ಆ್ಯಪ್ನಗರ

ತೋಟಗಾರಿಕೆ ಬೆಳೆಯಿಂದ ಆದಾಯ ವೃದ್ಧಿ

ಶಿರಹಟ್ಟಿ : ರೈತರು ಕೃಷಿ ಬೆಳೆಗಳ ಜತೆಗೆ, ನಾನಾ ತೋಟಗಾರಿಕೆ ಬೆಳೆ ಬೆಳೆಯುವುದರಿಂದ, ನಿರಂತರ ಕೆಲಸ ಮತ್ತು ಆದಾಯದಿಂದ ಆರ್ಥಿಕ ಸಮೃದ್ಧಿ ಮತ್ತು ಸ್ವಾವಲಂಬನೆ ಬದುಕು ನಡೆಸಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕ ಸುರೇಶ ಕುಂಬಾರ ಹೇಳಿದರು.

Vijaya Karnataka 23 Jun 2020, 5:00 am
ಶಿರಹಟ್ಟಿ : ರೈತರು ಕೃಷಿ ಬೆಳೆಗಳ ಜತೆಗೆ, ನಾನಾ ತೋಟಗಾರಿಕೆ ಬೆಳೆ ಬೆಳೆಯುವುದರಿಂದ, ನಿರಂತರ ಕೆಲಸ ಮತ್ತು ಆದಾಯದಿಂದ ಆರ್ಥಿಕ ಸಮೃದ್ಧಿ ಮತ್ತು ಸ್ವಾವಲಂಬನೆ ಬದುಕು ನಡೆಸಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕ ಸುರೇಶ ಕುಂಬಾರ ಹೇಳಿದರು.
Vijaya Karnataka Web revenue growth from horticultural crop
ತೋಟಗಾರಿಕೆ ಬೆಳೆಯಿಂದ ಆದಾಯ ವೃದ್ಧಿ


ಅವರು ತಾಲೂಕಿನ ಮಾಗಡಿ ಗ್ರಾಮದ ಗೋಪಿನಾಥ ಗಾಣಿಗೇರ ಅವರ ಜಮೀನಿನಲ್ಲಿಕೃಷಿ ಇಲಾಖೆಯಿಂದ ಜಲಾಮೃತ ಯೋಜನೆಯಡಿ ಅಭಿವೃದ್ಧಿಪಡಿಸಿದ ಬದುಗಳ ಮೇಲೆ ವಿವಿಧ ತೋಟಗಾರಿಕೆ ಕಸಿ,ಸಸಿ ನಾಟಿ ಮಾಡುವುದು ಮತ್ತು ವಿವಿಧ ತರಕಾರಿ ಬೀಜಗಳನ್ನು ಬಿತ್ತುವುದರ ಮೂಲಕ ಬದು ಬೇಸಾಯ ಮಾಸಾಚರಣೆ ಕಾರ‍್ಯಕ್ರಮದಲ್ಲಿಮಾತನಾಡಿದರು.

ತಾಲೂಕಿನಲ್ಲಿನಾನಾ ಗ್ರಾಪಂಗಳಲ್ಲಿಬದುಗಳನ್ನು ನಿರ್ಮಾಣ ಮಾಡಲಾಗಿದ್ದು, ಇವುಗಳಲ್ಲಿವಿವಿಧ ತರಹದ ತೋಟಗಾರಿಕೆ ಬೆಳೆಗಳಾದ ಪೇರಲ, ಲಿಂಬೆ, ಸೀತಾಫಲ, ನೆಲ್ಲಿ, ಕರಿಬೇವು, ನುಗ್ಗಿ ಮುಂತಾದ ಸಸಿಗಳನ್ನು ನೆಡುವುದರಿಂದ ಬದು ಗಟ್ಟಿಯಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಶಿವಕ್ಕ ಹಿರೇಮಠ, ಪ್ರಕಾಶ ಹೋರಿ, ಸಹಾಯಕ ನಿರ್ದೆಶಕ ಕೃಷ್ಣಪ್ಪ ಧರ್ಮರ, ಪಿಡಿಒ ಎಸ್‌.ವಿ.ಮಾಳವಾಡ, ಎಂ.ಎನ್‌.ಕುದರಿ, ದಾನಪ್ಪ ಹಡಪದ, ಗೋಪಿನಾಥ ಗಾಣಿಗೇರ, ಮಲ್ಲಪ್ಪ ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ