ಆ್ಯಪ್ನಗರ

ಶಿವು ಸಾವು ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

ಗದಗ : ಬಾಗೇವಾಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಗೋಪಾಲಕ ಶಿವು ಉಪ್ಪಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಶ್ರೀರಾಮ ಸೇನೆಯ ಕಾರ್ಯಕರ್ತರು ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಿದರು.

Vijaya Karnataka 5 Jun 2019, 5:00 am
ಗದಗ : ಬಾಗೇವಾಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಗೋಪಾಲಕ ಶಿವು ಉಪ್ಪಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಶ್ರೀರಾಮ ಸೇನೆಯ ಕಾರ್ಯಕರ್ತರು ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಿದರು.
Vijaya Karnataka Web GDG-4RUDRAGOUD2
ಶಿವು ಉಪ್ಪಾರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠರಿಗೆ ಮನವಿ ಸಲ್ಲಿಸಿದರು.


ಮಹಾವೀರ ವರ್ತುಳದಿಂದ ಪ್ರಾರಂಭವಾದ ಈ ಪ್ರತಿಭಟನಾ ರಾರ‍ಯಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಐದು ವರ್ಷಗಳಿಂದ ಗೋಹತ್ಯೆ ಪ್ರಮಾಣ ಹೆಚ್ಚಾಗುತ್ತಿದೆ. ಗೋಹತ್ಯೆಗೆ ರಾಜ್ಯ ಸರಕಾರ ಸಹ ಪರೋಕ್ಷ ವಾಗಿ ಸಹಕಾರ ನೀಡುತ್ತಿದೆಯೆಂದು ಆರೋಪಿಸಿದರು.

ಬೆಳಗಾವಿ ಜಿಲ್ಲೆಯ ಬಾಗೇವಾಡಿಯಲ್ಲಿ ಗೋಹತ್ಯೆ ವಿರೋಧಿಸುತ್ತಿದ್ದ ಶಿವು ಉಪ್ಪಾರನ ಸಾವಿನಲ್ಲಿ ಅನುಮಾನ ಇದೆ. ಈ ಘಟನೆಯಲ್ಲಿ ಕೆಲ ಕಾಣದ ಕೈಗಳು ಕೆಲಸ ನಿರ್ವಹಿಸುತ್ತಿವೆ. ಈ ಪ್ರಕರಣವನ್ನು ರಾಜ್ಯ ಸರಕಾರ ಕೂಡಲೇ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಗೋಹತ್ಯೆ ಕಾನೂನನ್ನು ಸಮರ್ಪಕವಾಗಿ ಜಾರಿಗೋಳಿಸಬೇಕು. ಗೋಹತ್ಯೆ ಮಾಡುವವರು ಗೋಹತ್ಯೆಗೆ ಪ್ರೇರೇಪಿಸುವವರನ್ನು ಉಗ್ರ ಶಿಕ್ಷೆಗೋಳಪಡಿಸುವಂತೆ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಸ್ವೀಕರಿಸಿದರು.

ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ,ಸಂಚಾಲಕ ಮಹೇಶ ರೋಖಡೆ, ಸುರೇಶ ಹಾದಿಮನಿ, ಸುರೇಶ ಹೆಬಸೂರ, ಪಂಚಾಕ್ಷ ರಿ ಅಂಗಡಿ, ರಾಹುಲ್‌ ಸುಗಂಧಿ,ರಾಜೂ ಗದ್ದಿ, ಸಂಜೀವ ಸೂರ್ಯವಂಶಿ, ಕಿರಣ ಹಿರೇಮಠ, ಸದಾನಂದಸಿಂಗ್‌ ಗುರ್ಲಹೊಸೂರ, ವಿನಾಯಕ ಈಟಿ, ಕಾರ್ತೀಕ ಲದ್ವಾ, ಹನುಮಂತಸಾ ಕಲಬುರ್ಗಿ, ಈರಣ್ಣ ಗಾಣಿಗೇರ, ಪ್ರಕಾಶ ಗುಜರಾತಿ, ರಾಕೇಶ ಆಲೂರ, ರಾಕೇಶ ನವಲಗುಂದ, ವೀರೇಶ ನಾಲ್ವಾಡದ, ಮಹಾಂತೇಶ ಪಾಟೀಲ, ವೀರೇಶ ಮಾನ್ವಿ, ಹುಲಗಪ್ಪ ವಾಲ್ಮೀಕಿ,ಗೋಣಿಬಸಪ್ಪ ಕರಿಗಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ