ಆ್ಯಪ್ನಗರ

ಹೂ ಬೆಳೆಗಾರರಿಗೆ ನೆರವು ನೀಡಲು ಮನವಿ

ಲಕ್ಷ್ಮೇಶ್ವರ: ಕರೊನಾ ವೈರಸ್‌ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಿಂದ ಹಾನಿಗೀಡಾದ ಹೂ ಬೆಳೆಗಾರರಿಗೆ ಸರಕಾರ ಘೋಷಿಸಿರುವ ಪರಿಹಾರಧನ ನೀಡಲು ಆಗ್ರಹಿಸಿ ಹೂವು ಬೆಳೆಗಾರರು ಸೋಮವಾರ ತಹಸೀಲ್ದಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

Vijaya Karnataka 16 Jun 2020, 5:00 am
ಲಕ್ಷ್ಮೇಶ್ವರ: ಕರೊನಾ ವೈರಸ್‌ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಿಂದ ಹಾನಿಗೀಡಾದ ಹೂ ಬೆಳೆಗಾರರಿಗೆ ಸರಕಾರ ಘೋಷಿಸಿರುವ ಪರಿಹಾರಧನ ನೀಡಲು ಆಗ್ರಹಿಸಿ ಹೂವು ಬೆಳೆಗಾರರು ಸೋಮವಾರ ತಹಸೀಲ್ದಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
Vijaya Karnataka Web request for assistance to flower growers
ಹೂ ಬೆಳೆಗಾರರಿಗೆ ನೆರವು ನೀಡಲು ಮನವಿ


ಮನವಿ ಪತ್ರದಲ್ಲಿಸರಕಾರ ಲಾಕ್‌ಡೌನ್‌ ಘೋಷಣೆಯಿಂದ ಬೆಳೆದ ಹೂವು ಮಾರಾಟವಾಗದೇ ಹಾನಿ ಅನುಭವಿಸಿದ್ದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ 25 ಸಾವಿರ ರೂ. ಪರಿಹಾರ ಘೋಷಿಸಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿ, ಜಿಪಿಎಸ್‌ ಮಾಡಿ ಫೋಟೊ ತೆಗೆದುಕೊಂಡು ಹೋಗಿದ್ದಾರೆ. ರೈತರೂ ತೋಟಗಾರಿಕೆ ಇಲಾಖೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಬೆಳೆ ಸರ್ವೆ ಆಗದ್ದರಿಂದ ಉತಾರದಲ್ಲಿಹೂವಿನ ಬೆಳೆ ನಮೂದಾಗಿಲ್ಲ. ಇದರಿಂದ ಪರಿಹಾರ ಬರುವುದಿಲ್ಲಎನ್ನಲಾಗುತ್ತಿದೆ. ಇದರಿಂದ ಸರಕಾರದ ಪರಿಹಾರ ಅರ್ಹ ರೈತರಿಗೆ ಸಿಗದೇ ಕೇವಲ ಘೋಷಣೆಗೆ ಮಾತ್ರ ಸೀಮಿತವಾದಂತಾಗಿದೆ. ಕೂಡಲೇ ಹೂವು ಬೆಳೆದ ಎಲ್ಲಬೆಳೆಗಾರರಿಗೂ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿಅಧಿಕಾರಿಗಳು ಗಮನಹರಿಸಬೇಕು ಮತ್ತು ಸರಕಾರವೂ ಸ್ಫಂದಿಸಬೇಕು ಎಂದು ಒತ್ತಾಯಿಸಲಾಗಿದೆ.

ತಹಸೀಲ್ದಾರ ಗುಬ್ಬಿಶೆಟ್ಟಿ ಅವರೊಂದಿಗೆ ಮನವಿ ಸ್ವೀಕರಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಪ್ರತಿಕ್ರಿಯಿಸಿ, ಕ್ರಾಪ್‌ ಸರ್ವೆಯಲ್ಲಿಹೂವಿನ ಬೆಳೆ ದಾಖಲಿಸಿಕೊಳ್ಳಲಾಗಿದ್ದು ಸೂಕ್ತ ದಾಖಲೆಗಳಿದ್ದ ರೈತರಿಗೆ ಮೊದಲ ಹಂತದಲ್ಲಿಪರಿಹಾರ ಬರುವುದು. ಇನ್ನು ಸೂಕ್ತ ದಾಖಲೆಗಳಿಲ್ಲದ ರೈತರು ಹೂವು ಬೆಳೆದ ಬಗ್ಗೆ ಮಾಹಿತಿ ಕಲೆಹಾಕಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಹನಮಂತಪ್ಪ ಜಗದಮನಿ, ರೂಪೇಶ ಲಮಾಣಿ, ಅಬ್ಜಲ್‌ ರಿತ್ತಿ, ಸಂತೋಷ ಲಮಾಣಿ, ಇಸಾಕ್‌ ರಿತ್ತಿ, ಶಿವಪ್ಪ ಲಮಾಣಿ, ಉಮೇಶ ಲಮಾಣಿ,ತಿಪ್ಪಣ್ಣ ಲಮಾಣಿ ಸೇರಿ ಹಲವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ