ಆ್ಯಪ್ನಗರ

ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ

ಲಕ್ಕುಂಡಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ8785 ರೂ.ಗಳು ದುರುಪಯೋಗವಾಗಿದ್ದು, ಈ ಹಣವನ್ನು ಮರಳಿ ಪಾವತಿಸಬೇಕು ಎಂದು ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಪಂಚಾಯಿತಿ ಸಂಯೋಜಕ ಸಂತೋಷ ಪಾಟೀಲ ಹೇಳಿದರು.

Vijaya Karnataka 14 Nov 2019, 5:00 am
ಲಕ್ಕುಂಡಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ8785 ರೂ.ಗಳು ದುರುಪಯೋಗವಾಗಿದ್ದು, ಈ ಹಣವನ್ನು ಮರಳಿ ಪಾವತಿಸಬೇಕು ಎಂದು ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಪಂಚಾಯಿತಿ ಸಂಯೋಜಕ ಸಂತೋಷ ಪಾಟೀಲ ಹೇಳಿದರು.
Vijaya Karnataka Web 13LKD1_25
ಲಕ್ಕುಂಡಿ ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ 2 ನೇ ಸುತ್ತಿನ ಗ್ರಾಮ ಸಭೆಯಲ್ಲಿತಾಪಂ ಸಂಯೋಜಕ ಸಂತೋಷ ಪಾಟೀಲ ಮಾತನಾಡಿದರು.


ಇಲ್ಲಿಯ ಅನ್ನದಾನೀಶ್ವರ ಸಮುದಾಯ ಭವನದಲ್ಲಿಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ 2 ನೇ ಸುತ್ತಿನ ಗ್ರಾಮ ಸಭೆಯಲ್ಲಿಅವರು ಈ ವಿಷಯ ತಿಳಿಸಿದರು. ಒಬ್ಬ ಫಲಾನುಭವಿ ಮರಣ ಹೊಂದಿದವರ ಹೆಸರಲ್ಲಿಹಾಗೂ ಒಬ್ಬರು ಅರೇ ಸರಕಾರಿ ನೌಕರರು ಕೂಲಿ ಪಡೆದಿದ್ದು ಸೇರಿದಂತೆ ಒಟ್ಟು 8785 ರೂ.ಗಳು ಖಾತ್ರಿ ಯೋಜನೆಯ ನಿಯಮ ಉಲಂಘಿಘಿಸಿ ಹಣವು ಪಾವತಿಯಾಗಿದೆ. ಈ ಹಣವನ್ನು ಫಲಾನುಭವಿಗಳು ಮರು ಪಾವತಿಸಬೇಕೆಂದು ಹೇಳಿದರು.

ಗ್ರಾಮ ಸಂಪನ್ಮೂಲ ವ್ಯಕ್ತಿ ವಸಂತ ಹಾದಿಮನಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಏಪ್ರಿಲ್‌ 1 ರಿಂದ ಸೆ.30 ರವರೆಗೂ ನಡೆದ ಕಾಮಗಾರಿಗಳಲ್ಲಿಆದ ಖರ್ಚು ವೆಚ್ಚಗಳ ಬಗ್ಗೆ ವಿವರಿಸುತ್ತಾ ಗ್ರಾಮ ಪಂಚಾಯಿತಿಯಲ್ಲಿಒಟ್ಟು 2324 ಉದ್ಯೋಗ ಚೀಟಿಗಳು ಇವೆ. ಇದರಲ್ಲಿ 428 ಕಾರ್ಮಿಕರು ಕೆಲಸಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಒಟ್ಟು 173 ಕಾಮಗಾರಿಯಲ್ಲಿ12592 ಮಾನವ ದಿನಗಳಲ್ಲಿಕಾಮಗಾರಿ ನಡೆದಿದೆ. ಇದರಲ್ಲಿಸಾಮುದಾಯಿಕ 10 ಹಾಗೂ ವೈಯಕ್ತಿಕ 163 ಕಾಮಗಾರಿಗಳು ನಡೆದಿವೆ. ಒಟ್ಟು 2627959 ರೂ. ಸಾಮಾಜಿಕ ಲೆಕ್ಕ ಪರಿಶೋಧನೆ ಅವಧಿಯ ಕಾಮಗಾರಿಗೆ ವೆಚ್ಚವಾಗಿದ್ದು ಇದರಲ್ಲಿಕೂಲಿ ವೆಚ್ಚ 2405954 ರೂ., ಸಾಮಗ್ರಿ ವೆಚ್ಚ 222005 ರೂ. ಆಗಿದೆ. ಇದರಲ್ಲಿ1633390 ರೂ. ಗಳು ಆಕ್ಷೇಪಣೆಯ ಮೊತ್ತವಾಗಿದೆ ಎಂದು ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಯು.ವೈ ಬಾಗೆವಾಡಿ, ನೋಡೆಲ್‌ ಅಧಿಕಾರಿಯಾಗಿ ಆಗಮಿಸಿದ್ದರು. ಗ್ರಾ. ಪಂ ಅದ್ಯಕ್ಷ ಎಸ್‌.ಎಂ. ಬೂದಿಹಾಳ, ಉಪಾಧ್ಯಕ್ಷೆ ಪ್ರೇಮಾ ಮಟ್ಟಿ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಪ್ಪ ಜಿನಗಿ, ಪವಿತ್ರಾ ಜಕ್ಕಲಿ ಗಂಗಾಧರ ಜೋಗಣ್ಣವರ, ಗ್ರಾ.ಪಂ ಸದಸ್ಯರು ಹಾಜರಿದ್ದರು. ಪಿ.ಡಿ.ಒ ಮಂಜುಳಾ ಹೊಸಮನಿ ಸ್ವಾಗತಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ