾಟಲು ಹೋಗಿ ಬಿದ್ದಿದ್ದಾರೆ. ಕೊಚ್ಚಿ ಹೋಗುವಷ್ಟರಲ್ಲಿತಕ್ಷಣ ಪಕ್ಕದಲ್ಲಿದ್ದ ಜೆಸಿಬಿ ಚಾಲಕ ಸದ್ದಾಂ ಬೈಕ್‌ ಸವಾರರನ್ನು ಕೈ ಹಿಡಿದು ರಕ್ಷಿಸಿದ್ದಾರೆ. ಜತೆಗೆ ನೀರಿನ ಸೆಳೆವಿಗೆ ಕೊಚ್ಚಿ ಹೋಗುತ್ತಿದ್ದ ಬೈಕ್‌ನ್ನು ಮೂರ್ನಾಲ್ಕು ಜನ ಕೈ ಕೈ ಹಿಡಿದು ಮೇಲಕ್ಕೆ ಎಳೆದು ತಂದು ರಕ್ಷಿಸಿದರು.

ನವೀಲುತೀರ್ಥ ಜಲಾಶಯದಿಂದ ಹೆಚ್ಚುವರಿ ನೀರು ಹರಿಬಿಡಲಾಗಿದೆ. ಪರಿಣಾಮ ಕೊಣ್ಣೂರು ಪಕ್ಕದ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ.

ಜೆಸಿಬಿಯಿಂದ ರಸ್ತೆ ಕಡಿದು ನೀರು ಸರಾಗವಾಗಿ ಹರಿದು ಹೋಗಲು ಹರಿ ಮಾಡುತ್ತಿರುವ ಸಂದರ್ಭದಲ್ಲಿಈ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ