ಆ್ಯಪ್ನಗರ

ಆಶ್ರಯ ಫಲಾನುಭವಿಗಳ ಪ್ರತಿಭಟನೆ

ಗದಗ : ಇಲ್ಲಿಯ ಹೊರಲವಯದ ಗಂಗಿಮಡಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳ ವಿತರಣೆಯಲ್ಲಿ ರಾಜಕೀಯ ಮಾಡದೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಆಗ್ರಹಿಸಿ ಶನಿವಾರ ವಿವಿಧ ಹಿಂದುಳಿದ ಪ್ರದೇಶಗಳಲ್ಲಿನ ಫÜಲಾನುಭವಿಗಳು ಪ್ರತಿಭಟನೆ ನಡೆಸಿದರು.

Vijaya Karnataka 30 Jun 2019, 5:00 am
ಗದಗ : ಇಲ್ಲಿಯ ಹೊರಲವಯದ ಗಂಗಿಮಡಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳ ವಿತರಣೆಯಲ್ಲಿ ರಾಜಕೀಯ ಮಾಡದೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಆಗ್ರಹಿಸಿ ಶನಿವಾರ ವಿವಿಧ ಹಿಂದುಳಿದ ಪ್ರದೇಶಗಳಲ್ಲಿನ ಫÜಲಾನುಭವಿಗಳು ಪ್ರತಿಭಟನೆ ನಡೆಸಿದರು.
Vijaya Karnataka Web GDG-29RUDRAGOUD12


ಇಲ್ಲಿಯ ಒಕ್ಕಲಗೇರಿ ಪ್ರದೇಶದ ರಾಚೋಟೇಶ್ವರ ದೇವಾಲಯದಿಂದ ಪ್ರಾರಂಭವಾದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರಸಭೆಗೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ನಗರಸಭೆ ಹಾಗೂ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಂಚಾಕ್ಷ ರಿ ಅಂಗಡಿ ಮಾತನಾಡಿ, ಗಂಗಿಮಡಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ವೆಚ್ಚದಲ್ಲಿ ಕೇಂದ್ರ ಸರಕಾರ ಹೌಸಿಂಗ್‌ ಫಾರ್‌ ಆಲ್‌ ಯೋಜನೆಯಡಿ ಶೇ50 ರಷ್ಟು ಭರಿಸುತ್ತಿದೆ. ಆದರೆ ಕಾಂಗ್ರೆಸ್‌ ಬೆಂಬಲಿಗರು ಮಾತ್ರ ತಾವೇ ಈ ಯೋಜನೆಯ ಮಾಲಿಕರು, ಯೋಜನೆಯ ರೂವಾರಿಗಳೆಂಬಂತೆ ಹೇಳುತ್ತಿದ್ದಾರೆ. ಈ ಯೋಜನೆಗೆ ಕೇಂದ್ರ ಸರಕಾರ ಶೇ.50 ರಷ್ಟು ಹಣಕಾಸು ನೆರವು ನೀಡಿದ ಸಂಗತಿಯನ್ನು ಬಚ್ಚಿಡುತ್ತಿದ್ದಾರೆಂದು ಆರೋಪಿಸಿದರು.

ಯೋಜನೆಯಲ್ಲಿ ಪಾರದರ್ಶಕತೆ ಇರಲಿ:
ಕಾಂಗ್ರೆಸ್‌ ಕಾರ್ಯಕರ್ತರು ಅವಳಿ ನಗರದಲ್ಲಿ ತಮಗೆ ಬೇಕಾದವರಿಗೆ ಮನೆ ನೀಡುವುದಾಗಿ ಹೇಳುವ ಮೂಲಕ ಯೋಜನೆಯ ದುರ್ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸರಕಾರದ ಆರ್ಥಿಕ ನೆರವಿನಿಂದ ನಿರ್ಮಾಣವಾಗುತ್ತಿರುವ ಮನೆಗಳು ಈ ಹಿಂದಿನಂತೆ ಕೇವಲ ಕಾಂಗ್ರೆಸ್‌ ಕಾರ್ಯಕರ್ತರು, ಅವರ ಹಿಂಬಾಲಕ ಮರಿಪುಢಾರಿಗಳ ಪಾಲಾಗಬಾರದು. ಮನೆ ವಿತರಣೆಗೆ ಸರಕಾರ ರೂಪಿಸಿದ ಮಾನದಂಡಗಳ ಪ್ರಕಾರವೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಪಾರದರ್ಶಕತೆ ಅನುಸರಿಸುವ ಮೂಲಕ ನಿಜವಾದ ವಸತಿರಹಿತರಿಗೆ ಮನೆಗಳು ದೊರೆಯುವಂತಾಗಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ಎಚ್ಚರಿಕೆ:

ಒಂದು ವೇಳೆ ಈ ಹಿಂದೆ ಎಸ್‌.ಎಂ.ಕೃಷ್ಣಾ ನಗರದಲ್ಲಿನ ಆಶ್ರಯ ಮನೆ ವಿತರಣೆ ಸಂದರ್ಭದಲ್ಲಿ ಮಾಡಿದಂತೆ ಕೇವಲ ಕಾಂಗ್ರೆಸ್‌ ಕಾರ್ಯಕರ್ತರಿಗೆ, ಕಾಂಗ್ರೆಸ್‌ ಏಜೆಂಟರಿಗೆ ವಿತರಿಸಿದ್ದೇ ಆದಲ್ಲಿ ವಿವಿಧ ಸಂಘಟನೆಗಳ ಸಹಕಾರದಿಂದ ಅವಳಿ ನಗರದಲ್ಲಿ ಬೃಹತ್‌ ಪ್ರತಿಭಟನೆ, ಸರದಿ ಅನ್ನಸತ್ಯಾಗ್ರಹ, ಆಮರಣ ಉಪವಾಸದಂತಹ ಉಗ್ರ ಹೋರಾಟ ರೂಪಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಲಿಂಗನಗೌಡ ಪತ್ತಾರ, ಸೂಕ್ತ ಕ್ರಮಕ್ಕಾಗಿ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ರವಾನಿಸುವದಾಗಿ ಭರವಸೆ ನೀಡಿದರು.

ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ, ಸುರೇಶ ಹೆಬಸೂರ, ವಿನಾಯಕ ಕಿರೇಸೂರು, ಚೇತನ್‌ ಅಬ್ಬಿಗೇರಿ, ನಾಗರಾಜ ದೊಡ್ಡಮನಿ, ಅಂದಪ್ಪ ಕುಂಬಾರ,ಅರುಣ, ನಾಗರತ್ನಾ ಅಂಗಡಿ, ನೀಲಾ ಮೆಣಸಿನಕಾಯಿ, ಹಮೀದಾಬೇಗಂ ದಖನಿ, ಶಿವಲೀಲಾ ಮುಗುಳಿ, ಶೋಭಾ ಪಿಳ್ಳಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ