ಆ್ಯಪ್ನಗರ

ಅವಳಿ ನಗರದಲ್ಲಿ ತುಂತುರು ಮಳೆ

ಗದಗ : ಕಳೆದ ಕೆಲವು ದಿನಗಳಿಂದ ಮರೆಯಾಗಿದ್ದ ಮಳೆರಾಯ ಮತ್ತೆ ಕಾಣಿಸಿಕೊಂಡಿದ್ದಾನೆ. ಅವಳಿ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ತುಂತುರು ಮಳೆಯಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ-ಬಿಸಿಲಿನ ಜುಗಲ್‌ಬಂದಿ ನಡೆದಿತ್ತು. ಮಧ್ಯಾಹ್ನ ಏಕಾಏಕಿ ಅರ್ಧ ಗಂಟೆಗೂ ಹೆಚ್ಚು ಸಮಯ

Vijaya Karnataka 27 Jul 2019, 5:00 am
ಗದಗ : ಕಳೆದ ಕೆಲವು ದಿನಗಳಿಂದ ಮರೆಯಾಗಿದ್ದ ಮಳೆರಾಯ ಮತ್ತೆ ಕಾಣಿಸಿಕೊಂಡಿದ್ದಾನೆ. ಅವಳಿ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ತುಂತುರು ಮಳೆಯಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ-ಬಿಸಿಲಿನ ಜುಗಲ್‌ಬಂದಿ ನಡೆದಿತ್ತು. ಮಧ್ಯಾಹ್ನ ಏಕಾಏಕಿ ಅರ್ಧ ಗಂಟೆಗೂ ಹೆಚ್ಚು ಸಮಯ ಜೋರಾದ ಮಳೆ ಸುರಿಯಿತು. ಇಡೀ ದಿನ ಎಲ್ಲೆಡೆ ಮೋಡ ಮುಸುಕಿದ ವಾತಾವರಣ ಕಂಡುಬಂದಿತು. ಮಧ್ಯಾಹ್ನದಿಂದ ತುಂತುರು ಮಳೆ ಆರಂಭವಾಯಿತು. ತುಂತುರು ಮಳೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಪರದಾಡಿದರು. ಹೀಗಾಗಿ ದೂಳಿನಿಂದ ಕೂಡಿದ್ದ ರಸ್ತೆಗೆ ತುಂತುರು ಮಳೆಯಿಂದ ಸ್ವಲ್ಪ ಧೂಳು ಕಡಿಮೆಯಾಗಿದೆ. ಹೀಗಾಗಿ ವಾಹನ ಸವಾರರು ಹಗಲಿನಲ್ಲಿ ಲೈಟ್‌ ಹಾಕಿಕೊಂಡು ಓಡಾಡುವ ಪ್ರಸಂಗ ಎದುರಾಗಿತ್ತು. ತುಂತುರು ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
Vijaya Karnataka Web GDG-26RUDRAGOUD8
ಗದಗನಲ್ಲಿ ಮಧ್ಯಾಹ್ನ ಆರಂಭವಾದ ತುಂತುರು ಮಳೆಯಲ್ಲಿ ಪ್ರಯಾಣಿಕರು ರಸ್ತೆ ದಾಟಲು ಪರದಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ