Please enable javascript.ರೈತರಿಂದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ - Protesting from the farmers' office to the office - Vijay Karnataka

ರೈತರಿಂದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ವಿಕ ಸುದ್ದಿಲೋಕ 1 Jul 2017, 4:30 am
Subscribe

ಶಿರಹಟ್ಟಿ : ತಾಲೂಕು ಕೇಂದ್ರದಲ್ಲಿರುವ ಪಶು ಆಸ್ಪತ್ರೆಯಲ್ಲಿ ವೈದ್ಯ ಹಾಗೂ ಸಿಬ್ಬಂದಿ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭಿಸದೇ ಇರುವುದರಿಂದ ಬೆಲೆ ಬಾಳುವ ಎತ್ತುಗಳು ಸಾವನ್ನಪ್ಪುತ್ತಿವೆ ಇದಕ್ಕೆ ಯಾರು ಹೊಣೆ ? ಎಂದು ರೊಚ್ಚಿಗೆದ್ದ ನೂರಾರು ರೈತರು ಶುಕ್ರವಾರ ಆಸ್ಪತ್ರೆ ಎದುರು ಮೃತ ಎತ್ತು ಇಟ್ಟು ಸಂಚಾರ ಸ್ಥಗಿತಗೊಳಿಸಿ, ಕಚೇರಿಗೆ ಬೀಗ ಜಡಿದು ಬೃಹತ್‌ ಪ್ರತಿಭಟನೆ ನಡೆಸಿದರು.

protesting from the farmers office to the office
ರೈತರಿಂದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಶಿರಹಟ್ಟಿ : ತಾಲೂಕು ಕೇಂದ್ರದಲ್ಲಿರುವ ಪಶು ಆಸ್ಪತ್ರೆಯಲ್ಲಿ ವೈದ್ಯ ಹಾಗೂ ಸಿಬ್ಬಂದಿ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭಿಸದೇ ಇರುವುದರಿಂದ ಬೆಲೆ ಬಾಳುವ ಎತ್ತುಗಳು ಸಾವನ್ನಪ್ಪುತ್ತಿವೆ ಇದಕ್ಕೆ ಯಾರು ಹೊಣೆ ? ಎಂದು ರೊಚ್ಚಿಗೆದ್ದ ನೂರಾರು ರೈತರು ಶುಕ್ರವಾರ ಆಸ್ಪತ್ರೆ ಎದುರು ಮೃತ ಎತ್ತು ಇಟ್ಟು ಸಂಚಾರ ಸ್ಥಗಿತಗೊಳಿಸಿ, ಕಚೇರಿಗೆ ಬೀಗ ಜಡಿದು ಬೃಹತ್‌ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಎತ್ತಿನ ಮಾಲೀಕ ಸುಲೇಮಾನ ಅಣ್ಣಿಗೇರಿ ಮಾತನಾಡಿ, 4-5 ದಿವಸಗಳಿಂದ ಎತ್ತಿನ ಆರೋಗ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದು, ಶುಕ್ರವಾರವೂ ಸಹ ವೈದ್ಯರು ಇಲ್ಲದೇ ಇರುವುದರಿಂದ ಸಿಬ್ಬಂದಿ ಬೇಜವಾಬ್ದಾರಿ ತೋರಿದ್ದಕ್ಕೆ ಬೆಲೆ ಬಾಳುವ ಎತ್ತು ಕೊನೆಯುಸಿರೆಳಿದಿದ್ದು, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.

ನಂತರ ರೈತರಾದ ಅಶೋಕ ವಗ್ಗರ, ವಿ.ಎಂ.ಕಲ್ಯಾಣಿ, ಎಚ್‌.ಎಂ.ದೇವಗಿರಿ, ಚನ್ನಬಸನಗೌಡ ಪಾಟೀಲ, ಅಕ್ಬರಸಾಬ ಯಾದಗಿರಿ ಮಾತನಾಡಿ, ಕಳೆದ 3-4 ತಿಂಗಳುಗಳ ಹಿಂದೆಯೇ ತಾಲೂಕು ಪಶು ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಲಾಗಿತ್ತು, ಆದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಹೀಗೆಯೇ ಜಾನುವಾರುಗಳು ಮೃತಪಡುತ್ತಿವೆ. ಕೇಂದ್ರವು ದಿನೇ ದಿನೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತ ಜೂಜಾಟದ ಅಡ್ಡೆಯಾಗಿದೆ.

ತಾಲೂಕು ಕೇಂದ್ರದಲ್ಲಿರುವ ಸರಕಾರಿ ವಾಹನವನ್ನು ಇತ್ತೀಚೆಗೆ ಲಕ್ಷ್ಮೇಶ್ವರಕ್ಕೆ ನೀಡಿದ್ದು ಇದು ಯಾವ ನ್ಯಾಯ ? ಅದೇ ರೀತಿ ಆಸ್ಪತ್ರೆಯನ್ನೂ ಸ್ಥಳಾಂತರಿಸಿಬಿಡಿ, ವೈದ್ಯರು ಇಲ್ಲದೇ ಇರುವ ಕಚೇರಿಯಾದರೂ ಯಾಕೆ ಬೇಕು ? ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತ, ಕೂಡಲೇ ಕೇಂದ್ರಕ್ಕೆ ಸಮರ್ಪಕ ಸಿಬ್ಬಂದಿ ಪೂರೈಸಿ ಮೃತ ಎತ್ತಿಗೆ ಪರಿಹಾರ ನೀಡುವವರೆಗೂ ಮತ್ತು ಸ್ಥಳಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯಲು ಸಾಧ್ಯವಿಲ್ಲ ಎಂದರು.

ಘಟನಾ ಸ್ಥಳಕ್ಕೆ ಪಶು ಇಲಾಖೆ ಜಿಲ್ಲಾ ಉಪನಿರ್ದೆಶಕ ಎಸ್‌.ಎಸ್‌.ಪಾಟೀಲ ಆಗಮಿಸಿದಾಗ, ಸ್ವತಃ ರೈತರೆಲ್ಲರೂ ಆಸ್ಪತ್ರೆಯ ಅವ್ಯವಸ್ಥೆಯನ್ನು ತೋರಿಸುತ್ತ, ಸಿಬ್ಬಂದಿ ನಿರ್ಲಕ್ಷ ್ಯಕ್ಕೆ ಹಿಡಿಶಾಪ ಹಾಕುತ್ತ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದರು.

ಅಧಿಕಾರಿಯು ನನ್ನ ಹಂತದಲ್ಲಿ ಪರಿಹಾರ ವಿತರಣೆ ಸಾಧ್ಯವಿಲ್ಲ. ಕಳೆದ ಬಜೆಟ್‌ನಲ್ಲಿ ಸರಕಾರ ಪರಿಹಾರ ಘೋಷಣೆ ಮಾಡಿದ್ದು, ಇಲ್ಲಿಯವರೆಗೂ ನಮಗೆ ಯಾವ ಆದೇಶದ ಪ್ರತಿ ಲಭ್ಯವಿರುವುದಿಲ್ಲ. ತಕ್ಷ ಣ ಕೇಂದ್ರಕ್ಕೆ ನಿತ್ಯ ಲಭ್ಯವಿರುವ ಹಾಗೆ ಬೇರೆ ವೈದ್ಯರನ್ನು ನಿಯೋಜನೆಗೊಳಿಸಲಾಗುವುದು ಹಾಗೂ ಮೃತ ಎತ್ತಿನ ಮರಣೋತ್ತರ ಪರೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಹೇಳಿದರು.

ಸೋಮನಗೌಡ ಮರಿಗೌಡ್ರ, ರವಿ ಹಳ್ಳಿ, ರಾಜು ಶಿರಹಟ್ಟಿ, ಪರಶುರಾಮ ಹಾಲಪ್ಪನವರ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ