ಆ್ಯಪ್ನಗರ

ಎಸ್ಸಿ,ಎಸ್ಟಿ ಸಭೆ ರದ್ದು, ಡಿಎಸ್‌ಎಸ್‌ ಅಕ್ರೋಶ

ನರಗುಂದ: 2019-20 ನೆ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಕುಂದುಕೊರತೆ ಸಭೆ ಆಯೋಜಿಸಿದ್ದ ತಹಸೀಲ್ದಾರರು ಸೂಚನೆ ನೀಡದೇ ಏಕಾಏಕಿ ಸಭೆ ರದ್ದು ಪಡಿಸಿರುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Vijaya Karnataka 28 Sep 2019, 5:00 am
ನರಗುಂದ: 2019-20 ನೆ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಕುಂದುಕೊರತೆ ಸಭೆ ಆಯೋಜಿಸಿದ್ದ ತಹಸೀಲ್ದಾರರು ಸೂಚನೆ ನೀಡದೇ ಏಕಾಏಕಿ ಸಭೆ ರದ್ದು ಪಡಿಸಿರುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web sc st meeting cancellation dss outrage
ಎಸ್ಸಿ,ಎಸ್ಟಿ ಸಭೆ ರದ್ದು, ಡಿಎಸ್‌ಎಸ್‌ ಅಕ್ರೋಶ

ಸೆ.27ರಂದು ಬೆಳಗ್ಗೆ 11 ಗಂಟೆಗೆ ಕುಂದುಕೊರತೆ ಸಭೆಯಿದೆ ಎಂದು ಸೂಚನಾ ಪತ್ರ ಕಳುಹಿಸಿದ್ದರಿಂದ ಕುಂದುಕೊರತೆ ನಿವಾರಣೆಯಾಗುತ್ತದೆ ಎಂದು ವಿಶ್ವಾಸದಿಂದ ಸಭೆಗೆ ಆಗಮಿಸಿದರೆ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿಯಾಗಿ ಸಭೆ ರದ್ದುಪಡಿಸಿದ್ದು ಅಲ್ಲದೆ, ಸಭೆಯ ಮುಂದಿನ ಮಾಹಿತಿ ನೀಡಿಲ್ಲ. ಇದರಿಂದ ಮಾನಸಿಕವಾಗಿ ನೋವುಂಟು ಮಾಡಿದೆ. ಎಸ್‌ಸಿ, ಎಸ್‌ಟಿ ಪಂಗಡಗಳ ಜನರ ಬಗ್ಗೆ ತಾಲೂಕು ಆಡಳಿತ ನಿಷ್ಕಾಳಜಿ ತೋರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಸಿ, ಎಸ್‌ಟಿ ಪಂಗಡಗಳ ಕುಂದುಕೊರತೆ ಮುಂದಿನ ಸಭೆಯ ಮಾಹಿತಿ ನೀಡುವಂತೆ ಒತ್ತಾಯಿಸಿ ಶಿರಸ್ತೇದಾರ ಸುರೇಶ ಅಡವಿ ಅವರ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ ಸಂದರ್ಭದಲ್ಲಿಪ್ರಕಾಶ ಕಲ್ಲೇಕನವರ, ಎನ್‌.ಆರ್‌.ಚಲವಾದಿ, ಪಿ.ಜಿ.ಚಲವಾದಿ, ನಾಗರಾಜ ಜೋಗಣ್ಣವರ, ಕೆ.ಎಚ್‌.ಜೋಗನ್ನವರ, ಎಂ.ಎಸ್‌.ತಳವಾರ, ಎಸ್‌.ಕೆ.ದಂಡಾಪುರ,ಎಫ್‌.ಎಂ.ಮಾದರ, ಬಸಪ್ಪ ಮಾದರ, ರಾಜು ಚಲವಾದಿ, ನಿಂಗಪ್ಪ ದಿಬ್ಬದಮನಿ, ಫಕ್ಕೀರಪ್ಪ ಮಾದರ, ಶರಣಪ್ಪ ಮ್ಯಾಗೇರಿ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ