ಆ್ಯಪ್ನಗರ

ಮಳಿಗೆ ನಿರ್ಮಿಸಲು ಡಿಸಿಗೆ ಮನವಿ

ಗದಗ :ವಕಾರ ಸಾಲು ಪ್ರದೇಶದಲ್ಲಿ ಸರಾಫ್‌ ವ್ಯಾಪಾರಸ್ಥರಿಗೆ ಮಳಿಗೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಸರಾಫ್‌ ವರ್ತಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Vijaya Karnataka 27 Jul 2019, 5:00 am
ಗದಗ :ವಕಾರ ಸಾಲು ಪ್ರದೇಶದಲ್ಲಿ ಸರಾಫ್‌ ವ್ಯಾಪಾರಸ್ಥರಿಗೆ ಮಳಿಗೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಸರಾಫ್‌ ವರ್ತಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Vijaya Karnataka Web request dc to build the store
ಮಳಿಗೆ ನಿರ್ಮಿಸಲು ಡಿಸಿಗೆ ಮನವಿ


ದಶಕಗಳಿಂದ ಎಲ್ಲ ವ್ಯಾಪಾರಸ್ಥರು ಸರಾಫ್‌ ಬಜಾರನಲ್ಲಿ ತಮ್ಮ ಉದ್ಯೋಗ ನಡೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ಬಾಡಿಗೆ ಹೆಚ್ಚಳದಿಂದ ವ್ಯಾಪಾರ ವಹಿವಾಟು ನಡೆಸಲು ಕಷ್ಟವಾಗುತ್ತಿದೆ. ವಾಹನಗಳ ಜನದಟ್ಟಣೆಯಿಂದ ಹಾಗೂ ಏಕಮುಖ ಸಂಚಾರದಿಂದ ವ್ಯಾಪಾರ ವಹಿವಾಟು ನಡೆಸುವುದು ದುಸ್ತರವಾಗಿದೆ.

ಹೀಗಾಗಿ ಈಚೆಗಷ್ಟೆ ವಕಾರಸಾಲು ತೆರವು ಮಾಡಿದ್ದು, ಆ ಜಾಗದಲ್ಲಿ ಎಲ್ಲ ತರಹದ ವ್ಯಾಪಾರಸ್ಥರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿ ಗದಗ ಸ್ಮಾರ್ಟ್‌ ಸಿಟಿ ರೂಪದಲ್ಲಿ ಬೆಳವಣಿಗೆ ಕಾಣಬೇಕು ಎನ್ನುವುದು ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಸರಾಫ್‌ ಸಂಘದಲ್ಲಿ 200 ರಿಂದ 250 ಜನ ವ್ಯಾಪಾರಸ್ಥರಿದ್ದು, 300ಕ್ಕೂ ಹೆಚ್ಚು ಜನ ಆಭರಣ ತಯಾರಿಕೆ ಮಾಡುತ್ತಿದ್ದಾರೆ. ವಕಾರಸಾಲು ಪ್ರದೇಶದಲ್ಲಿ ಒಂದೇ ಪ್ರದೇಶದಲ್ಲಿ ಸರಾಫ್‌ ಅಂಗಡಿ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಸರಾಫ್‌ ಅಸೋಸಿಯೇಶನ್‌ ಅಧ್ಯಕ್ಷ ಅರುಣ ವೆರ್ಣೇಕರ್‌, ಕಾರ್ಯದರ್ಶಿ ಸಿದ್ದಲಿಂಗೇಶ ಮೂರಶಿಳ್ಳಿನ ಹಾಗೂ ಸರಾಫ್‌ ಅಂಗಡಿಗಳ ಮಾಲೀಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ