ಆ್ಯಪ್ನಗರ

ಹೊಳಪಿಲ್ಲದ ರೇಷ್ಮೆ ...!

ಶಿರಹಟ್ಟಿ : ಉತ್ತರ ಕರ್ನಾಟಕದ ಏಕೈಕ ಸರಕಾರಿ ರೇಷ್ಮೆ ಗೂಡು ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಶಿರಹಟ್ಟಿಯ ಸರಕಾರಿ ರೇಷ್ಮೆ ಗೂಡು ಮಾರುಕಟ್ಟೆ ಹಾಗೂ ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರವು ಇದೀಗ ಅಧಿಕಾರಿಗಳಿಲ್ಲದೇ ಬೀಕೋ ಎನ್ನುತ್ತಿದೆ. ದೂರದ ಜಿಲ್ಲೆ,ತಾಲೂಕುಗಳಿಂದ ಆಗಮಿಸಿದ ರೈತರು ಇಲ್ಲಿಯ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

Vijaya Karnataka 5 Jun 2019, 5:00 am
ಶಿರಹಟ್ಟಿ : ಉತ್ತರ ಕರ್ನಾಟಕದ ಏಕೈಕ ಸರಕಾರಿ ರೇಷ್ಮೆ ಗೂಡು ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಶಿರಹಟ್ಟಿಯ ಸರಕಾರಿ ರೇಷ್ಮೆ ಗೂಡು ಮಾರುಕಟ್ಟೆ ಹಾಗೂ ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರವು ಇದೀಗ ಅಧಿಕಾರಿಗಳಿಲ್ಲದೇ ಬೀಕೋ ಎನ್ನುತ್ತಿದೆ. ದೂರದ ಜಿಲ್ಲೆ,ತಾಲೂಕುಗಳಿಂದ ಆಗಮಿಸಿದ ರೈತರು ಇಲ್ಲಿಯ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
Vijaya Karnataka Web GDG-4SHT1A
ಮಾರುಕಟ್ಟೆಯಲ್ಲಿ ಹರಾಜಿಗಿರುವ ರೇಷ್ಮೆ ಗೂಡು.


ಮಾರುಕಟ್ಟೆ ಒನ್‌ ಮ್ಯಾನ್‌ ಶೋ ನಾ ? :

ಸರಕಾರಿ ಮಾರುಕಟ್ಟೆಯಲ್ಲಿ ರೇಷ್ಮೆ ವಿಸ್ತೀರ್ಣಾಧಿಕಾರಿ, ರೇಷ್ಮೆ ನಿರೀಕ್ಷ ಕರು, ರೇಷ್ಮೆ ಪ್ರವರ್ತಕರು ಹೀಗೆ ಮಾರುಕಟ್ಟೆಯ ಜವಾಬ್ದಾರಿ ನಿಭಾಯಿಸಬೇಕಾದಂತಹ ಪ್ರಮುಖ ಹುದ್ದೆಗಳು ನಿವೃತ್ತಿ ನಂತರ ಖಾಲಿಯಾಗಿ ಹಾಗೆ ಉಳಿದಿವೆ. 3-4 ತಿಂಗಳಿಂದ ಸಮರ್ಪಕ ಸಿಬ್ಬಂದಿ ಇಲ್ಲದೇ ಇಲ್ಲಿ ರೈತರು ನಿತ್ಯವೂ ನೋವು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಪ್ರಭಾರಿಯಾಗಿ ಒಬ್ಬ ಅಧಿಕಾರಿಯನ್ನು ನಿಯೋಜಿಸಿದ್ದರೂ ಸಹ ಸಕಾಲಕ್ಕೆ ಹರಾಜು ಪ್ರಕ್ರಿಯೆ ನಡೆಯಲಾರದೆ ರೈತರಿಗೆ ತೊಂದರೆಯಾಗಿದೆ. ಕಾಯಂ ಆಗಿ ಒಬ್ಬ ಡಿ ದರ್ಜೆ ನೌಕರ ಮಾತ್ರ ಇಲ್ಲಿ ಲಭ್ಯವಿರುವುದರಿಂದ ಈ ಮಾರುಕಟ್ಟೆ ಒನ್‌ ಮ್ಯಾನ್‌ ಶೋ ಎಂಬಂತೆ ಭಾಸವಾಗುತ್ತಿದೆ.

18 ಜಿಲ್ಲೆಗಳಿಂದ ಗೂಡು :

ಮಾರುಕಟ್ಟೆಯಲ್ಲಿ 18 ಜಿಲ್ಲೆಯ ಸುಮಾರು 25 ತಾಲೂಕುಗಳಿಂದ ರೇಷ್ಮೆ ಬೆಳೆಯುವ ರೈತರು ಇಲ್ಲಿ ತಮ್ಮ ಗೂಡು ಮಾರಾಟಕ್ಕಾಗಿ ಬರುತ್ತಾರೆ. ಪ್ರತಿ ತಿಂಗಳು ಸರಾಸರಿ 26 ರಿಂದ 27 ಟನ್‌ ಗೂಡು ಇಲ್ಲಿ ಮಾರಾಟವಾಗುತ್ತಿದೆ. ಈ ಗೂಡಿನಲ್ಲಿ ಭಾಗವಹಿಸುವುದಕ್ಕಾಗಿ ಸುಮಾರು 22 ಜನ ರೀಲರ್‌ಗಳು ಇಲ್ಲಿದ್ದಾರೆ. ಆದರೆ ಸಮರ್ಪಕ ಸಿಬ್ಬಂದಿ ಇಲ್ಲದಿರುವುದರಿಂದ ಹರಾಜು ಪ್ರಕ್ರಿಯೆ ಸರಿಯಾದ ಸಮಯಕ್ಕೆ ಆಗದಿರುವುದರಿಂದ ರೈತರಿಗೆ ತೊಂದರೆಯಾಗಿದೆ ಬೀಗ ಜಡಿಯುವ ಎಚ್ಚರಿಕೆ :

ಮಾರುಕಟ್ಟೆಗೆ ಸಮರ್ಪಕ ಸಿಬ್ಬಂದಿ ಒದಗಿಸುವಂತೆ ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ ವಿನಂತಿಸಿದರೂ ಸಹ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಮುಂದುವರಿದರೆ ರೈತರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮಾರುಕಟ್ಟೆಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ