ಆ್ಯಪ್ನಗರ

ಪೌರತ್ವ ತಿದ್ದುಪಡಿಗೆ ವಿರೋಧಿಸಿ ಪ್ರತಿಭಟನೆ

ಲಕ್ಷ್ಮೇಶ್ವರ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪಟ್ಟಣದಲ್ಲಿಮುಸ್ಲಿಂ ಸಮುದಾಯದ ನಾನಾ ಸಂಘಟನೆಗಳು ಹಾಗೂ ಅಂಬೇಡ್ಕರ ಸೇನೆ ವತಿಯಿಂದ ಶನಿವಾರ ಬೃಹತ್‌ ಪ್ರತಿಭಟನೆ ಮಾಡಿ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 12 Jan 2020, 5:00 am
ಲಕ್ಷ್ಮೇಶ್ವರ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪಟ್ಟಣದಲ್ಲಿಮುಸ್ಲಿಂ ಸಮುದಾಯದ ನಾನಾ ಸಂಘಟನೆಗಳು ಹಾಗೂ ಅಂಬೇಡ್ಕರ ಸೇನೆ ವತಿಯಿಂದ ಶನಿವಾರ ಬೃಹತ್‌ ಪ್ರತಿಭಟನೆ ಮಾಡಿ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web protest against citizenship amendment
ಪೌರತ್ವ ತಿದ್ದುಪಡಿಗೆ ವಿರೋಧಿಸಿ ಪ್ರತಿಭಟನೆ


ಪಟ್ಟಣದ ಶಿಗ್ಲಿರಸ್ತೆಯಲ್ಲಿಅಂಜುಮನ್‌ ಕಮೀಟಿ, ದೂದನಾನಾ ಕಮೀಟಿ, ವೀರಕನ್ನಡಿಗ ಟಿಪ್ಪು ಸೇನೆ, ಅಂಬೇಡ್ಕರ ಸೇನೆ ಸೇರಿದಂತೆ ಮುಸ್ಲಿಂ ಸಮುದಾಯದವರು ಸೇರಿ ಪೌರತ್ವ ತಿದ್ದುಪಡಿ ವಿರೋಧದ ನಾಮಫಲಕ ಕೈಯಲ್ಲಿಹಿಡಿದು ಕೇಂದ್ರ ಸರಕಾರದ ವಿರುದ್ದ ಹಾಗೂ ಪೌರತ್ವ ತಿದ್ದುಪಡಿ ವಿರುದ್ದ ಘೋಷಣೆ ಕೂಗಿದರು.

ಅಂಜುಮನ್‌ ಕಮೀಟಿ ಅಧ್ಯಕ್ಷ ಅನ್ವರಸಾಬ ಹವಾಲ್ದಾರ , ಅಂಬೇಡ್ಕರ ಸೇನೆ ಅಧ್ಯಕ್ಷ ರಾಮು ಗಡದವರ, ಸೋಮಣ್ಣ ಬೆಟಗೇರಿ, ಅಫೀಜ್‌ ಮಹಮ್ಮದ ಮಂಜಲಾಪುರ ಮಾತನಾಡಿ, ಮೊದಲು ಮನುಷ್ಯರಾಗಬೇಕು ಮನುಷ್ಯತ್ವ ಇಲ್ಲದವರಿಗೆ ಮನುಷ್ಯರ ನೋವು ಅರ್ಥವಾಗುವುದಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್‌ ಎಂದು ಜಾತಿ ಮಾಡದೇ ನಾವೆಲ್ಲರೂ ಭಾರತೀಯರು ನಾವು ಭಾರತೀಯರಾಗಿ ಹುಟ್ಟಿದ್ದು ಭಾರತದಲ್ಲಿಯೇ ಸಾಯುತ್ತೇವೆ. ನಮಗೆ ಯಾವುದೇ ಪೌರತ್ವ ಅವಶ್ಯಕತೆ ಇಲ್ಲ. ನಾವು ಭಾರತೀಯರಿದ್ದೇವೆ. ಕೇಂದ್ರ ಸರಕಾರ ಈ ಮೊದಲು ಬಾಬ್ರಿ ಮಸಿದಿ ಹಾಗೂ ರಾಮಮಂದಿರದ ವಿಷಯ ಇಟ್ಟುಕೊಂಡು ರಾಜಕೀಯ ಮಾಡಿತ್ತು. ಈಗ ಪೌರತ್ವ ತಿದ್ದುಪಡಿ ಕಾಯ್ದೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ದಲಿತರು, ಮುಸ್ಲಿಮರು ಹಾಗೂ ಹಿಂದುಳಿದವರನ್ನು ತುಳಿಯಲು ಇಂತಹ ಕಾಯ್ದೆ, ಕಾನೂನು ತರಲಾಗುತ್ತಿದೆ ಎಂದರು.

ಸ್ವಾತಂತ್ರಕ್ಕಾಗಿ ಟಿಪ್ಪು ಸುಲ್ತಾನ ತಮ್ಮ ಮಕ್ಕಳನ್ನು ಒತ್ತೆ ಇಟ್ಟಿದ್ದಾರೆ. ಅನೇಕ ಮಹನಿಯರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅದರಂತೆ ದೇಶಕ್ಕಾಗಿ ಮುಸ್ಲಿಂ, ದಲಿತರ, ಹಿಂದುಳಿದವರ ಕೊಡುಗೆ ಅಪಾರವಾಗಿದೆ. ಭಾರತ ಸೌಹಾರ್ಧಕ್ಕೆ ಹೆಸರು ವಾಸಿಯಾಗಿರುವ ದೇಶವಾಗಿದ್ದು, ಭಾರತೀಯರು ನಾವೆಲ್ಲಒಂದೇ ನಮ್ಮಲ್ಲಿಜಾತಿ, ಮತ, ಭೇದ ಯಾವುದು ಇಲ್ಲ. ಎಲ್ಲರೂ ಒಂದಾಗಿ ಬಾಳಬೇಕು. ಪೌರತ್ವ ತಿದ್ದುಪಡಿ ಕಾಯಿದೆಯಿಂದ ಸಂವಿಧಾನ ವಿರೋಧವಾಗಿದ್ದು ಮತ್ತು ಜಾತಿ ತಾರತಮ್ಯ ಮಾಡಲಾಗುತ್ತಿದ್ದು ಈ ಕಾಯ್ದೆ ಶೀಘ್ರವೇ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದರು.

ಭದ್ರದ್ದಿನ ಸರಾಪಿ ಮಂಗಳೂರ, ಅಧೀಸ್‌ ಸಾಧಿಕ್‌ ಜಮಖಂಡಿ, ಸುಲೇಮಾನ ಕಣಕೆ, ಎನ್‌.ಎಂ.ಗದಗ, ಇಸ್ಮಾಯಿಲ್‌ ಆಡೂರ, ಜಾಕೀರ ಹುಸೇನ ಹವಾಲ್ದಾರ, ಇಬ್ರಾಹಿಂಸಾಬ ರಿತ್ತಿ, ಗೌಸುಸಾಬ ಕಾರಡಗಿ, ಅಬ್ದುಲ್‌ ಖಯ್ಯಮ ಗುಡಗೇರಿ, ಗೌಸುಸಾಬ ಕಾರಡಗಿ, ಜಮೀಲ ಸೂರಣಗಿ, ತಿಪ್ಪಣ್ಣ ಸಂಶಿ, ಚನ್ನಪ್ಪ ಜಗಲಿ, ನೀಲಪ್ಪ ಪಡಗೇರಿ, ಮುಸ್ತಾಕ ಶಿರಹಟ್ಟಿ, ಪೀರ್ಧೋಶ ಆಡೂರ, ಮುಕ್ತಾರ ಗದಗ, ದಾದಪೀರ ಮುಚ್ಚಾಲೆ ಸೇರಿದಂತೆ ಅಂಜುಮನ್‌ ಕಮೀಟಿ, ದೂದನಾನಾ ಕಮೀಟಿ, ವೀರಕನ್ನಡಿಗ ಟಿಪ್ಪು ಸೇನೆ, ಅಂಬೇಡ್ಕರ ಸೇನೆ ಪದಾಧಿಕಾರಿಗಳು ಹಾಗೂ ಮುಸ್ಲಿಂ ಸಮುದಾಯದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ