ಆ್ಯಪ್ನಗರ

ಅಂತೂರ ಗ್ರಾಪಂಗೆ ಮುತ್ತಿಗೆ, ಪ್ರತಿಭಟನೆ

ಮುಳಗುಂದ:ಸಮೀಪದ ಅಂತೂರ-ಬೆಂತೂರ ಗ್ರಾಮದ ರೈತರು ತಮ್ಮ ಹೊಲದ ರಸ್ತೆಗೆ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿಗ್ರಾಮ ಪಂಚಾಯ್ತಿ ಕಾರ‍್ಯಲಯಕ್ಕೆ ಟ್ಯ್ರಾಕ್ಟರ್‌ ಸಮೇತ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದರು.

Vijaya Karnataka 22 Jul 2019, 5:00 am
ಮುಳಗುಂದ:ಸಮೀಪದ ಅಂತೂರ-ಬೆಂತೂರ ಗ್ರಾಮದ ರೈತರು ತಮ್ಮ ಹೊಲದ ರಸ್ತೆಗೆ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿಗ್ರಾಮ ಪಂಚಾಯ್ತಿ ಕಾರ‍್ಯಲಯಕ್ಕೆ ಟ್ಯ್ರಾಕ್ಟರ್‌ ಸಮೇತ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದರು.
Vijaya Karnataka Web GDG-20MUL   2
ಮುಳಗುಂದ ಸಮೀಪದ ಅಂತೂರ-ಬೆಂತೂರ ರೈತರು ಸೇತುವೆ ಕಾಮಗಾರಿ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಪಂಗೆ ಟ್ರ್ಯಾಕ್ಟರ್‌ ಸಮೇತ ಮುತ್ತಿಗೆ ಹಾಕಿ ಪ್ರತಿಭಟಿಸಿದರು.


ಗ್ರಾಮದಿಂದ ನೀಲಗುಂದ ರಸ್ತೆಯಲ್ಲಿನ ಹಳ್ಳಕ್ಕೆ ಕಳೆದ 5 ವರ್ಷಗಳ ಹಿಂದೆ ಸೇತುವೆ ನಿರ್ಮಾಣ ಮಾಡಿದ್ದಾರೆ. ಇದರಿಂದ ಪೂರ್ವ ದಿಕ್ಕಿನ 50ಕ್ಕೂ ಹೆಚ್ಚಿನ ರೈತರ ನೂರಾರು ಎಕರೆ ಹೊಲದ ರಸ್ತೆಗೆ ಸಂಪೂರ್ಣ ದಾರಿ ಬಂದಾಗಿದೆ. ಈ ಸಮಸ್ಯೆ ಕುರಿತು 2014 ರಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯ್ತಿ ಹಾಗೂ ಆಗಿನ ಸಚಿವರಾಗಿದ್ದ ಎಚ್‌.ಕೆ.ಪಾಟೀಲ ಅವರ ಗಮನಕ್ಕೆ ತಂದು ಮನವಿ ಕೊಟ್ಟಿದ್ದೆವು. ಅವರು ಕೆಲಸ ಕೈಗೊಳ್ಳುವ ಸಂಬಂಧ 15 ಲಕ್ಷ ರೂ ಅನುದಾನ ಸಹ ಮಂಜೂರ ಮಾಡಿದ್ದರೂ. ಆದರೆ ಇಲ್ಲಿಯ ವರೆಗೂ ಕಾಮಗಾರಿ ನಡೆದಿಲ್ಲ. ಈ ಮಾರ್ಗವಾಗಿ ನಾವು ಎತ್ತು, ಚಕ್ಕಡಿ, ಟ್ರ್ಯಾಕ್ಟರ್‌ ತೆಗದುಕೊಂಡು ಕೃಷಿ ಕೆಲಸಕ್ಕೆ ಹೋಗುವುದು ದುಸ್ತರವಾಗಿದೆ. ಸಧ್ಯ ಮಳೆಯಾಗಿದ್ದು ಬೀಜ ಬಿತ್ತನೆಗೆ ಹೋಗಲಾಗುತ್ತಿಲ್ಲ, ಬಹುತೇಕ ಹೊಲಗಳು ಹಾಗೇ ಉಳಿದುಕೊಂಡಿವೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಜೂನ್‌ ನಲ್ಲಿ ಪಂಚಾಯಿತಿಯಿಂದ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಅನಿವಾರ‍್ಯತೆ ಉಂಟಾಗಿದೆ. ಕೂಡಲೆ ಮೇಲಾಧಿಕಾರಿಗಳು ಎಚ್ಚೆತ್ತು ಹೊಲದ ದಾರಿಗೆ ಸೇತುವೆ ಮಾಡಬೇಕು. ತಡವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರಾದ ಪಿ.ವಿ. ವೈ.ಐ.ಅಂಗಡಿ, ಶಾಂತಪ್ಪ ಜೈನರ, ಬಸವರಾಜ ಮಜ್ಜಿಗುಡ್ಡ, ಚನ್ನಯ್ಯ ಬೆಟಗೇರಿಮಠ, ರಾಮಣ್ಣ ಅಣ್ಣಿಗೇರಿ, ಬೂದಪ್ಪ ಆಲೂರ, ಸುಬಾನಸಾಬ, ಮೈಲಾರಪ್ಪ, ಬಸವರಾಜ ಅಂಗಡಿ, ದೇವಪ್ಪ ಪೂಜಾರ ಮೊದಲಾದವರು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ