ಆ್ಯಪ್ನಗರ

ಪಶು ಆಸ್ಪತ್ರೆ ಎದುರು ಕುರಿಗಾರರ ಪ್ರತಿಭಟನೆ

ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಕುರಿಗಳು ನೀಲಿ ನಾಲಿಗೆ ರೋಗಕ್ಕೆ (ಬಾಯಿಬೇನೆ) ತುತ್ತಾಗಿ ಸಾವುಗೀಡಾಗುತ್ತಿದ್ದರೂ ಪಶು ವೈದ್ಯರು ಚಿಕಿತ್ಸೆಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಕುರಿಗಾರರು ಸೋಮವಾರ ಪಶು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

Vijaya Karnataka 12 Nov 2019, 5:00 am
ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಕುರಿಗಳು ನೀಲಿ ನಾಲಿಗೆ ರೋಗಕ್ಕೆ (ಬಾಯಿಬೇನೆ) ತುತ್ತಾಗಿ ಸಾವುಗೀಡಾಗುತ್ತಿದ್ದರೂ ಪಶು ವೈದ್ಯರು ಚಿಕಿತ್ಸೆಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಕುರಿಗಾರರು ಸೋಮವಾರ ಪಶು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web 11GJD1_25
ಗಜೇಂದ್ರಗಡದಲ್ಲಿಸೋಮವಾರ ಬಾಯಿಬೇನೆ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಕುರಿಗಳು ಸಾವನ್ನಪ್ಪಿವೆ.


ಇವತ್ತು ಎರಡು ಕುರಿಗಳು ಸತ್ತಿವೆ. ಮೊನ್ನೆ ನಾಲ್ಕು ಕುರಿಗಳು ಅಸುನೀಗಿವೆ. ಸರಕಾರಿ ಪಶು ಆಸ್ಪತ್ರೆಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ನಿತ್ಯ ಹೀಗೆ ಕುರಿಗಳು ಸಾವಿಗೀಡಾದರೆ ಕುರಿಗಾರ ಬದುಕು ಮೂರಾಬಟ್ಟೆಯಾಗುತ್ತಿದೆ ಎಂದು ಕುರಿಗಾರ ಪರಸಪ್ಪ ಅರಗಂಜಿ ಅಳಲು ತೋಡಿಕೊಂಡರು.

ರೋಗ ನಿವಾರಣೆಗೆ ಒಂದು ಇಂಜಕ್ಷನ್‌ಗೆ 500- 800 ರೂ. ವರೆಗೆ ಖರ್ಚಾಗಲಿದೆ. ಇದು ಸರಕಾರದಿಂದ ಪೂರೈಕೆಯಾಗುತ್ತಿಲ್ಲ. ಖಾಸಗಿ ಅಂಗಡಿಯಲ್ಲಿದುಪ್ಪಟ್ಟು ದುಡ್ಡು ಕೊಟ್ಟು ತರುವ ದುಸ್ಥಿತಿ ಇದೆ. ಪಶು ವೈದ್ಯರು ಕುರಿಗಾರರಿಗೆ ಸಮರ್ಪಕ ಮಾಹಿತಿ ಕೊಡೆದೇ ಇಂಜಕ್ಷನ್‌ ಹೊರೆಗೆ ತರಲು ಚೀಟಿ ಬರೆದು ಕೊಡುತ್ತಿದ್ದಾರೆ. ಸರಕಾರದಿಂದ ಪೂರೈಸಿರುವ ಔಷಧಿಗಳು ಎಲ್ಲಿಹೋದವು ಎಂದು ಭೀಮಣ್ಣ ಇಂಗಳೆ ದೂರಿದರು.

ನಿತ್ಯ ಹಲವು ಕುರಿಗಳು ಬಾಯಿಬೇನೆ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದರೂ ಸೂಕ್ತ ಚಿಕಿತ್ಸೆ ಕ್ರಮಕ್ಕೆ ಮುಂದಾಗದ ಪಶು ವೈದ್ಯರು ಉಡಾಫೆ ಉತ್ತರ ನೀಡುತ್ತಿದ್ದಾರೆ. ಜಿಲ್ಲಾಡಳಿತ ತೊಂದರೆಯಲ್ಲಿರುವ ಕುರಿಗಾರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಮಾರಣಾಂತಿಕ ರೋಗಕ್ಕೆ ತುತ್ತಾಗಿ ನಿತ್ಯ ಹಲವಾರು ಕುರಿಗಳು ಸಾವಿಗೆ ಶರಣಾಗುತ್ತಿವೆ. ತಾಲೂಕು ಆಡಳಿತ ಕಣ್ಮುಚ್ಚಿದೆ. ಪಶು ಆಸ್ಪತ್ರೆ ಯಲ್ಲಿವೈದ್ಯರು ನಿರ್ಲಕ್ಷಿಸುತ್ತಿದ್ದಾರೆ. ಮಾರಕ ರೋಗಕ್ಕೆ ಇಂಜಕ್ಷನ್‌ ಪೂರೈಕೆ ವ್ಯವಸ್ಥೆ ಮಾಡದಿದ್ದರೆ ಮತ್ತು ಇದೇ ಸ್ಥಿತಿ ಮುಂದುವರಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ರಮೇಶ ಮಡಿವಾಳರ ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ