ಆ್ಯಪ್ನಗರ

ಓದಿ ಉತ್ತಮ ಪ್ರಗತಿ ಸಾಧಿಸಿರಿ

ಗದಗ: ಸ್ವಾಮಿ ವಿವೇಕಾನಂದರು ಬಾಲಕನಿದ್ದಾಗ ನಿಷ್ಠೆಯಿಂದ ಓದುತ್ತಿದ್ದರು. ತೀಕ್ಷ$್ಣಮತಿಯವನಾಗಿ ಓದಿದ್ದನ್ನು ಯಥಾರೀತಿಯಲ್ಲಿಹೇಳುತ್ತಿದ್ದರು. ಅಂತಹ ಬುದ್ಧಿವಂತಿಕೆಯನ್ನು ಇಂದಿನ ವಿದ್ಯಾರ್ಥಿಗಳು ಹೊಂದಬೇಕು ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲ ಹೇಳಿದರು. ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿಜರುಗಿದ ಸ್ನೇಹಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

Vijaya Karnataka 22 Jan 2020, 5:00 am
ಗದಗ: ಸ್ವಾಮಿ ವಿವೇಕಾನಂದರು ಬಾಲಕನಿದ್ದಾಗ ನಿಷ್ಠೆಯಿಂದ ಓದುತ್ತಿದ್ದರು. ತೀಕ್ಷ$್ಣಮತಿಯವನಾಗಿ ಓದಿದ್ದನ್ನು ಯಥಾರೀತಿಯಲ್ಲಿಹೇಳುತ್ತಿದ್ದರು. ಅಂತಹ ಬುದ್ಧಿವಂತಿಕೆಯನ್ನು ಇಂದಿನ ವಿದ್ಯಾರ್ಥಿಗಳು ಹೊಂದಬೇಕು ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲ ಹೇಳಿದರು. ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿಜರುಗಿದ ಸ್ನೇಹಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
Vijaya Karnataka Web read on and make good progress
ಓದಿ ಉತ್ತಮ ಪ್ರಗತಿ ಸಾಧಿಸಿರಿ


ವಿಜ್ಞಾನ ಮತ್ತು ತಂತ್ರಜ್ಞಾನದಿಂದ ದೇಶ ಬಹಳ ಮುಂದುವರಿದಿದೆ. ದೇಶದಲ್ಲಿಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಇದೆ . ಆದರೆ ಇಂದು ನಾವು ಅನ್ನದಾತನಾದ ರೈತ ಹಾಗೂ ದೇಶ ಕಾಯುವ ಯೋಧರಿಂದ ಬದುಕಿದ್ದೇವೆ. ವಿದ್ಯಾರ್ಥಿಗಳು ಉಳಿದ ಸಮಯವನ್ನು ಪರೀಕ್ಷೆಗಾಗಿ ಮಾತ್ರ ಮೀಸಲಿರಿಸಿ ಉತ್ತಮ ಪ್ರಗತಿ ಸಾಧಿಸಿರಿ ಎಂದರು.

ವಿದ್ಯಾರ್ಥಿಗಳ ಕೈ ಬರಹ ಲೇಖನಗಳಿಂದ ಸಿದ್ಧಗೊಂಡ ಚಿತ್ತಾರ ಹಸ್ತಪ್ರತಿ ಜಿಪಂ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಡಾ.ಆನಂದ ಕೆ. ಬಿಡುಗಡೆ ಮಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಕ್ರಿಯಾಶೀಲ ಚಟುವಟಿಕೆ ಅನುಸರಿಸುತ್ತ, ತಾವು ಹೊಂದಿರುವ ಗುರಿಯನ್ನು ಮುಟ್ಟಬೇಕು ಎಂದರು.

ಪ್ರತಿಯೊಬ್ಬರಲ್ಲಿಯೂ ಒಂದು ಸೂಕ್ತ ಪ್ರತಿಭೆ, ಕೌಶಲ ಅಡಗಿರುತ್ತದೆ. ಅದನ್ನು ಈ ಪ್ರೌಢಶಾಲೆಯ ಶಿಕ್ಷಕರು ನಿಮ್ಮಲ್ಲಿಗುರುತಿಸಿದ್ದಾರೆ ಎಂದರು. ಪತ್ರಕರ್ತ ಮಂಜುನಾಥ ಬಮ್ಮನಕಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಕನಸು ದೊಡ್ಡದಾಗಿರಬೇಕು ಎಂದರು.

ಡಿಡಿಪಿಐ ಎನ್‌.ಎಚ್‌. ನಾಗೂರ ಮಾತನಾಡಿ, ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಈ ಶಾಲೆ ಶಿಕ್ಷಕರೊಂದಿಗೆ ಪಾಲಕರೂ ಸಹ ಕೈಗೂಡಿಸಲು ಅರಿಕೆ ಮಾಡಿಕೊಂಡರು. ಇದರೊಂದಿಗೆ ಆಸಕ್ತಿಯಿಂದ ಓದಿರಿ, ಉನ್ನತಮಟ್ಟದ ಆಶಾವಾದಿಗಳಾಗಿರಿ, ಉತ್ತಮ ಯಶಸ್ಸು ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ ಮಾತನಾಡಿ, ಪ್ರತಿಯೊಂದು ಬೀಜದಲ್ಲಿಮಹತ್ತರವಾದ ಶಕ್ತಿ ಇದೆ. ಅದಕ್ಕೆ ಈ ಶಾಲೆಯ ಶಿಕ್ಷಕರು ನೀರು, ಫಲವತ್ಕಾರಕಗಳಿಂದ ಪುಷ್ಠೀಕರಿಸಿದ್ದಾರೆ. ಈಗ ಅದು ಮೊಳೆತು, ಬೆಳೆದು ಉತ್ಕೃಷ್ಟ ಫಲ ನೀಡುವ ಕಾಲ ಬಂದಿದೆ ಎಂದರು. ಸಂಸ್ಥೆ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ ಅಧ್ಯಕ್ಷತೆ ವಹಿಸಿದ್ದರು.

ಮಲ್ಲಿಕಾರ್ಜುನ ಖಂಡಮ್ಮನವರ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ, ಎಸ್‌.ಎಸ್‌. ಕೆಳದಿಮಠ, ಡಿ.ಸಿ.ಪಾವಟೆ, ಎಸ್‌.ಬಿ. ಯಾದವಾಡ, ಎ.ಬಿ. ಬೇವಿನಕಟ್ಟಿ, ಸಿ.ಎಸ್‌. ಮಾನ್ವಿ, ಕೆ.ವಿ. ಕೋರಡ್ಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ