ಆ್ಯಪ್ನಗರ

ಸಹಾಯಧನ ರದ್ದುಗೊಳಿಸದಿರಲು ಆಗ್ರಹ

ಗದಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪ್ರತಿ ವರ್ಷ ನೀಡುತ್ತ ಬಂದಿರುವ ಸಹಾಯಧನ ಹಾಗೂ ಕಲಾವಿದರ ಪ್ರಾಯೋಜನೆ ಅನುದಾನ ರದ್ದುಗೊಳಿಸಿರುವ ಕ್ರಮ ವಿರೋಧಿಸಿ ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

Vijaya Karnataka 14 Jul 2019, 5:00 am
ಗದಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪ್ರತಿ ವರ್ಷ ನೀಡುತ್ತ ಬಂದಿರುವ ಸಹಾಯಧನ ಹಾಗೂ ಕಲಾವಿದರ ಪ್ರಾಯೋಜನೆ ಅನುದಾನ ರದ್ದುಗೊಳಿಸಿರುವ ಕ್ರಮ ವಿರೋಧಿಸಿ ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web GDG-13RUDRAGOUD11
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುವ ಅನುದಾನ ರದ್ದುಗೊಳಿಸಿರುವ ಕ್ರಮ ಖಂಡಿಸಿ ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಸಂಘ, ಸಂಸ್ಥೆಗಳ ಮೂಲಕ ಕನ್ನಡ ಮತ್ತು ಸಂಸ್ಕೃತಿ ಉತ್ತೇಜಿಸುವ ಕಾರ್ಯ ಚಟುವಟಿಕೆಗಳಿಗಾಗಿ ನೀಡುತ್ತ ಬಂದಿದೆ. ಧನ ಸಹಾಯ ಹಾಗೂ ಅಸಂಘಟಿತ ಕಲಾವಿದರ ತಂಡಗಳಿಗೆ ವಾಧ್ಯ, ಪರಿಕರ ಮತ್ತು ವೇಷ ಭೂಷಣಗಳಿಗಾಗಿ ನೀಡುತ್ತ ಬಂದ ಸಹಾಯ ಧನ ರದ್ದುಗೊಳಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ ನೀಡಿರುವ ಹೇಳಿಕೆ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಸಂಘ, ಸಂಸ್ಥೆಗಳ ಹಾಗೂ ಕಲಾವಿದರ ವಾಧ್ಯ, ಪರಿಕರ ಮತ್ತು ವೇಷಭೂಷಣಕ್ಕಾಗಿ ನೀಡಬೇಕಾಗಿದ್ದ 2018-19 ನೇ ಸಾಲಿನ ಅನುದಾನ ಕೂಡಲೇ ಬಿಡುಗಡೆಗೊಳಿಸಬೇಕು. ಪ್ರತಿ ವರ್ಷದಂತೆ 2019-20 ನೇ ಸಾಲಿನ ಧನ ಸಹಾಯ ಹಾಗೂ ಕಲಾವಿದರ ವೇಷಭೂಷಣ, ಪರಿಕರಗಳಿಗಾಗಿ ಅರ್ಜಿ ಕರೆಯಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗದಗ ಜಿಲ್ಲೆಗೆ ಕಾಯಂ ಸಹಾಯಕ ನಿರ್ದೇಶಕರನ್ನು ನಿಯೋಜನೆ ಮಾಡಬೇಕು. ಖೋಟ್ಟಿ ಸಂಘ, ಸಂಸ್ಥೆ ಹಾಗೂ ಕಲಾವಿದರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸಬೇಕು. ಖೋಟ್ಟಿ ಸಂಘ, ಸಂಸ್ಥೆ ಹಾಗೂ ಕಲಾವಿದರೊಂದಿಗೆ ಕೈ ಜೋಡಿಸುವ ಅಧಿಕಾರಿಗಳನ್ನು ಮನೆಗೆ ಕಳುಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಕಾ.ವೆಂ.ಶ್ರೀನಿವಾಸ, ಸಿ.ಕೆ.ಎಚ್‌.ಶಾಸ್ತ್ರೀ(ಕಡಣಿ), ಮೌನೇಶ ಬಡಿಗೇರ, ಅಶೋಕ ಸುತಾರ, ಶಂಕರಗೌಡ ಪಾಟೀಲ, ವಿಶ್ವನಾಥ ನಾಲವಾಡದ, ಸೋಮಶೇಖರ ಚಿಕ್ಕಮಠ, ಗಜಾನನ ವರ್ಣೇಕರ, ಪ್ರವೀಣ ಕರಲಿಂಗಣ್ಣವರ, ಗವಿಶಿದ್ಧಯ್ಯ ಹಳ್ಳಿಕೇರಿಮಠ, ವೆಂಕಟೇಶ ಇಮರಾಪೂರ, ಸಿದ್ಧಲಿಂಗಯ್ಯಶಾಸ್ತ್ರೀ ಗಡ್ಡದಮಠ, ಅಶೋಕ ಹಾದಿಮನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ