ಆ್ಯಪ್ನಗರ

ಶ್ರೀ ನೀಲಕಂಠೇಶ್ವರ ಮಹೋತ್ಸವ ಸಂಭ್ರವ

ಗಜೇಂದ್ರಗಡ : ಸ್ಥಳೀಯ ಕುರುವಿನಶೆಟ್ಟಿ ಸಮಾಜದ ವತಿಯಿಂದ ಸೋಮವಾರ ಶ್ರೀ ನೀಲಕಂಠೇಶ್ವರ ಮಹೋತ್ಸವ ನಿಮಿತ್ತ ಬೃಹತ್‌ ಮೆರವಣಿಗೆ ನಡೆಯಿತು.

Vijaya Karnataka 20 Aug 2019, 5:00 am
ಗಜೇಂದ್ರಗಡ : ಸ್ಥಳೀಯ ಕುರುವಿನಶೆಟ್ಟಿ ಸಮಾಜದ ವತಿಯಿಂದ ಸೋಮವಾರ ಶ್ರೀ ನೀಲಕಂಠೇಶ್ವರ ಮಹೋತ್ಸವ ನಿಮಿತ್ತ ಬೃಹತ್‌ ಮೆರವಣಿಗೆ ನಡೆಯಿತು.
Vijaya Karnataka Web shri neelakantheshwara jubilee celebration
ಶ್ರೀ ನೀಲಕಂಠೇಶ್ವರ ಮಹೋತ್ಸವ ಸಂಭ್ರವ


ಶ್ರೀ ನೀಲಕಂಠೇಶ್ವರ ಮಠದಿಂದ ಪ್ರಾರಂಭವಾದ ಮೆರವಣಿಗೆ ಬಸವೇಶ್ವರ ವೃತ್ತ, ದುರ್ಗಾವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ ಸೇರಿದಂತೆ ಪ್ರಮುಖ ಬೀದಿಯಲ್ಲಿ ಸಂಚರಿಸಲಾಯಿತು. ಸಮಾಜದ ಅಧ್ಯಕ್ಷ ಮೋಹನ ಕನಕೇರಿ, ಶಿವಪುತ್ರಪ್ಪ ಸಂಕನೂರ, ಜಗದೀಶ ಕವಡಿಮಟ್ಟಿ, ಶಾಮಣ್ಣಾ ವನ್ನಾಲ, ಮುದಕಪ್ಪ ಬುಟ್ಟಾ, ರುದ್ರಪ್ಪ ಸೂಡಿ, ಶಿವಬಸಪ್ಪ ಡೊಳ್ಳಿನ, ಡಾ. ಗುಗ್ಗರಿ, ತಿಮ್ಮಣ್ಣಾ ವನ್ನಾಲ, ಬಸವರಾಜ ಸೂಡಿ, ಜಗದೀಶ ಕನಕೇರಿ, ಶಂಬು ಕವಡಿಮಟ್ಟಿ, ನಿಂಗಪ್ಪ ಸಮಗಂಡಿ, ಶಂಕ್ರಪ್ಪ ಸಂಕನೂರ, ಕಳಕೇಶ ವನ್ನಾಲ, ಪ್ರಶಾಂತ ವನ್ನಾಲ ಇನ್ನಿತರಿದ್ದರು.

ಸನ್ಮಾನ ಕಾರ‍್ಯಕ್ರಮ:
ಸ್ಥಳೀಯ ಗವಿಮಠ ಆವರಣದಲ್ಲಿ ಸನ್ಮಾನ ಕಾರ‍್ಯಕ್ರಮವನ್ನು ವೈದ್ಯ ಸಿ.ವಿ. ಮಾಳಗಿ ಉದ್ಘಾಟಿಸಿದರು. ಮೋಹನ ಕನಕೇರಿ ಅಧ್ಯಕ್ಷ ತೆ ವಹಿಸಿದ್ದರು. ಬಿ.ಎಂ. ಸಜ್ಜನ, ಸುಹಾಸಕುಮಾರ ಪಟ್ಟೇದ, ಸಿದ್ಧಲಿಂಗಪ್ಪ ಕನಕೇರಿ, ವಿಜಯ ಮಾಳಗಿ, ಚಂಬಣ್ಣಾ ಐಲಿ, ಚಂದ್ರಕಲಾ ಐಲಿ, ಪ್ರಶಾಂತ ಹಿಂಡಿ, ಗುರುಬಸಪ್ಪ ಮಾದಗುಂಡಿ, ಸುರೇಶ ಮಂತಾ ಇನ್ನಿತರರಿದ್ದರು. ನಿವೃತ್ತ ಪ್ರಾ. ಪಾಂಡುರಂಗಪ್ಪ ಡೊಳ್ಳಿನ, ನಿವೃತ್ತ ಹೆಸ್ಕಾಂ ನೌಕರ ದೇವೇಂದ್ರಪ್ಪ ಜನಿಕಲ್‌ ಸನ್ಮಾನಿತರಾದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ