ಆ್ಯಪ್ನಗರ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಗದಗ: ಶಿರಹಟ್ಟಿಯ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿ.ರವಿ ಸೋಮನಕಟ್ಟಿ ಸಾವಿನ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಗುರುವಾರ ಜಿಲ್ಲಾಧಿಕಾರಿಗೆ ಪಿಡಿಒಗಳು ಮನವಿ ಸಲ್ಲಿಸಿದರು.

Vijaya Karnataka 27 Dec 2019, 5:07 pm
ಗದಗ: ಶಿರಹಟ್ಟಿಯ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿ.ರವಿ ಸೋಮನಕಟ್ಟಿ ಸಾವಿನ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಗುರುವಾರ ಜಿಲ್ಲಾಧಿಕಾರಿಗೆ ಪಿಡಿಒಗಳು ಮನವಿ ಸಲ್ಲಿಸಿದರು.
Vijaya Karnataka Web request for action against the guilty
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ


ಶಿರಹಟ್ಟಿ ತಾಲೂಕಿನ ಸೂರಣಗಿ ಗ್ರಾಪಂ ಪಿಡಿಒ ದಿ.ರವಿ ಸೋಮನಕಟ್ಟಿಯವರು ಹಿಂದೆ ಪ್ರಭಾರದಲ್ಲಿರುವ ಮಾಗಡಿ ಗ್ರಾಪಂ ಕೆಲವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಒತ್ತಡಕ್ಕೆ ಮತ್ತು ನಿಂದನೆಗೆ ಬೇಸತ್ತು, ಮಾನಸಿಕವಾಗಿ ನೊಂದುಕೊಂಡು ಡಿ.21 ರಂದು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ರೀತಿ ಜಿಲ್ಲೆಯ ಎಲ್ಲಾಗ್ರಾಪಂಗಳಲ್ಲೂಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮತ್ತು ಇತರೇ ನೌಕರರಿಗೆ ಒತ್ತಡಗಳು ಇತ್ತೀಚಿನ ದಿನಗಳಲ್ಲಿಮಿತಿಮೀರಿವೆ. ಇದರಿಂದ ಎಲ್ಲಪಿಡಿಒ ಅವರನ್ನೊಳಗೊಂಡು ಎಲ್ಲನೌಕರರೂ ಒತ್ತಡದಲ್ಲಿಸಿಲುಕಿ ನಲಗುತ್ತಿದ್ದೇವೆ. ಕೂಡಲೇ ರವಿ ಸೋಮನಕಟ್ಟಿ ಆತ್ಮಹತ್ಯೆಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಿ ಸರಕಾರಿ ನೌಕರರಿಗೆ ಕೊಟ್ಟ ನಿಂದನೆ ಪ್ರಕರಣದ ಮೇಲೆ ಕ್ರಮ ಜರುಗಿಸಬೇಕು. ವಿವಿಧ ಇಲಾಖೆಗಳ ಕೆಲಸಗಳನ್ನು ಗ್ರಾಮ ಪಂಚಾಯಿತಿಗೆ ವಹಿಸಿರುವುದರಿಂದ ಸಾರ್ವಜನಿಕರ ಕೆಲಸಗಳನ್ನು ಸಕಾಲಕ್ಕೆ ನಿರ್ವಹಿಸಲು ಆಗುತ್ತಿಲ್ಲ. ಇದರಿಂದ ಸಾರ್ವಜನಿಕರಿಂದ ಒತ್ತಡಕ್ಕೆ ಸಿಲುಕಬೇಕಾಗುತ್ತದೆ. ಬೇರೆ ಇಲಾಖೆಯ ಕೆಲಸ ಕೈಬಿಡಬೇಕು. ಮೃತ ವ್ಯಕ್ತಿಯ ಪತ್ನಿಗೆ ನಿಗದಿತ ಅವಧಿಯೊಳಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು. ಪಿಡಿಒ ಅವರ ಮೇಲೆ ನಿಂದನೆ ಒತ್ತಡ ಹಾಕುವವರ ವಿರುದ್ಧ ದೂರು ಬಂದಲ್ಲಿಶೀಘ್ರ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಬೇಕು. ಪ್ರತಿ ತಿಂಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಪಂಚಾಯಿತಿ ಅವರ ಅಧ್ಯಕ್ಷತೆಯಲ್ಲಿಗ್ರಾಪಂ ಎಲ್ಲನೌಕರರ ಕುಂದುಕೊರತೆ ಸಭೆ ಜರುಗಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಮಾಜಿ ಸಂಸದ ಐ.ಜಿ.ಸನದಿ, ಜಿಪಂ ಉಪಕಾರ್ಯದರ್ಶಿ ಬಿ.ಕಲ್ಲೇಶ, ಮುಖ್ಯ ಯೋಜನಾಧಿಕಾರಿ ಮಠಪತಿ, ಯೋಜನಾ ನಿರ್ದೇಶಕ ಸಿ.ಆರ್‌.ಮುಂಡರಗಿ, ಕರ್ನಾಟಕ ರಾಜ್ಯ ಗ್ರಾಪಂ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಸಮಿತಿಯ ಅಧ್ಯಕ್ಷ ಕೆ.ಎಲ್‌. ಪೂಜಾರ, ಆರ್‌.ಎಂ. ಕಿರಸೂರ, ಶಿವನಗೌಡ ಮೆಣಸಗಿ, ಎಸ್‌.ವೈ.ಕುಂಬಾರ, ಶ್ರೀವಿದ್ಯಾ ಕೆ., ಕೆ. ಎಸ್‌. ಹಾದಿಮನಿ, ರಿಯಾಜ್‌ ಕೆ., ಸಂಜೀವ ಚೌಡಾಳ, ಎಚ್‌. ಎಸ್‌. ಚಟ್ರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ