ಆ್ಯಪ್ನಗರ

ಟ್ಯಾಂಕರ್‌ ನೀರಿಗೆ 600 ರೂ. !

ರೋಣ : ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದ್ದು, ಕುಡಿಯುವ ನೀರಿನ ತಾಪತ್ರಯ ಮಿತಿ ಮೀರುತ್ತಿದೆ. ಪಟ್ಟಣದ 23 ವಾರ್ಡುಗಳಲ್ಲೂ ಸರಾಸರಿ 18-20 ದಿನಕ್ಕೊಮ್ಮೆ ನಲ್ಲಿ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ ಜನತೆ ಅನಿವಾರ್ಯವಾಗಿ ಟ್ಯಾಂಕರ್‌ ನೀರಿಗೆ ಮೊರೆ ಹೋಗುತ್ತಿದ್ದಾರೆ. ಒಂದು ಟ್ಯಾಂಕರ್‌ ನೀರಿಗೆ 400 ರಿಂದ 600 ರೂ. ವರೆಗೆ ದರ ನಿಗದಿ ಮಾಡಿದ್ದಾರೆ.

Vijaya Karnataka 14 Mar 2019, 5:00 am
ರೋಣ : ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದ್ದು, ಕುಡಿಯುವ ನೀರಿನ ತಾಪತ್ರಯ ಮಿತಿ ಮೀರುತ್ತಿದೆ. ಪಟ್ಟಣದ 23 ವಾರ್ಡುಗಳಲ್ಲೂ ಸರಾಸರಿ 18-20 ದಿನಕ್ಕೊಮ್ಮೆ ನಲ್ಲಿ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ ಜನತೆ ಅನಿವಾರ್ಯವಾಗಿ ಟ್ಯಾಂಕರ್‌ ನೀರಿಗೆ ಮೊರೆ ಹೋಗುತ್ತಿದ್ದಾರೆ. ಒಂದು ಟ್ಯಾಂಕರ್‌ ನೀರಿಗೆ 400 ರಿಂದ 600 ರೂ. ವರೆಗೆ ದರ ನಿಗದಿ ಮಾಡಿದ್ದಾರೆ.
Vijaya Karnataka Web GDG-13 RON 2
ರೋಣ ಪಟ್ಟಣದಲ್ಲಿ ನೀರು ಮಾರಾಟ ಮಾಡಲಾಗುತ್ತಿದೆ.


ಸತತ 4ವರ್ಷಗಳ ಬರಗಾಲದ ಪರಿಣಾಮ ಎಲ್ಲೆಡೆ ನೀರಿನ ಮೂಲ ಬತ್ತಿವೆ. ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ಯಾಂಕರ್‌ ಮಾಲೀಕರು ಸಹಜವಾಗಿಯೇ ಪ್ರತಿ ಟ್ರಿಪ್‌ ನೀರಿನ ದರ ಏರಿಸಿದ್ದಾರೆ.

ತಾಲೂಕು ಕೇಂದ್ರ ರೋಣ ಸೇರಿದಂತೆ ಗಜೇಂದ್ರಗಡ, ನರೇಗಲ್‌ ಪಟ್ಟಣಗಳಲ್ಲದೆ ವಿವಿಧ ಗ್ರಾಮಗಳ ಜನತೆ ಪ್ರತಿ ತಿಂಗಳು ನೀರಿಗಾಗಿಯೇ 1,200 ರಿಂದ 1500 ರೂ. ವರೆಗೆ ವೆಚ್ಚಮಾಡುವಂತಾಗಿದೆ.

200 ರೂ. ಏರಿಕೆ :

ಬೇಸಿಗೆ ಆರಂಭದಲ್ಲಿಯೇ ಟ್ರ್ಯಾಕ್ಟರ್‌ ಟ್ಯಾಂಕರ್‌ ಪ್ರತಿ ಟ್ರಿಪ್‌ಗೆ ಗರಿಷ್ಠ ರೂ.600 ದರ ಕಂಡು ಬರುತ್ತಿದೆ. ಪಟ್ಟಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 400 ರಿಂದ 550 ಮತ್ತು 600 ವರೆಗೆ ಏರಿಕೆ ಕಂಡಿದೆ. ಖಾಸಗಿ ಕಂಪನಿಗಳು ಪೂರೈಸುವ 20 ಲೀ.ನ ಶುದ್ಧ ನೀರಿನ ಕ್ಯಾನ್‌ಗೆ 80 ರೂ, 200 ಎಂಎಲ್‌ನ ಪೌಚ್‌ಗೆ 2 ರೂ. ದರವಿದೆ. ಹೋಟೆಲ್‌, ಖಾನಾವಳಿ, ಚಿಕ್ಕ ಕ್ಯಾಂಟಿನ್‌ ಮಾಲೀಕರು ಟ್ಯಾಂಕರ್‌ ನೀರನ್ನು ಅವಲಂಬಿಸಿದ್ದಾರೆ. ಸಮರ್ಪಕವಾಗಿ ನೀರು ಪೂರೈಕೆಯಾಗದ ಪ್ರದೇಶಗಳ ಜನರೂ ನಿಯಮಿತವಾಗಿ ಟ್ಯಾಂಕರ್‌ ನೀರು ತರಿಸಿಕೊಳ್ಳುತ್ತಿದ್ದಾರೆ. ನೀರು ಸಂಗ್ರಹಕ್ಕಾಗಿಯೇ ದೊಡ್ಡ ಸಂಪ್‌, ಸಿಂಟೆಕ್ಸ್‌ ಅಳವಡಿಸಿಕೊಂಡಿದ್ದಾರೆ. ಕಳೆದ ವರ್ಷ ಒಂದು ಟ್ರಿಪ್‌ಗೆ ಗರಿಷ್ಠ 400 ರೂ. ದರವಿತ್ತು. ಈ ಬಾರಿ ಬೇಡಿಕೆ ಹೆಚ್ಚಿರುವುದು ಹಾಗೂ ನೀರಿನ ಮೂಲ ಕಡಿಮೆಯಾದ ಹಿನ್ನೆಲೆ ದರ ಹೆಚ್ಚಳವಾಗಿದೆ.

ಏರಿಕೆ ಅನಿವಾರ್ಯ :

ಬೇಸಿಗೆಯ ಮಾರ್ಚ್‌, ಏಪ್ರಿಲ್‌, ಮೇ ನಲ್ಲಿ ಸಹಜವಾಗಿಯೇ ನೀರಿನ ಬೇಡಿಕೆ ಹೆಚ್ಚುತ್ತದೆ. ದಿನಕ್ಕೆ 20 ರಿಂದ 25 ಟ್ಯಾಂಕರ್‌ ನೀರು ಪೂರೈಸುತ್ತೇವೆ. ಡಿಸೇಲ್‌ ಖರ್ಚು,ಚಾಲಕರ ವೇತನ, ವಿದ್ಯುತ್‌ ಶುಲ್ಕ ಏರಿಕೆ ಕಂಡಿದೆ.ಪಟ್ಟಣಗಳಲ್ಲಿ ನೀರು ಸಿಗುತ್ತಿಲ್ಲ, ಮೂಲದಿಂದ ತಂದು ನೀರು ಪೂರೈಸಬೇಕು ಹೀಗಾಗಿ ಬೆಲೆ ಏರಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಖಾಸಗಿ ಟ್ಯಾಂಕರ್‌ ಮಾಲೀಕರೊಬ್ಬರು. ಬೇಸಿಗೆಯಲ್ಲಿ ಬೆಳಗಿನ ಜಾವ 5 ರಿಂದ ರಾತ್ರಿ 8 ರವರೆಗೆ ನಿಯಮಿತವಾಗಿ ನೀರು ಪೂರೈಸುತ್ತೇವೆ, ಆಸ್ಪತ್ರೆ, ಹೋಟೆಲ್‌, ವಸತಿ ನಿಲಯ,ಮನೆಗಳವರು ನೀರು ತರಿಸಿಕೊಳ್ಳುತ್ತಾರೆ ಎಂದು ವಿವರಿಸಿದರು

20 ದಿನಕ್ಕೊಮ್ಮೆ ನೀರು :

ರೋಣ ಪಟ್ಟಣದ 23 ವಾರ್ಡುಗಳು ಸೇರಿದಂತೆ ವಿವಿಧ ಬಡಾವಣೆಗಳಿಗೆ ಸರಾಸರಿ 20 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕೆಲವೊಮ್ಮೆ ಏರಿಯಾದ ಕೊನೆ ಮನೆಗೆ ನೀರು ಮುಟ್ಟುವುದಿಲ್ಲ. ಇಡೀ ತಿಂಗಳು ಬಳಕೆಗೆ ಅದು ಸಾಕಾಗುವುದಿಲ್ಲ. ಅನಿವಾರ್ಯವಾಗಿ ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳುವುದು ಅನಿವಾರ‍್ಯ ಎನ್ನುತ್ತಾರೆ ಜನರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ