ಆ್ಯಪ್ನಗರ

ಕೊಚ್ಚಿ ಹೋದ ಶಿರೋಳ ರಸ್ತೆ: ಆಸ್ಪತ್ರೆಗೆ ನುಗ್ಗಿದ ನೀರು

ನರಗುಂದ : ಮಲಪ್ರಭಾ ಪ್ರವಾಹಕ್ಕೆ ಶಿರೋಳ ಗ್ರಾಮ ಭಾಗಶಃ ಜಲಾವೃತಗೊಂಡು ಅಪಾರ ಆಸ್ತಿ,ಬೆಳೆ ನಷ್ಟವಾಗಿದ್ದು ಕೊಣ್ಣೂರ ಶಿರೋಳ ರಸ್ತೆ ಕೊಚ್ಚಿ ಹೋಗಿದ್ದರಿಂದ ಸಂಪರ್ಕ ಕಡಿತಗೊಂಡಿದೆ.

Vijaya Karnataka 12 Aug 2019, 5:00 am
ನರಗುಂದ : ಮಲಪ್ರಭಾ ಪ್ರವಾಹಕ್ಕೆ ಶಿರೋಳ ಗ್ರಾಮ ಭಾಗಶಃ ಜಲಾವೃತಗೊಂಡು ಅಪಾರ ಆಸ್ತಿ,ಬೆಳೆ ನಷ್ಟವಾಗಿದ್ದು ಕೊಣ್ಣೂರ ಶಿರೋಳ ರಸ್ತೆ ಕೊಚ್ಚಿ ಹೋಗಿದ್ದರಿಂದ ಸಂಪರ್ಕ ಕಡಿತಗೊಂಡಿದೆ.
Vijaya Karnataka Web GDG-11NRD2
ನರಗುಂದ ತಾಲೂಕು ಶಿರೋಳ ಗ್ರಾಮಕ್ಕೆ ತೆರಳುವ ಕೊಣ್ಣೂರ -ಶಿರೋಳ ರಸ್ತೆ ಕೊಚ್ಚಿ ಹೋಗಿದೆ.


ಶಿರೋಳ ಗ್ರಾಮದ ಸರಕಾರಿ ಆಸ್ಪತ್ರೆಗೆ ನೀರು ನುಗ್ಗಿದ್ದರಿಂದ ಸಂತ್ರಸ್ತರ ಆರೋಗ್ಯ ಸೇವೆಗೆ ಸ್ಥಗಿತಗೊಂಡಿದ್ದು ವೈದ್ಯರು, ಸಿಬ್ಬಂದಿ ಕಾಳಜಿ ಕೇಂದ್ರಗಳ ಸಂತ್ರಸ್ತರ ಸೇವೆಯಲ್ಲಿ ತೊಡಗಿದ್ದು ಕಂಡು ಬಂದಿತು. ಗ್ರಾಮದ ತೋಂಟದಾರ್ಯದ ದ್ವಾರಬಾಗಿಲು ವರೆಗೂ ಪ್ರವಾಹ ಹರಿದು ಬಂದಿದ್ದು ಮಠ ಹಾಗೂ ಸುತ್ತಮುತ್ತಲಿನ ಮನೆಗಳು, ಶಾಲೆ, ಕಾಲೇಜುಗಳು ಜಲಾವೃತಗೊಂಡಿವೆ.

ಶಿರೋಳ ರಸ್ತೆ ಮೇಲೆ ಭಾರಿ ನೀರು ಹರಿದ ಪರಿಣಾಮ ಡಾಂಬರ್‌ ಕಿತ್ತು ಸಂಚಾರ ಸ್ಥಗಿತಗೊಂಡಿದೆ. ಪ್ರವಾಹ ಇಳಿದರೂ ಕೊಣ್ಣೂರ ಕಲ್ಲಾಪೂರ, ಕಪ್ಪಳಿ, ಶಿರೋಳ ಗ್ರಾಮದ ಸಂಪರ್ಕ ಕಡಿತಗೊಂಡಿದ್ದು ಜನ ಪರದಾಡುವಂತಾದೆ.

ಶಿರೋಳ ಗ್ರಾಮದಲ್ಲಿ ಅನೇಕ ಮನೆಗಳು ಕುಸಿದಿದ್ದು ಪ್ರವಾಹ ಇಳಿಯುತ್ತಿದ್ದಂತೆ ತಮ್ಮ ಮನೆ ಪರಿಸ್ಥಿತಿ ಕಂಡು ಮಮ್ಮಲ ಮರಗಿದ ಗ್ರಾಮಸ್ಥರು ಅಪಾಯದ ಸ್ಥಿತಿಯಲ್ಲಿರುವ ಮಣ್ಣಿನ ಮನೆಯಲ್ಲಿನ ವಸ್ತುಗಳನ್ನು ಹೊರಗೆ ತಂದು ಸುರಕ್ಷಿತ ಸ್ಥಳದಕ್ಕೆ ಹೋಗುತ್ತಿರುವ ದೃಶ್ಯ ಮನಕುಲುಕವಂತ್ತಿತ್ತು. ಕಾಂಕ್ರಿಟ್‌ ಕಟ್ಟಡ ಹೊಂದಿರುವ ಸಂತ್ರಸ್ತರು ನುಗ್ಗಿದ ರಾಡಿ ನೀರನ್ನು ಹೊರ ಹಾಕಿ ಸ್ವಚ್ಛತೆಯಲ್ಲಿ ತೊಡಗಿದ್ದರು.

ಮತ್ತೆ ನೀರಿನ ಹರಿವು ಹೆಚ್ಚಳ:
ಗ್ರಾಮದಲ್ಲಿ ಶನಿವಾರ ಪ್ರವಾಹ ಇಳಿದಿದ್ದರಿಂದ ತೋಂಟದಾರ್ಯ ಮಠದ ಸುತ್ತ ಮುತ್ತಲಿನ ನಿವಾಸಿಗಳು ತಮ್ಮ ಮನೆಗೆ ತೆರಳಿ ಪರಿಸ್ಥಿತಿ ಕಂಡು ಬೆರಗಾಗಿದ್ದರು. ಮತ್ತೆ ನದಿಗೆ ಹೆಚ್ಚುವರಿ ನೀರು ಬಿಟ್ಟಿದ್ದರಿಂದ ಮತ್ತೆ ಮಠದ ಸುತ್ತ ನೀರು ಆವರಿಸಿದ್ದರಿಂದ ಮತ್ತೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ