ಆ್ಯಪ್ನಗರ

ಮಗುವಿನ ಸೂಪ್ತ ಪ್ರತಿಭೆ ಗುರುತಿಸಿ

ನರಗುಂದ: ಪ್ರತಿ ಮಗುವಿನಲ್ಲೂಒಂದು ಪ್ರತಿಭೆ ಇದ್ದೆ ಇರುತ್ತದೆ. ಮಕ್ಕಳಲ್ಲಿಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಜೆ.ಗುರುಪ್ರಸಾದ ಸಲಹೆ ನೀಡಿದರು.

Vijaya Karnataka 16 Nov 2019, 5:00 am
ನರಗುಂದ: ಪ್ರತಿ ಮಗುವಿನಲ್ಲೂಒಂದು ಪ್ರತಿಭೆ ಇದ್ದೆ ಇರುತ್ತದೆ. ಮಕ್ಕಳಲ್ಲಿಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಜೆ.ಗುರುಪ್ರಸಾದ ಸಲಹೆ ನೀಡಿದರು.
Vijaya Karnataka Web recognize the childs latent talent
ಮಗುವಿನ ಸೂಪ್ತ ಪ್ರತಿಭೆ ಗುರುತಿಸಿ


ಇಲ್ಲಿನ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿಎಸ್‌ವೈಎಸ್‌ ಶಿಕ್ಷಣ ಸಂಸ್ಥೆ, ಎಸ್‌ಎಂವಿ ಶಾಲೆ ಆಶ್ರಯದಲ್ಲಿನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿಮಾತನಾಡಿ, ಕೀಳರಿಮೆ ಸುಳಿಯದಂತೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಚಟುವಟಿಕೆ ಬಗ್ಗೆ, ಅವರಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಆಧುನಿಕ ಮಾಧ್ಯಮ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು ಮಕ್ಕಳ ಕಲಿಕೆ ಹಾಗೂ ಆಸಕ್ತಿ ಪ್ರೋತ್ಸಾಹಿಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಎಸ್‌ವೈಎಸ್‌ ಸಂಸ್ಥೆ ಅಧ್ಯಕ್ಷ ವೀರನಗೌಡ ಪಾಟೀಲ, ಕಾರ್ಯದರ್ಶಿ ಎ.ವಿ.ಪಾಟೀಲ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ಅದರ ಸುದುಪಯೋಗ ಪಡಿಸಿಕೊಳ್ಳಬೇಕು ಎಂದರು. ನಿವೃತ್ತ ಶಿಕ್ಷಕ ಎಸ್‌.ವಿ.ಡಾಣೆ, ಸಂಸ್ಥೆಯ ಮಹೇಶ ಪಾಟೀಲ, ಶಿಕ್ಷಣ ಸಮನ್ವಯಾಧಿಕಾರಿ ಬಿ.ಎಫ್‌.ಮಜ್ಜಗಿ, ಅಕ್ಷರದಾಸೋಹ ಸಹಾಯಕ ಸಂಯೋಜಕ ಆನಂದ ಭೋವಿ, ಶಿಕ್ಷಣ ಸಂಯೋಜಕ ಗಿರೀಶ ದಾಸರ, ಎಸ್‌.ಎಸ್‌.ಕ್ಯಾಮನಗೌಡ್ರ, ಪ್ರಮೋದ ಜಾದವ ಮುಂತಾದವರಿದ್ದರು.

ಬಾರದ ಸಚಿವರು: ಬೆಳಗ್ಗೆ 10 ಗಂಟೆಗೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆಗೆ ಗಣಿ ಮತ್ತು ಭೂ ವಿಜ್ಞಾನ ಸಚಿವರು ಬೇರೊಂದು ಕಾರ್ಯಕ್ರಮದಲ್ಲಿಭಾಗಿಯಾಗುವ ಕಾರಣ ಮಧ್ಯಾನ್ಹ 2 ಗಂಟೆಗೆ ಕಾರ್ಯಕ್ರಮದಲ್ಲಿಪಾಲ್ಗೊಳ್ಳಲು ಸಮಯ ನೀಡಿದ್ದರು. ಆದರೆ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಮಕ್ಕಳನ್ನು ಕಾಯಿಸುವುದು ಬೇಡ ಎಂದು ಬೆಳಗ್ಗೆ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭಗೊಂಡಿತು. ಸಮಯ ಸಿಕ್ಕರೆ ಪಾಲ್ಗೊಳ್ಳುವುದಾಗಿ ಹೇಳಿದ್ದ ಸಚಿವರು ಬಾರದೆ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳಿದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ