ಆ್ಯಪ್ನಗರ

ಟೋಲ್‌ ಗೇಟ್‌ ತೆರವಿಗೆ ಆಗ್ರಹಿಸಿ ಪ್ರತಿಭಟನೆ

ಗದಗ: ಮುಂಡರಗಿ ರಸ್ತೆಯಲ್ಲಿರುವ ಟೋಲ್‌ ಗೇಟ್‌ ತೆರವುಗೊಳಿಸಬೇಕು. ಮುಂಡರಗಿ ಮತ್ತು ಗದಗದಿಂದ ಇತರೆ ಹಳ್ಳಿಗಳಿಗೆ ಹೋಗುವ ಎಲ್ಲಬಸ್‌ ದರ ಕಡಿಮೆ ಮಾಡಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Vijaya Karnataka 11 Jun 2020, 5:00 am
ಗದಗ: ಮುಂಡರಗಿ ರಸ್ತೆಯಲ್ಲಿರುವ ಟೋಲ್‌ ಗೇಟ್‌ ತೆರವುಗೊಳಿಸಬೇಕು. ಮುಂಡರಗಿ ಮತ್ತು ಗದಗದಿಂದ ಇತರೆ ಹಳ್ಳಿಗಳಿಗೆ ಹೋಗುವ ಎಲ್ಲಬಸ್‌ ದರ ಕಡಿಮೆ ಮಾಡಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Vijaya Karnataka Web protest demanding toll gate clearance
ಟೋಲ್‌ ಗೇಟ್‌ ತೆರವಿಗೆ ಆಗ್ರಹಿಸಿ ಪ್ರತಿಭಟನೆ


ಜಿಲ್ಲೆಯ ಪಾಪನಾಶಿ ಊರಿನ ಹತ್ತಿರವಿರುವ ಟೋಲ್‌ ಗೇಟ್‌ ಅವೈಜ್ಞಾನಿಕವಾಗಿದೆ. ಸಂಪೂರ್ಣ ಎತ್ತರ ಪ್ರದೇಶದಲ್ಲಿಮತ್ತು ತಿರುವಿನಲ್ಲಿಈ ಟೋಲ್‌ ಗೇಟ ಇರುತ್ತದೆ. ಈ ಟೋಲ್‌ ಗೇಟ ಯಾರಿಗೂ ಕಾಣುವುದಿಲ್ಲ. ಗದಗದಿಂದ ಸುಮಾರು 10ಕೀಮಿ ದೂರವಿರುವ ಈ ಟೋಲ್‌ ಗೇಟ್‌ದಲ್ಲಿಸರಿಯಾದ ರಸ್ತೆ ನಿರ್ವಹಣೆ ಇಲ್ಲ. ಸಂಪೂರ್ಣ ರಸ್ತೆ ಹದಗೆಟ್ಟಿದೆ. ರಾಜ್ಯ ಹೆದ್ದಾರಿಗಳಲ್ಲಿಎಲ್ಲಿಯೂ ಇರದ ಟೋಲ್‌ ಗೇಟ್‌ ಇಲ್ಲೆಯಾಕೆ ಎಂದು ಆರೋಪಿಸಿದರು.

ಗದಗ ಹಾಗೂ ಮುಂಡರಗಿ ಜನರಿಗೆ ತೊಂದರೆಯಾಗುವ ಈ ಟೋಲ್‌ ಗೇಟ್‌ ಯಾಕೆ ಬೇಕು ಈ ಟೋಲ್‌ ಗೇಟ್‌ ಪ್ರಾರಂಭವಾದ ದಿನದಿಂದ ಗದಗ-ಮುಂಡರಗಿ ಮತ್ತು ಗದಗದಿಂದ ಇತರೆ ಹಳ್ಳಿಗಳಿಗೆ ಹೋಗುವ ಎಲ್ಲಬಸ್‌ ದರ ಏರಿಕೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.ಕೊರೊನಾದಂತಹ ಮಹಾಮಾರಿಯಿಂದ ಸಾಕಷ್ಟು ತೊಂದರೆಯಾಗಿದೆ. ಆದರೆ, ಮತ್ತೆ ಟೋಲ್‌ ಗೇಟ್‌ ಮತ್ತೆ ಪುನರಾಂಭವಾಗಿದೆ.

ಮಾರ್ಚ್ ತಿಂಗಳಿನಿಂದ ಸಂಪೂರ್ಣ ಲಾಕಡೌನ್‌ನಿಂದ ತತ್ತರಿಸಿ ಹೋಗಿರುವ ಜನರಿಗೆ ಉದ್ಯೋಗವಿಲ್ಲ. ಯಾವುದೇ ವ್ಯವಹಾರ ನಡೆಯುತ್ತಿಲ್ಲ. ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡಿದೆ. ಟ್ರಾನ್ಸ್‌ ಪೋರ್ಟ್‌ ವ್ಯವಹಾರ ನಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿಮತ್ತೆ ಈ ಟೋಲ್‌ನ್ನು ಪ್ರಾರಂಭಿಸಿರುವುದು ಖಂಡನೀಯವಾಗಿದೆ ಎಂದು ಆರೋಪಿಸಿದರು.

ಟೋಲ್‌ ಗೇಟ್‌ನಿಂದ ಡೋಣಿ, ಡಂಬಳ, ಪಾಪನಾಶಿ, ಕದಾಂಮಪುರ, ಮುಂಡರಗಿ ಹಾಗೂ ಅಕ್ಕಪಕ್ಕದ ಹಳ್ಳಿಗಳ ರೈತರು, ಸಾರ್ವನಿಕರು, ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಜನರಿಗೆ ಸಮಸ್ಯೆಯಾಗುವ ಟೋಲ್‌ ಗೇಟ್‌ ತೆರವುಗೊಳಿಸಿ ಸಾರ್ವಜನಿಕರು ನೆಮ್ಮದಿಯಿಂದ ಬದುಕುವ ಹಾಗೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಹಾಲಪ್ಪ ವರವಿ, ಚಂದ್ರಕಾಂತ ಚವ್ಹಾಣ, ರಮೇಶ ರಾಥೋಡ, ಈಶ್ವರ ಲಕ್ಷೆತ್ರ್ಮೕಶ್ವರ, ನಾಗರಾಜ ಕ್ಷತ್ರೀಯ, ಸಂಗು ಅಂಗಡಿ, ಶರೀಫ ಬೆನಕಲ, ಮಂಜು ಮೇಟಿ, ಚಂದ್ರು ಗುಗೇರಿ, ವಿಠ್ಠಲ ಬೆಂತೂರ, ಚಂದ್ರು ಖಾನಾಪೂರ, ಮಾರುತಿ ಕಟ್ಟಿಮನಿ, ಮೌನೇಶ, ಮೋಹನ ಮುರಳಿ, ಶೇಕಪ್ಪ ಕಟ್ಟಿಮನಿ, ಪುರೋಷತ್ತಮ, ಸಂಜು ಹುಲ್ಲೂರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ