ಆ್ಯಪ್ನಗರ

ಚಿನ್ನಾಭರಣ ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಿದ ರೋಣ ಪೊಲೀಸರು

ಹಂಸಭಾವಿ ಠಾಣಾ ವ್ಯಾಪ್ತಿಯಲ್ಲಿ 3 ಹಾಗೂ ಹೊಳೆಆಲೂರ ಓಪಿ ಠಾಣೆ ವ್ಯಾಪ್ತಿಯಲ್ಲಿ1 ಮನೆಗಳ್ಳತನ ಪ್ರಕರಣ ಪತ್ತೆಯಾಗಿದೆ. ಆರೋಪಿಗಳು ರೋಣ ಶ್ರೀಸಾಯಿ ನಗರದ ಮಾಜಿ ಸೈನಿಕರೊಬ್ಬರ ಮನೆಗಳ್ಳತನಕ್ಕೆ ಯತ್ನಿಸುದ್ದಾಗ ಆರೋಪಿ ಫಾರುಕ್‌ ಅಬ್ದುಲ್‌ ತುರೇದನನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 3 Feb 2021, 1:49 pm
ರೋಣ : ಚಿನ್ನ, ಬೆಳ್ಳಿ ಕಳವು ಪ್ರಕರಣ ಕುರಿತು ನಾಲ್ವರನ್ನು ಸ್ಥಳೀಯ ಪೊಲೀಸರು ಬಂಧಿಸಿ ಅವರಿಂದ 60 ಗ್ರಾಂ ಚಿನ್ನ,20 ತೊಲೆ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
Vijaya Karnataka Web police sketch


ಬಾಗಲಕೋಟ ನವನಗರದ ವಾಂಬೆ ಕಾಲೊನಿಯ ಫಾರುಕ್‌ ಅಬ್ದುಲ್‌ ತುರೇದ (20), ಬಾಗಲಕೋಟ ನವನಗರದ ಸರಕಾರಿ ಆಸ್ಪತ್ರೆ ಹತ್ತಿರದ ನಿವಾಸಿ ಆಟೋ ಚಾಲಕ ಚಾಂದಭಾಷಾ ಚಿತ್ತಾಪೂರ(23), ಲಕ್ಷ್ಮೇಶ್ವರ ಇಂದಿರಾ ನಗರದ ಸಂತೋಷ ಗಬ್ಬೂರ(24), ಲಕ್ಷ್ಮೇಶ್ವರದ ರಶೀದ್‌ ಅಹ್ಮದ್‌ ಸಮಗಾರ(22) ಎಂಬವರನ್ನು ಬಂಧಿಸಲಾಗಿದೆ.
ಏಳು ಮಂದಿ ಅಂತಾರಾಜ್ಯ ಕಾರು ಕಳ್ಳರ ಬಂಧನ; ₹4 ಕೋಟಿ ಮೌಲ್ಯದ 48 ಕಾರುಗಳ ವಶ..!
ಹಂಸಭಾವಿ ಠಾಣಾ ವ್ಯಾಪ್ತಿಯಲ್ಲಿ 3 ಹಾಗೂ ಹೊಳೆಆಲೂರ ಓಪಿ ಠಾಣೆ ವ್ಯಾಪ್ತಿಯಲ್ಲಿ1 ಮನೆಗಳ್ಳತನ ಪ್ರಕರಣ ಪತ್ತೆಯಾಗಿದೆ. ಆರೋಪಿಗಳು ರೋಣ ಶ್ರೀಸಾಯಿ ನಗರದ ಮಾಜಿ ಸೈನಿಕರೊಬ್ಬರ ಮನೆಗಳ್ಳತನಕ್ಕೆ ಯತ್ನಿಸುದ್ದಾಗ ಆರೋಪಿ ಫಾರುಕ್‌ ಅಬ್ದುಲ್‌ ತುರೇದನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿಯಲ್ಲಿ ಮುಗಿಯದ ಅತೃಪ್ತಿ; ಸಿಎಂ ಕರೆದಿದ್ದ ಔತಣಕೂಟಕ್ಕೆ 28ಕ್ಕೂ ಅಧಿಕ ಶಾಸಕರು ಗೈರು..!
ಪಿಎಸ್‌ಐ ವಿನೋದ ಪೂಜಾರಿ ನೇತೃತ್ವದಲ್ಲಿ ರಚಿಸಿದ ತಂಡದಲ್ಲಿ ಕುಮಾರ ಚಿಂಗಾರಿ, ಮಂಜುನಾಥ ಕುರಿ, ಯಲ್ಲಪ್ಪ ಬೇವಿನ ಗಿಡದ,ಎಸ್‌.ಬಿ.ಗೂಳಪ್ಪನವರ,ಎಂ.ಎಲ ಭಜಂತ್ರಿ, ಮೇಘರಾಜ ಅಲ್ಲಿಪೂರ, ಶಿವಕುಮಾರ ಮಹಾಮನಿ,ಎಸ್‌.ಪಿ.ಬಗಲಿ,ರಾಮು ಮಾಳೋತ್ತರ,ಪಿ.ಆರ್‌.ಹೊಂಬಳ,ಎಚ್‌.ಎಸ್‌.ಶಂಕ್ರಿ, ಶರಣಪ್ಪ ಸೇರಿದಂತೆ ಡಿಸಿಆರ್‌ ಬಿ ವಿಭಾಗದ ಗುರುರಾಜ ಬೂದಿಹಾಳ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ