ಆ್ಯಪ್ನಗರ

ಮಕ್ಕಳಿಗೆ ಕಡುಬಿನ ಊಟ ಶ್ಲಾಘನೀಯ

ಹೊಳೆಆಲೂರ : ಹೊಸ ವರ್ಷದ ನಿಮಿತ್ತ ಮಕ್ಕಳಲ್ಲಿ ಶಾಲೆಯ ಬಗ್ಗೆ ವಿಶೇಷ ಆಸಕ್ತಿ, ಹೆಮ್ಮೆ ಬೆಳೆಯಲೆಂದು ಶಾಲೆಯ ಗುರುಗಳು ಮಕ್ಕಳಿಗೆ ಕೇಕ್‌ ಕತ್ತರಿಸಿ ತಿನ್ನಿಸಿದ್ದು ಹಾಗೂ ಕಡುಬಿನ ಊಟ ನೀಡುವ ನಿರ್ಧಾರ ಮಾಡಿದ್ದು ಶ್ಲಾಘನೀಯ ಕಾರ್ಯವೆಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಪಲ್ಲೇದ ಹೇಳಿದರು.

Vijaya Karnataka 2 Jan 2019, 5:00 am
ಹೊಳೆಆಲೂರ : ಹೊಸ ವರ್ಷದ ನಿಮಿತ್ತ ಮಕ್ಕಳಲ್ಲಿ ಶಾಲೆಯ ಬಗ್ಗೆ ವಿಶೇಷ ಆಸಕ್ತಿ, ಹೆಮ್ಮೆ ಬೆಳೆಯಲೆಂದು ಶಾಲೆಯ ಗುರುಗಳು ಮಕ್ಕಳಿಗೆ ಕೇಕ್‌ ಕತ್ತರಿಸಿ ತಿನ್ನಿಸಿದ್ದು ಹಾಗೂ ಕಡುಬಿನ ಊಟ ನೀಡುವ ನಿರ್ಧಾರ ಮಾಡಿದ್ದು ಶ್ಲಾಘನೀಯ ಕಾರ್ಯವೆಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಪಲ್ಲೇದ ಹೇಳಿದರು.
Vijaya Karnataka Web GDG-1HLR1A
ಹೊಳೆಆಲೂರಿನ ಸರಕಾರಿ ಹೆಣ್ಣು ಮಕ್ಕಳ ಕನ್ನಡ ಮಾದರಿ ಶಾಲೆಯಲ್ಲಿ ಹೊಸ ವರ್ಷದ ನಿಮಿತ್ತ ಮಕ್ಕಳಿಗೆ ಏರ್ಪಡಿಸಿದ್ದ ಸಿಹಿಯೂಟದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸುಮಂಗಲಾ ಕಾತರಕಿ ಮಕ್ಕಳಿಗೆ ಸಿಹಿ ಕಡುಬು ವಿತರಿಸಿದರು.


ಇಲ್ಲಿಯ ಸರಕಾರಿ ಹೆಣ್ಣು ಮಕ್ಕಳ ಕನ್ನಡ ಮಾದರಿ ಶಾಲೆಯಲ್ಲಿ ಹೊಸ ವರ್ಷದ ನಿಮಿತ್ತ ಮಕ್ಕಳಿಗೆ ಏರ್ಪಡಿಸಿದ್ದ ಸಿಹಿಯೂಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿ ಗ್ರಾಪಂ ಅಧ್ಯಕ್ಷೆ ಸುಮಂಗಲಾ ಕಾತರಕಿ ಮಕ್ಕಳಿಗೆ ಸಿಹಿ ಕಡುಬು ನೀಡಿ ಸಂತಸಪಟ್ಟರು. ಶಾಲಾ ಮುಖ್ಯೋಪಾಧ್ಯಾಯ ಮಹೇಶ ಕುರಿ ಮಾತನಾಡಿ, ಮಕ್ಕಳಲ್ಲಿ ಶಾಲೆಯ ಬಗ್ಗೆ ವಿಶೇಷ ಆಸಕ್ತಿ, ಶ್ರದ್ಧೆ ಮೂಡಿಸಲು ಶಾಲೆಯ ಶಿಕ್ಷ ಕರೆಲ್ಲ ಸೇರಿ ಈ ನಿರ್ಧಾರ ಮಾಡಿದೆವು. ಇದರಿಂದ ಮಕ್ಕಳ ಉಪಸ್ಥಿತಿಯಲ್ಲಿ ಹೆಚ್ಚಳ ಕಂಡು ಬಂದಿದೆಯಲ್ಲದೇ ಅವರೆಲ್ಲರೂ ಸಂತಸದಿಂದ ಊಟ ಮಾಡಿದ್ದು ನಮಗೆ ಖಷಿ ತಂದಿದೆ ಎಂದರು.

ಕೇಕ್‌ ಹಾಗೂ ಸಿಹಿಯೂಟದ ನಂತರ ವಿದ್ಯಾರ್ಥಿನಿಯರಾದ ಅನ್ನಪೂರ್ಣ ಮಾದರ, ಫೈರೋಜ ನೀರಲಗಿ, ಸಂಜನಾ ಬೆಳಗಲಿ, ಶಭಾನಾ ಮಟಗಾರ, ಲಕ್ಷ್ಮೀ ಭಜಂತ್ರಿ, ಸುಲೋಚನಾ ಮಹೇಂದ್ರಕರ ಹಾಗೂ ನೀಲಮ್ಮ ಗೋನಾಳ ಮಾತನಾಡಿ, ನಮ್ಮ ಶಾಲಾ ಗುರುಗಳು ಕೇಕ್‌ ಕಟ್‌ ಮಾಡಿ ನಮಗೆ ತಿನ್ನಿಸಿದ್ದು ಹುಟ್ಟು ಹಬ್ಬ ಆಚರಿಸಿದಂತಾಯಿತು. ಅಲ್ಲದೇ ಸಿಹಿ ಕಡುಬಿನ ಊಟ ಹಾಕಿಸಿದ್ದು ಹಬ್ಬದ ಸಡಗರವೆನ್ನಿಸಿತ್ತು, ನಮಗೆಲ್ಲ ತುಂಬಾ ಖುಷಿಯಾಯಿತೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷ ಕರಾದ ಎಸ್‌.ಎಂ.ಅಂಬಿಗೇರ, ಎಂ.ಓ. ಪಾಟೀಲ, ಜಿ.ಎಂ. ಕೆಲೂರ, ಎ ಎನ್‌ ಆಕಳದ, ಎಸ್‌ ಎಸ್‌ ಉಮಚಗಿ, ಎಸ್‌ ಎಮ್‌ ಅರಳಿಗಿಡದ ಹಾಗೂ ಬಿಸಿಯೂಟದ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ