ಆ್ಯಪ್ನಗರ

ರಸ್ತೆಗಳು ಸುಧಾರಣೆ ಅಭಿವೃದ್ಧಿಗೆ ಪೂರಕ

ರೋಣ: ಗ್ರಾಮೀಣ ಪ್ರದೇಶಗಳಲ್ಲಿರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲಿದ್ದು ಕೆಲ ಗ್ರಾಮಗಳಲ್ಲಿನ ಒಳ ರಸ್ತೆ ಅಭಿವೃದ್ಧಿಗಾಗಿ 1.5 ಕೋಟಿ ರೂ.ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

Vijaya Karnataka 22 Jan 2020, 5:00 am
ರೋಣ: ಗ್ರಾಮೀಣ ಪ್ರದೇಶಗಳಲ್ಲಿರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲಿದ್ದು ಕೆಲ ಗ್ರಾಮಗಳಲ್ಲಿನ ಒಳ ರಸ್ತೆ ಅಭಿವೃದ್ಧಿಗಾಗಿ 1.5 ಕೋಟಿ ರೂ.ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
Vijaya Karnataka Web roads improvement improvement
ರಸ್ತೆಗಳು ಸುಧಾರಣೆ ಅಭಿವೃದ್ಧಿಗೆ ಪೂರಕ


ಅವರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಮಂಜೂರಾದ ಅನುದಾನದ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿ8 ಗ್ರಾಮಗಳಿಗೆ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ 1.5 ಕೋಟಿ ರೂ.ಅನುದಾನ ನೀಡಲಾಗಿದೆ. ಮುಶಿಗೇರಿ,ಬಳಗೋಡ, ತಳ್ಳಿಹಾಳ,ಮಾಡಲಗೇರಿ, ಕುರಹಟ್ಟಿ,ಮುದೇನಗುಡಿ ತಳ್ಳಿಹಾಳ ಸೇರಿದಂತೆ ಇನ್ನಿತರ ಗ್ರಾಮಗಳ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಆಗಿದೆ.ಗುಣಮಟ್ಟದಲ್ಲಿಯಾವುದೇ ಹೊಂದಾಣಿಕೆ ಇಲ್ಲ. ಸಾಕಷ್ಟು ಅನುದಾನವನ್ನು ಸರಕಾರದಿಂದ ತಂದಿರುವುದರಿಂದ ಗ್ರಾಮಗಳಲ್ಲಿಕಾಂಕ್ರೀಟ್‌ ಮತ್ತು ಡಾಂಬರೀಕರಣವಾಗುತ್ತಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಂಪರ್ಕಿಸಿ ಪರಿಹಾರ ಮಾಡಿಕೊಳ್ಳಬಹುದು ಎಂದರು.

ಶರಣಪ್ಪ ಕಂಬಳಿ, ಮುತ್ತಣ್ಣ ಕಡಗದ, ಮಲ್ಲುಮಾದರ, ಪರಶುರಾಮ ಮಾದರ, ವಿರುಪಾಕ್ಷಗೌಡ ಪಾಟೀಲ, ಹೇಮಯ್ಯ ಹಿರೇಮಠ, ರವಿ ಬಿದರೂರ ಇಒ ಸಂತೋಷ ಪಾಟೀಲ, ಪಿಡಬ್ಲೂಡಿ ಎಇಇ ಐ.ಎಸ್‌.ಹೊಸೂರ, ಪಿ.ಎಚ್‌.ಕೊತಬಾಳ,ಉಮೇಶ ಮಂಡಸೊಪ್ಪಿ, ಎಮ್‌.ಜಿ.ರಾಠೋಡ, ಅಶೋಕ ಕುಲಕರ್ಣಿ,ಭೂಸೇನಾ ನಿಗಮದ ಕುಮಾರ, ಸದ್ದಾಂ ದೊಡ್ಡಮನಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ