ಆ್ಯಪ್ನಗರ

ಸ್ಥಳೀಯ ಸಂಸ್ಥೆಗೆ ಅಧಿಕಾರ ನೀಡದಿದ್ದರೆ ರಾಜಿನಾಮೆ

ಮುಳಗುಂದ :ಸ್ಥಳೀಯ ಪಪಂಗೆ ಚುನಾಯಿತರಾಗಿ ಒಂದು ವರ್ಷ ಕಳೆದರೂ ಈವರೆಗೂ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಮೀಸಲು ನೀಡದೆ ಚುನಾಯಿತರಾದ ಜನಪ್ರತಿನಿಧಿಗಳಿಗೆ ಅಧಿಕಾರ ನೀಡದಿರುವುದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು ಶೀಘ್ರವೆ ಅಧಿಕಾರ ನೀಡದಿದ್ದರೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸ್ಥಳೀಯ ಪಪಂ ಪಕ್ಷೇತರ ಸದಸ್ಯ ಬಸವರಾಜ ಹಾರೋಗೇರಿ ಎಚ್ಚರಿಸಿದ್ದಾರೆ.

Vijaya Karnataka 1 Sep 2019, 5:00 am
ಮುಳಗುಂದ :ಸ್ಥಳೀಯ ಪಪಂಗೆ ಚುನಾಯಿತರಾಗಿ ಒಂದು ವರ್ಷ ಕಳೆದರೂ ಈವರೆಗೂ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಮೀಸಲು ನೀಡದೆ ಚುನಾಯಿತರಾದ ಜನಪ್ರತಿನಿಧಿಗಳಿಗೆ ಅಧಿಕಾರ ನೀಡದಿರುವುದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು ಶೀಘ್ರವೆ ಅಧಿಕಾರ ನೀಡದಿದ್ದರೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸ್ಥಳೀಯ ಪಪಂ ಪಕ್ಷೇತರ ಸದಸ್ಯ ಬಸವರಾಜ ಹಾರೋಗೇರಿ ಎಚ್ಚರಿಸಿದ್ದಾರೆ.
Vijaya Karnataka Web resign if the local agency is not authorized
ಸ್ಥಳೀಯ ಸಂಸ್ಥೆಗೆ ಅಧಿಕಾರ ನೀಡದಿದ್ದರೆ ರಾಜಿನಾಮೆ

ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ಪಟ್ಟಣದ ವಾರ್ಡ್‌ ನಂ 11 ರಿಂದ ಚುನಾಯಿತನಾಗಿದ್ದು 2018 ಆ.31 ರಂದು ಚುನಾವಣೆ ಜರುಗಿ ಒಂದು ವರ್ಷ ಕಳೆದರೂ ಅಧಿಕಾರ ಸಿಕ್ಕಿಲ್ಲ. ಈ ಕಾರಣದಿಂದ ಸಾರ್ವಜನಿಕರ ಯಾವುದೆ ಕೆಲಸ ಸದ್ಸಯರಿಂದ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಪಪಂನಲ್ಲಿಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಉತಾರ ಸೇರಿದಂತೆ ಮೂಲ ಸೌಕರ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲಕೂಡಲೇ ಚುನಾವಣೆ ಆಯೋಗ ಹಾಗೂ ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಧಿಕಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ