ಆ್ಯಪ್ನಗರ

ಪುಲಿಗೇರಿ ಸೋಮನಾಥ ದೇವಸ್ಥಾನ 25ಕ್ಕೆ ಮಹಾದ್ವಾರ ನಿರ್ಮಾಣಕ್ಕೆ ಪೂಜೆ

ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಪುಲಿಗೆರೆಯ ಸೋಮನಾಥ ದೇವಸ್ಥಾನದ ಮಹಾದ್ವಾರವನ್ನು ಶಾಸಕ ರಾಮಣ್ಣ ಲಮಾಣಿ ನಿರ್ಮಿಸಿಕೊಡುವದಾಗಿ ಸೂಚಿಸಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ ಸಮಿತಿ ಹಿರಿಯ ಮುಖಂಡ ಸೋಮಣ್ಣ ಮುಳಗುಂದ ಹೇಳಿದರು.

Vijaya Karnataka 5 Oct 2020, 5:00 am
ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಪುಲಿಗೆರೆಯ ಸೋಮನಾಥ ದೇವಸ್ಥಾನದ ಮಹಾದ್ವಾರವನ್ನು ಶಾಸಕ ರಾಮಣ್ಣ ಲಮಾಣಿ ನಿರ್ಮಿಸಿಕೊಡುವದಾಗಿ ಸೂಚಿಸಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ ಸಮಿತಿ ಹಿರಿಯ ಮುಖಂಡ ಸೋಮಣ್ಣ ಮುಳಗುಂದ ಹೇಳಿದರು.
Vijaya Karnataka Web 4 LXR 2_25
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಸ್ವಾಗತದ ಮಹಾದ್ವಾರ ನಿರ್ಮಾಣಕ್ಕೆ ಒಪ್ಪಿಕೊಂಡಿರುವ ಶಾಸಕ ರಾಮಣ್ಣ ಲಮಾಣಿ ಅವರನ್ನು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಅಭಿನಂದಿಸಿದರು.


ಭಾನುವಾರ ಶಾಸಕ ರಾಮಣ್ಣ ಲಮಾಣಿ ನಿವಾಸಕ್ಕೆ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌, ಹಿರಿಯ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಮಹಾದ್ವಾರ ನಿರ್ಮಾಣದ ಭಕ್ತರ ಕನಸನ್ನು ಸಾಕಾರಗೊಳಿಸಬೇಕು. ಸೋಮೇಶ್ವರ ಮಹಾದ್ವಾರಕ್ಕೆ 18 ಲಕ್ಷ ರೂ.ವೆಚ್ಚ ಅಂದಾಜಿಸಲಾಗಿದೆ. ಈ ಕಾರ್ಯ ತಮ್ಮ ಸಹಕಾರದಿಂದ ಪ್ರಾರಂಭವಾಗಬೇಕು ಎಂದು ಮನವಿ ಮಾಡಿದಾಗ ಮನವಿಗೆ ಸ್ಪಂದಿಸಿದ ಶಾಸಕರು, ಇದಕ್ಕೆ ತಗುಲುವ ಪೂರ್ಣ ವೆಚ್ಚ ನಾನೇ ಭರಿಸುತ್ತೇನೆ ಎಂದು ಒಪ್ಪಿಗೆ ಸೂಚಿಸಿದ್ದರಿಂದ ಟ್ರಸ್ಟ್‌ನ ಮುಖಂಡರು, ಕಾರ್ಯಕರ್ತರು ಕುಂದ್ರಳ್ಳಿಯ ಅವರ ನಿವಾಸದಲ್ಲಿಯೇ ಅವರನ್ನು ಅಭಿನಂದಿಸಿದರು.

ಪಟ್ಟಣದ ಶಿವಯೋಗಿ ಅಂಕಲಕೋಟಿ ನಿವಾಸದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಮುಳಗುಂದ, ಪಟ್ಟಣದ ಬಹದಿನಗಳ ಬೇಡಿಕೆಯಾಗಿದ್ದ ಸೋಮೇಶ್ವರ ದೇವಸ್ಥಾನ ಪೂರ್ವ ಭಾಗದಲ್ಲಿಪಾಳಾ-ಬಾದಾಮಿ ರಸ್ತೆಗೆ ಹೊಂದಿಕೊಂಡಂತೆ ಸೋಮೇಶ್ವರ ಮಹಾದ್ವಾರ ನಿರ್ಮಾಣ ಕಾರ್ಯ ಕನಸು ಕೈಗೊಡಿರಲಿಲ್ಲ. ಈ ಮಹಾದ್ವಾರದ ಕಾರ್ಯವನ್ನು ಶಾಸಕ ರಾಮಣ್ಣ ಲಮಾಣಿ ಒಪ್ಪಿಕೊಂಡಿರುವುದು ಸಂತಸದ ಸಂಗತಿ ಎಂದರು.

ಅ.25ರಂದು ವಿಜಯ ದಶಮಿಯಂದು ಬೆಳಗ್ಗೆ 9ಕ್ಕೆ ಭೂಮಿ ಪೂಜೆ ಕಾರ್ಯವನ್ನು ಶಾಸಕ ರಾಮಣ್ಣ ಲಮಾಣಿಯವರು ನೆರವೇರಿಸುವ ಮೂಲಕ ಮಹಾದ್ವಾರ ನಿರ್ಮಾಣಕ್ಕೆ ಚಾಲನೆ ನೀಡುವರು ಎಂದು ಹೇಳಿದರು.

ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಸ್‌.ಪಿ.ಪಾಟೀಲ ಮಾತನಾಡಿ, ಸುಮಾರು 7 ವರ್ಷಗಳ ಕಾಲ ನೆನಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಶಾಸಕ ರಾಮಣ್ಣ ಲಮಾಣಿ ಒಪ್ಪಿಗೆ ಸೂಚಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.

ಚಂಬಣ್ಣ ಬಾಳಿಕಾಯಿ, ಸಿದ್ದನಗೌಡ ಬೊಳ್ಳೊಳ್ಳಿ, ಶಿವಯೋಗಿ ಅಂಕಲಕೋಟಿ, ಅಶ್ವೀನಿ ಅಂಕಲಕೋಟಿ, ಸುರೇಶ ರಾಚನಾಯ್ಕರ್‌, ರುದ್ರಪ್ಪ ನರೇಗಲ್‌, ಅಶೋಕಗೌಡ ಪಾಟೀಲ, ಸುರೇಶ ಚೌಕನವರ, ರಾಜಶೇಖರಯ್ಯ ಶಿಗ್ಲಿಮಠ, ಬಸವರಾಜ ಮೆಣಸಿನಕಾಯಿ, ದುಂಡೇಶ ಕೊಟಗಿ, ಪ್ರಕಾಶ ಮಾದನೂರ. ವಿಜಯ ಕುಂಬಾರ, ಬಸವರಾಜ ಚಕ್ರಸಾಲಿ, ವಿಶಾಲ್‌ ಬಟಗುರ್ಕಿ, ಗಂಗಾಧರ ಉಮಚಗಿ, ಶಂಕರ ಗುಡಗೇರಿ, ಅರುಣ ಪಾಟೀಲ, ಜಾಹೀರ್‌ ಮೋಮಿನ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ