Please enable javascript.ಮೈಕ್ರೋ ಸಾಲ ಮನ್ನಾಕ್ಕೆ ಆಗ್ರಹಿಸಿ ರಾರ‍ಯಲಿ - Rarayali demand for micro loans mannakke - Vijay Karnataka

ಮೈಕ್ರೋ ಸಾಲ ಮನ್ನಾಕ್ಕೆ ಆಗ್ರಹಿಸಿ ರಾರ‍ಯಲಿ

ವಿಕ ಸುದ್ದಿಲೋಕ 18 Dec 2016, 4:30 am
Subscribe

ಗದಗ : ಖಾಸಗಿ ಸಂಘ-ಸಂಸ್ಥೆಗಳು ನೀಡುವ ಮೈಕ್ರೋ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ಭಾಗದ ಮಹಿಳೆಯರು ಮೈಕ್ರೋ ಸಾನಮನ್ನಾ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ರಾರ‍ಯಲಿ ನಡೆಸಿದರು.

rarayali demand for micro loans mannakke
ಮೈಕ್ರೋ ಸಾಲ ಮನ್ನಾಕ್ಕೆ ಆಗ್ರಹಿಸಿ ರಾರ‍ಯಲಿ

ಗದಗ : ಖಾಸಗಿ ಸಂಘ-ಸಂಸ್ಥೆಗಳು ನೀಡುವ ಮೈಕ್ರೋ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ಭಾಗದ ಮಹಿಳೆಯರು ಮೈಕ್ರೋ ಸಾನಮನ್ನಾ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ರಾರ‍ಯಲಿ ನಡೆಸಿದರು.

ನಗರಸಭೆ ಆವರಣದಲ್ಲಿ ಪ್ರತಿಭಟನಾ ರಾರ‍ಯಲಿ ಆರಂಭಿಸಿದ ಮಹಿಳೆಯರು ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಪಾದಯಾತ್ರೆ ಮೂಲಕ ಹಳೇ ಡಿಸಿ ಆಫೀಸ್‌ ಸರ್ಕಲ್‌, ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಖಾಸಗಿ ಸಂಸ್ಥೆಗಳು ಜಿಲ್ಲೆಯಲ್ಲಿ ಮಹಿಳೆಯರಿಗೆ ಸಾಲ ನೀಡಿ, 2ರಿಂದ 3 ಪಟ್ಟು ಹೆಚ್ಚಿನ ಬಡ್ಡಿಯನ್ನು ವಸೂಲಿ ಮಾಡುತ್ತಿವೆ. ಮರುಪಾವತಿ ನೆಪದಲ್ಲಿ ಪ್ರಾಣ ಬೆದರಿಕೆ, ಮನೆ ಜಪ್ತಿ ಸೇರಿದಂತೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಸಾಲ ಪಡೆದುಕೊಂಡ ಮಹಿಳೆಯರು ನೆಮ್ಮದಿ ಇಲ್ಲದೇ ಜೀವಿಸುವಂತಾಗಿದೆ ಎಂದು ಆರೋಪಿಸಿದರು.

ಸಾಲ ನೀಡುವ ಖಾಸಗಿ ಏಜೆನ್ಸಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಕೂಡಲೇ ನಿಷೇಧಿಸಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನಕ್ಕೆ ನ್ಯಾಯ ಒದಗಿಸಿಕೊಡಬೇಕು. ಸಾಲದ ಸುಳಿಯಲ್ಲಿ ಮೃತಪಟ್ಟಮಹಿಳೆಯರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಮೈಕ್ರೋ ಸಾನಮನ್ನಾ ಹೋರಾಟ ಸಮಿತಿ ಅಧ್ಯಕ್ಷ ಶರೀಫ್‌ ಬಿಳೆಯಲಿ, ಇಮಾಮ್‌ಸಾಬ್‌ ಕಲೇಗಾರ, ಮಕ್ತುಂಸಾಬ್‌ ಕುರಹಟ್ಟಿ, ರಮೇಶ ಕೊಳೂರ, ಜಂಬವ್ವ ವಡ್ಡರ, ಮುಸ್ತಾಕ್‌ ಮುಲ್ಲಾ, ಹುಲಗಮ್ಮ ಬಮ್ಮಲಗಿ ಇದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ