ಆ್ಯಪ್ನಗರ

ಹಿಂದಿನ ಸೇವೆ ಪರಿಗಣಿಸಲು ಮನವಿ

ಗದಗ: ವಿಲೀನಗೊಳ್ಳುವ ಹಿಂದಿನ ಸೇವೆ ಪರಿಗಣಿಸುವಂತೆ ಆಗ್ರಹಿಸಿ ವೃತ್ತಿ ಶಿಕ್ಷಣ ಇಲಾಖೆ(ಜೆಒಸಿ)ಯಿಂದ ಸೇವಾ ಸಕ್ರಮಾತಿ ಹೊಂದಿ ವಿವಿಧ ಇಲಾಖೆ ಹಾಗೂ ಅನುದಾನಿತ ಸಂಸ್ಥೆಗಳಲ್ಲಿಸೇವೆ ಸಲ್ಲಿಸುತ್ತಿರುವ ನೌಕರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

Vijaya Karnataka 11 Nov 2019, 5:00 am
ಗದಗ: ವಿಲೀನಗೊಳ್ಳುವ ಹಿಂದಿನ ಸೇವೆ ಪರಿಗಣಿಸುವಂತೆ ಆಗ್ರಹಿಸಿ ವೃತ್ತಿ ಶಿಕ್ಷಣ ಇಲಾಖೆ(ಜೆಒಸಿ)ಯಿಂದ ಸೇವಾ ಸಕ್ರಮಾತಿ ಹೊಂದಿ ವಿವಿಧ ಇಲಾಖೆ ಹಾಗೂ ಅನುದಾನಿತ ಸಂಸ್ಥೆಗಳಲ್ಲಿಸೇವೆ ಸಲ್ಲಿಸುತ್ತಿರುವ ನೌಕರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
Vijaya Karnataka Web request to consider past service
ಹಿಂದಿನ ಸೇವೆ ಪರಿಗಣಿಸಲು ಮನವಿ


ಸಂಘದ ಅಧ್ಯಕ್ಷ ಎನ್‌.ಎಂ.ಮಹದೇವಯ್ಯ ಮಾತನಾಡಿ,ವಿಲೀನಗೊಳ್ಳುವ ಮುಂಚೆ ವೃತ್ತಿ ಶಿಕ್ಷಣ ಇಲಾಖೆ(ಜೆಒಸಿ) ಯಲ್ಲಿಸಂಭಾವನೆ ಆಧಾರದ ಮೇಲೆ ಹಲವು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿದ್ದೇವೆ. ಬಹುತೇಕ ಸಿಬ್ಬಂದಿ ನಿವೃತ್ತಿ ಅಂಚಿನಲ್ಲಿರುವುದರಿಂದ ಮತ್ತು ನಿವೃತ್ತಿ ಆಗಿದ್ದರಿಂದ ಅವರಿಗೆ ಕೊನೆ ತಿಂಗಳದ ವೇತನ ಬಿಟ್ಟು ನಿವೃತ್ತಿ ನಂತರದ ಯಾವುದೇ ರೀತಿಯ ಪಿಂಚಣಿ ಮತ್ತು ಇನ್ನಿತರ ಸೌಲಭ್ಯಗಳು ಸಿಕ್ಕಿಲ್ಲಅದ್ದರಿಂದ ವಿಲೀನತೆಯ ಹಿಂದಿನ ಸೇವೆ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡಿದರೆ ನಿವೃತ್ತಿ ಜೀವನವನ್ನಾದರೂ ಗೌರವಯುತವಾಗಿ ನಡೆಸಲು ಅನುಕೂಲವಾಗುತ್ತದೆ. ಅದ್ದರಿಂದ ವಿಲೀನಗೊಳ್ಳುವ ಹಿಂದಿನ ಸೇವೆ ಅವಧಿಯನ್ನು ಪರಿಗಣಿಸಬೇಕು. ಮತ್ತು ಹಿಂದಿನ ಸೇವೆ ಅವಧಿಯ ಬಾಕಿ ವೇತನವನ್ನು ನಾವು ಕೇಳುವುದಿಲ್ಲಎಂದು ಮನವಿ ಮೂಲಕ ಆಗ್ರಹಿಸಿದರು.

ವೀಲಿನಗೊಂಡ ಜೆಒಸಿ ಸಂಘದ ಗೌರವಾಧ್ಯಕ್ಷ ರುದ್ರಣ್ಣ ಗುಳಗುಳಿ, ಕಾರ್ಯದರ್ಶಿ ಅಮರೇಶ ಸಿ., ವೆಂಕಟೇಶ ನಾಗರಡ್ಡಿ, ವಸ್ತ್ರದ, ರವೀಶ ಬಿ.ಎಸ್‌., ಆರ್‌.ಎಂ.ಗುಲಬರೆ, ಸಿ.ಸಿ.ಪಾಟೀಲ, ಎಸ್‌.ಎ. ಗಾಡಗೋಳಿ, ಎಸ್‌.ವಿ.ಬೀಳಗಿಮಠ, ಎಸ್‌.ಸಿ.ಬಡಿಗೇರ, ಜಿ.ಆರ್‌.ಸಾತೇನಹಳ್ಳಿ, ವಿ.ಕೆ.ಚುಳಕಿ, ಬಿ.ಪಿ.ಕಾಗಿ, ಎಸ್‌.ಎಸ್‌.ಮುದಗಲ್‌, ಎಸ್‌.ಎಚ್‌.ಬಡಿಗಣ್ಣವರ, ಪಿ.ಎನ್‌.ನವಲೂರಕರ,ಎಸ್‌.ಎನ್‌.ಗುಡಿ, ಪಿ.ಎಂ.ಗಡಾದ, ಜೆ.ಎಸ್‌.ಅಬ್ಬಿಗೇರಿ, ಪಿ.ಎ.ಜಮಖಂಡಿ, ವಿ.ಬಿ.ಬೀಡಿ, ಆರ್‌.ಎನ್‌.ಜೋಶಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ