ಆ್ಯಪ್ನಗರ

ಅಪಮಾನ ಮಾಡಿದವರನ್ನು ಬಂಧಿಸಲು ಆಗ್ರಹ

ಗದಗ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್‌. ಅಂಬೇಡ್ಕರ್‌ ಒಬ್ಬರೇ ಸಂವಿಧಾನ ಬರೆದಿಲ್ಲಎಂದು ಪೂರ್ವಾಗ್ರಹ ಪೀಡಿತ ಮನಸ್ಸುಳ್ಳ ಜಾತಿವಾದಿಗಳು ಇತಿಹಾಸ ತಿರುಚಲು ಹೊರಟಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿಪ್ರತಿಭಟನೆ ನಡೆಸಿದರು.

Vijaya Karnataka 14 Nov 2019, 5:00 am
ಗದಗ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್‌. ಅಂಬೇಡ್ಕರ್‌ ಒಬ್ಬರೇ ಸಂವಿಧಾನ ಬರೆದಿಲ್ಲಎಂದು ಪೂರ್ವಾಗ್ರಹ ಪೀಡಿತ ಮನಸ್ಸುಳ್ಳ ಜಾತಿವಾದಿಗಳು ಇತಿಹಾಸ ತಿರುಚಲು ಹೊರಟಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿಪ್ರತಿಭಟನೆ ನಡೆಸಿದರು.
Vijaya Karnataka Web request to arrest those who insulted
ಅಪಮಾನ ಮಾಡಿದವರನ್ನು ಬಂಧಿಸಲು ಆಗ್ರಹ


ಸಮಿತಿ ಜಿಲ್ಲಾಸಂಘಟನಾ ಸಂಚಾಲಕ ಸತೀಶ ಹೂಲಿ ಮಾತನಾಡಿ, ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್‌ ಅವರು ತಮ್ಮ ಜತೆಗಿದ್ದ ಸದಸ್ಯರು ಸಹಕಾರ ನೀಡದೆ ಇದ್ದಾಗ ಸ್ವತಃ ತಾವೇ ಕಷ್ಟಪಟ್ಟು ಸಮಸ್ತ ಭಾರತೀಯರೆಲ್ಲರಿಗೆ ಸಮಾನತೆ, ಸಹಬಾಳ್ವೆ ನೆಲೆಯಲ್ಲಿಬಾಳುವಂತೆ ನೀಡಿದ ಅದ್ಭುತವಾದ ಸಂವಿಧಾನ ನೀಡಿದರು . ಇದಕ್ಕೆ ಡಾ. ಬಾಬು ರಾಜೇಂದ್ರಪ್ರಸಾದ, ಸದಸ್ಯರಾಗಿದ್ದ ಕೃಷ್ಣಾಮಾಚಾರಿ ನುಡಿಗಳೆ ಸಾಕ್ಷಿ ಎಂದು ತಿಳಿಸಿದರು.ತಪ್ಪು ಸಂದೇಶ ನೀಡುವವರನ್ನು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಿನಾಯಕ ಬಳ್ಳಾರಿ, ವಿಜಯ ಕಲ್ಮನಿ, ಮಾರುತಿ ಗುಡಿಮನಿ, ಆರ್‌. ಎಲ್‌. ಮೇಳೆನ್ನವರ ಮಾತನಾಡಿದರು. ಯುವರಾಜ್‌ ಬಳ್ಳಾರಿ, ಮಹೇಶ ದೊಡ್ಡಮನಿ, ಧರ್ಮಣ್ಣ ಹೊಸಮನಿ, ಗೌಸುಸಾಬ ಇಟಗಿ, ರಮೇಶ ಮ್ಯಾಗೇರಿ, ಯಲ್ಲಪ್ಪ ನಾಡಿಗೇರಿ, ರವಿ ಹಾದಿಮನಿ, ಲಕ್ಷ್ಮಣ ಹಳ್ಳಿಕೇರಿ, ಸಿದ್ದು ಹಾದಿಮನಿ, ಬಸವರಾಜ ಮನಗುಂಡಿ, ಪರಶುರಾಮ ಗುಡಿಮನಿ, ನವೀನ ಭಂಡಾರಿ, ಚಂದ್ರು ಗುತ್ತಿ, ಸುಜೇಂದ್ರ ನಡಿಗೇರ, ಮಂಜು ಯಮನಾಳ, ಉಮರ ತೌಸಿಫ, ಹೇಮಂತ ಕಾಳೆ, ಲಕ್ಷ್ಮಣ ಕಟ್ಟಿಮನಿ, ಮಂಜುನಾಥ ಅಗಸಿಮನಿ, ಬೂದಪ್ಪ ಹುಣಸೀಮರದ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ