ಆ್ಯಪ್ನಗರ

ಪಟಾಕಿ ಅಂಗಡಿಗಳ ಸ್ಥಳಾಂತರ

ಗದಗ: ಸೆಪ್ಟೆಂಬರ್‌ 2 ರಿಂದ 13 ರವರೆಗೆ ಗಣೇಶ ಚತುರ್ಥಿ ಹಾಗೂ ಅ. 27 ರಿಂದ 29 ರವರೆಗೆ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿಪಟಾಕಿ ಮಾರಾಟದ ಅಂಗಡಿಗಳನ್ನು ಸ್ಥಳಾಂತರಿಸಲಾಗಿದೆ.

Vijaya Karnataka 31 Aug 2019, 5:00 am
ಗದಗ: ಸೆಪ್ಟೆಂಬರ್‌ 2 ರಿಂದ 13 ರವರೆಗೆ ಗಣೇಶ ಚತುರ್ಥಿ ಹಾಗೂ ಅ. 27 ರಿಂದ 29 ರವರೆಗೆ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿಪಟಾಕಿ ಮಾರಾಟದ ಅಂಗಡಿಗಳನ್ನು ಸ್ಥಳಾಂತರಿಸಲಾಗಿದೆ.
Vijaya Karnataka Web relocation of fireworks shops
ಪಟಾಕಿ ಅಂಗಡಿಗಳ ಸ್ಥಳಾಂತರ


ಈ ಹಬ್ಬಗಳ ಸಮಯದಲ್ಲಿಪಟಾಕಿಗಳ ಮಾರಾಟ ನಡೆಯುತ್ತಿದ್ದು , ಪಟಾಕಿಗಳನ್ನು ಜನನಿಬಿಡ ಪ್ರದೇಶದಲ್ಲಿಮಾರಾಟ ಮಾಡುವುದರಿಂದ ಅಗ್ನಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿದ್ದು ಈ ಅನಾಹುತ ತಪ್ಪಿಸಲು ನಗರದ ಎಲ್ಲಪಟಾಕಿ ಅಂಗಡಿಗಳನ್ನು ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿಸೆ.1 ರಿಂದ ಸೆ.13 ರವರೆಗೆ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿಅ.26 ರಿಂದ 29 ರವರೆಗೆ ನಗರದ ವಿದ್ಯಾದಾನ ಸಮಿತಿಯ ಮೈದಾನದ ಜಾಗೆಯಲ್ಲಿವಿದ್ಯಾದಾನ ಸಮಿತಿಯವರು ವಿಧಿಸುವ ನಿಯಮ, ಕರ ಒಳಪಟ್ಟು ಪಟಾಕಿ ಅಂಗಡಿ ನಡೆಸಲು ಮತ್ತು ಜಿಲ್ಲೆಯಲ್ಲಿಇನ್ನುಳಿದ ತಾಲೂಕಿನಲ್ಲಿಆಯಾ ತಾಲೂಕು ಕಾರ‍್ಯ ನಿರ್ವಾಹಕ ಅಧಿಕಾರಿಗಳು ಸೂಕ್ತ ಆದೇಶ ಹೊರಡಿಸಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ