ಆ್ಯಪ್ನಗರ

ಗುರ್ಲಕಟ್ಟಿ ಆಚಮಟ್ಟಿ ರಸ್ತೆಗೆ ಶೀಘ್ರ ಚಾಲನೆ

ನರಗುಂದ : ನರಗುಂದ ಗುರ್ಲಕಟ್ಟಿ ಮಾರ್ಗವಾಗಿ ಆಚಮಟ್ಟಿ ಗ್ರಾಮ ಸಂಪರ್ಕಿಸುವ ರಸ್ತೆ ಸುಧಾರಣೆಗೆ ಸದ್ಯದಲ್ಲೆ ಟೆಂಡರ್‌ ಕರೆದು ಚಾಲನೆ ನೀಡಲಾಗುವುದು. ಇದರಿಂದ ಸವದತ್ತಿ ಯಲ್ಲಮ್ಮಗುಡ್ಡಕ್ಕೆ ಹೋಗುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಸಿ.ಸಿ.ಪಾಟೀಲ ನುಡಿದರು.

Vijaya Karnataka 30 Dec 2018, 5:00 am
ನರಗುಂದ : ನರಗುಂದ ಗುರ್ಲಕಟ್ಟಿ ಮಾರ್ಗವಾಗಿ ಆಚಮಟ್ಟಿ ಗ್ರಾಮ ಸಂಪರ್ಕಿಸುವ ರಸ್ತೆ ಸುಧಾರಣೆಗೆ ಸದ್ಯದಲ್ಲೆ ಟೆಂಡರ್‌ ಕರೆದು ಚಾಲನೆ ನೀಡಲಾಗುವುದು. ಇದರಿಂದ ಸವದತ್ತಿ ಯಲ್ಲಮ್ಮಗುಡ್ಡಕ್ಕೆ ಹೋಗುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಸಿ.ಸಿ.ಪಾಟೀಲ ನುಡಿದರು.
Vijaya Karnataka Web quick drive to gurkalkatti achamatti road
ಗುರ್ಲಕಟ್ಟಿ ಆಚಮಟ್ಟಿ ರಸ್ತೆಗೆ ಶೀಘ್ರ ಚಾಲನೆ


ತಾಲೂಕಿನ ಗುರ್ಲಕಟ್ಟಿ ಮಾರುತಿ ದೇವಸ್ಥಾನದಲ್ಲಿ ಕಲಕೇರಿ ಕಣಕಿಕೊಪ್ಪ ರಸ್ತೆ ಸುಧಾರಣೆ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 3 ಕೋಟಿ ಅನುದಾನದಲ್ಲಿ ಕಲಕೇರಿ ಕಣಕಿಕೊಪ್ಪ 3 ಕಿ.ಮೀ. ರಸ್ತೆ ಸುಧಾರಣೆಗೆ ಚಾಲನೆ ನೀಡಲಾಗಿದ್ದು, ಹೆಚ್ಚುವರಿ 5ಕಿ.ಮೀ. ನರಗುಂದ ಗುರ್ಲಕಟ್ಟಿ ರಸ್ತೆ ಸುಧಾರಣೆ ಮಾಡಿಕೊಡುವ ಭರವಸೆ ನೀಡಿದರು.

5 ಕೋಟಿ ವೆಚ್ಚದಲ್ಲಿ ಹದಲಿ ಗ್ರಾಮದ ಮತ್ತು ಗುರ್ಲಕಟ್ಟಿ ಗ್ರಾಮದ ರಸ್ತೆ ಕಾಮಗಾಯನ್ನು ತಡೆಹಿಡಿಯಲಾಗಿತ್ತು. ಈ ಕುರಿತು ಸಚಿವ ಎಚ್‌.ಡಿ.ರೇವಣ್ಣ ಅವರ ಗಮನಕ್ಕೆ ತಂದು ಬಿಡುಗಡೆಗೊಳಿಸಿ ಚಾಲನೆ ನೀಡಲಾಗಿದೆ. ಕಾಲುವೆ ಮೂಲಕ ಕೆರೆ ಭರಿಸಲು ಪೈಪ್‌ಲೈನ್‌ ಅಳವಡಿಸಲು ಅನುದಾನ ನೀಡುವ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಶೇಖರಗೌಡ ಮುದ್ನೂರ, ಜಿಪಂ ಮಾಜಿ ಅಧ್ಯಕ್ಷ ಎಂ.ಎಸ್‌.ಪಾಟೀಲ ಮಾತನಾಡಿ, ಶಾಸಕ ಸಿ.ಸಿ.ಪಾಟೀಲರು ಬಂದ ನಂತರ ಅಭಿವೃದ್ದಿಗೆ ಚಾಲನೆ ದೊರೆತಿದೆ. ಸಮ್ಮಿಶ್ರ ಸರ್ಕಾರದಲ್ಲೂ ಅನುದಾನ ತಂದು ಅಭಿವೃದ್ದಿಗೆ ಮುಂದಾಗಿದ್ದಾರೆ ಎಂದರು.

ವೇದಿಕೆ ಮೇಲೆ ಜಿಪಂ ಸದಸ್ಯೆ ರೇಣುಕಾ ಅವರಾದಿ, ಗ್ರಾಪಂ ಉಪಾಧ್ಯಕ್ಷೆ ಮಾಹಾದೇವಿ ಕೌಜಗೇರಿ, ಮಂಜುಳಾ ಮಾದರ, ಶಂಭುಲಿಂಗಯ್ಯ ಹಿರೇಮಠ, ತಾಪಂ ಸದಸ್ಯೆ ಅನ್ನಪೂರ್ಣಾ ಹೂಗಾರ, ಮಂಜುಳಾ ಮಾದರ, ಯಲ್ಲಪ್ಪಗೌಡ ಪಾಟೀಲ, ಆರ್‌.ಎಸ್‌.ಪಾಟೀಲ, ಎಸ್‌.ಎಸ್‌.ಬಾಳನಗೌಡ್ರ, ಜಿ.ಕೆ.ಹುಡೇದಮನಿ, ಅನಿಲ ಧರೆಯಣ್ಣವರ, ಕೆ.ಎಸ್‌.ಪಾಟೀಲ, ರಾಮರಡ್ಡಿ ರಂಗರಡ್ಡಿ, ಗುತ್ತಿಗೆದಾರ ಎಂ.ಬಿ.ವೀರನಗೌಡ್ರ, ಎಸ್‌.ಬಿ.ಅಬ್ಬಿಗೇರಿ ಮುಂತಾದವರಿದ್ದರು. ಎಸ್‌.ಎಸ್‌.ಕರಿಗೌಡ್ರ ನಿರೂಪಿಸಿದರು. ಮಾದೇವಗೌಡ ಬಾಳನಗೌಡ್ರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ