ಆ್ಯಪ್ನಗರ

ರೈಲು ಯೋಜನೆ , ಜಿಲ್ಲೆಗೆ ಅನ್ಯಾಯ

ನರೇಗಲ್ಲ: ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಗದಗ ಜಿಲ್ಲೆನಿರೀಕ್ಷಿತ ಪ್ರಮಾಣದಲ್ಲಿಅಭಿವೃದ್ಧಿಯಾಗದಿರಲು ಕಾರಣವಾಗಿದ್ದು ಬ್ರಿಟಿಷ್‌ ಸರಕಾರದಿಂದ ರೂಪಿತವಾದ ಗದಗ-ವಾಡಿ ರೈಲ್ವೆ ಯೋಜನೆಯನ್ನು ತಿರುಚಿ ಜನಪ್ರತಿನಿಧಿಗಳು ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗದಗ-ವಾಡಿ ರೈಲ್ವೆ ಹೋರಾಟಗಾರ ಕಾಂತಿಲಾಲ ಜೈನ್‌ ಆರೋಪಿಸಿದರು.

Vijaya Karnataka 27 Jul 2020, 5:00 am
ನರೇಗಲ್ಲ: ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಗದಗ ಜಿಲ್ಲೆನಿರೀಕ್ಷಿತ ಪ್ರಮಾಣದಲ್ಲಿಅಭಿವೃದ್ಧಿಯಾಗದಿರಲು ಕಾರಣವಾಗಿದ್ದು ಬ್ರಿಟಿಷ್‌ ಸರಕಾರದಿಂದ ರೂಪಿತವಾದ ಗದಗ-ವಾಡಿ ರೈಲ್ವೆ ಯೋಜನೆಯನ್ನು ತಿರುಚಿ ಜನಪ್ರತಿನಿಧಿಗಳು ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗದಗ-ವಾಡಿ ರೈಲ್ವೆ ಹೋರಾಟಗಾರ ಕಾಂತಿಲಾಲ ಜೈನ್‌ ಆರೋಪಿಸಿದರು.
Vijaya Karnataka Web 26NRGL1_25
ನರೇಗಲ್ಲನ ಬಸವೇಶ್ವರ ಎಂಜನಿಯರಿಂಗ್‌ ವರ್ಕ್ಸ್‌ನಲ್ಲಿಏರ್ಪಡಿಸಿದ ಗದಗ-ವಾಡಿ ರೈಲ್ವೆ ಹೋರಾಟ ಪೂರ್ವಭಾವಿ ಸಭೆಯಲ್ಲಿಗದಗ ರೈಲ್ವೆ ಹೋರಾಟಗಾರ ಸಮಿತಿ ಅಧ್ಯಕ್ಷ ಗಣೇಶಸಿಂಗ್‌ ಬ್ಯಾಳಿ ಮಾತನಾಡಿದರು.


ಸ್ಥಳೀಯ ಬಸವೇಶ್ವರ ಎಂಜನಿಯರಿಂಗ್‌ ವರ್ಕ್ಸ್‌ನಲ್ಲಿಏರ್ಪಡಿಸಿದ ಗದಗ-ವಾಡಿ ರೈಲ್ವೆ ಹೋರಾಟ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು.

ಚುನಾವಣೆ ಬಂದಾಗ ಮಾತ್ರ ಇದರ ಯೋಜನೆ ಕಾರ್ಯರೂಪಕ್ಕೆ ತರುವುದಾಗಿ ಹೇಳಿ ಈ ಭಾಗದ ಜನಗಳ ಕಣ್ಣಿಗೆ ಮಣ್ಣೆರಚುತ್ತ ಬಂದಿದ್ದಾರೆ ಎಂದು ಆರೋಪಿಸಿದರು.

ಯಲಬುರ್ಗ ಕ್ಷೇತ್ರದ ರಾಜಕಾರಣಿಗಳು ನರೇಗಲ್ಲ, ಕೋಟುಮಚಗಿ, ಗಜೇಂದ್ರಗಡ, ಹನಮಸಾಗರ, ಇಲಕಲ್ಲ-ಮುದಗಲ್‌ ಮಾರ್ಗ ಕೈಬಿಟ್ಟು ತಳಕಲ್‌, ಕುಕನೂರ, ಯಲಬುರ್ಗ, ಕುಷ್ಟಗಿ ಮಾರ್ಗವಾಗಿ ಯೋಜನೆ ಸ್ವರೂಪ ಬದಲಾಯಿದ್ದಾರೆ ಎಂದು ದೂರಿದರು.

ಎಫ್‌. ಎಸ್‌. ಕರಿದುರಗನ್ನವರ ಮಾತನಾಡಿದರು. ಆ.1ರಂದು ಗಜೇಂದ್ರಗಡ ಮೈಸೂರು ಮಠದಲ್ಲಿ10 ಗ್ರಾಮಗಳ ಪ್ರಮುಖರ ಸಭೆ ಕರೆಯಲಾಗಿದೆ. ಹೋರಾಟ ಸಮಿತಿ ರಚಿಸಿ ಕಾನೂನಾತ್ಮಕ, ಸಾಮಾಜಿಕ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.

ಗದಗ ರೈಲ್ವೆ ಹೋರಾಟಗಾರ ಸಮಿತಿ ಅಧ್ಯಕ್ಷ ಗಣೇಶಸಿಂಗ್‌ ಬ್ಯಾಳಿ ಅಧ್ಯಕ್ಷತೆ ವಹಿಸಿದ್ದರು. ಮೌನೇಶ ಬಡಿಗೇರ, ಸಿ.ವಿ. ವಂಕಲಕುಂಟಿ, ವಿ. ಎನ್‌. ಸೊನ್ನದ, ಬಿ. ಎಸ್‌. ಶೀಲವಂತರ, ಎಚ್‌. ಎಸ್‌. ಸೋಂಪೂರ, ವಿ.ಕೆ.ಪ್ರವೀಣ , ಜಗದೀಶ ಸಂಕನಗೌಡ್ರ, ಶರಣಪ್ಪ ಧರ್ಮಾಯತ, ಶಿವುನಗೌಡ ಪಾಟೀಲ, ಡಾ. ಆರ್‌. ಕೆ. ಗಚ್ಚಿನಮಠ, ಶಿವನಗೌಡ ಕಡದಳ್ಳಿ, ಬಸವರಾಜ ಪಾಟಿಲ, ಅಶೋಕ ಬೇವಿನಕಟ್ಟಿ, ಶ್ರೀಶೈಲಪ್ಪ ಬಂಡಿಹಾಳ, ಚಿದಾನಂದ ವಂಕಲಕುಂಟಿ, ರಮೇಶ ಕಾಟಿ, ಮಂಜುನಾಥ ಹೆಗಡೆ, ನಿಂಗಪ್ಪ ಹೊನ್ನಾಪೂರ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ