ಆ್ಯಪ್ನಗರ

ವಚನ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ

ಶರಣರು ರಚಿಸಿದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿದ್ದು, ವಚನಗಳು ಸಾರಿರುವ ತತ್ವ ಮತ್ತು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಬೆಂಗಳೂರು ದೂರದರ್ಶನ ...

Vijaya Karnataka 18 Feb 2019, 5:00 am
ಮುಳಗುಂದ : ಶರಣರು ರಚಿಸಿದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿದ್ದು, ವಚನಗಳು ಸಾರಿರುವ ತತ್ವ ಮತ್ತು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
Vijaya Karnataka Web social conversion from vachana literature
ವಚನ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ


ಅವರು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ 160ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅದರಲ್ಲಿ ಬಾಲಲೀಲಾ ಮಹಾಂತ ಶಿವಯೋಗಿಗಳ ವಚನಗಳು ಜೀವನ ಸಾರ್ಥಕ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಬೆಳಗಾವಿ ಕಾರಂಜಿ ಮಠದ ಶಿವಯೋಗಿ ದೇವರು ಮಾತನಾಡಿ, ಬಾಲಲೀಲಾ ಮಹಾಂತ ಶಿವಯೋಗಿಗಳು ಹರಪೂಜೆ ಮತ್ತು ಗುರುವಿನ ಸೇವೆ ಮಾಡುವುದರಿಂದ ಭಕ್ತರಿಗೆ ಧಾರ್ಮಿಕ, ಶೈಕ್ಷ ಣಿಕ, ಸಾಂಸ್ಕೃತಿಕ ಪ್ರಜ್ಞೆ ಮೂಡುವುದು ಇದರಿಂದ ಮಾನವ ಜನ್ಮದ ಸಾರ್ಥಕ ಹಾದಿಯನ್ನು ತಿಳಿಯಲು ಸಹಕಾರಿಯಾಗುತ್ತದೆ ಎಂದರು.

ಕಲ್ಮಠ ಕಂಪ್ಲಿಯ ಅಭಿನವ ಪ್ರಭು ಸ್ವಾಮಿಗಳು ಸಾನ್ನಿಧ್ಯ ವಹಿಸಿಕೊಂಡು ಮಾತನಾಡಿ, ಶರಣರು ನೀಡಿದ ವಚನ ಸಾಹಿತ್ಯ ಅಮೋಘವಾಗಿದ್ದು ಇಂದಿನ ಯುವ ಪೀಳಿಗೆ ಬಾಲಲೀಲಾ ಮಹಾಂತ ಶಿವಯೋಗಿಗಳ ವಚನಗಳನ್ನು ಮತ್ತು ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಿ ಎಂದರು.

ನಿತ್ಯದ ಬದುಕಿನಲ್ಲಿ ಹಾಸ್ಯ ಅಡಗಿರುತ್ತದೆ ಅದನ್ನು ತಿಳಿದುಕೊಂಡು ಆಸ್ವಾದಿಸುವ ಗುಣವನ್ನು ಎಲ್ಲರೂ ಕಲಿಯಬೇಕು ಹಾಸ್ಯದಿಂದ ಮಾನಸಿಕವಾಗಿ, ದೈಹಿಕವಾಗಿ, ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಕ್ರಿಯಾತ್ಮಕ ಕೆಲಸ ಮಾಡಲು ಸಹಾಯವಾಗುವುದೆಂದು ಜನರಿಗೆ ನಗಿಸುವ ಮೂಲಕ ಅನಿಲ ವೈದ್ಯ ಹಾಗೂ ಶಿವಾನಂದ ಹುಣಸಿಮರದ ಭಕ್ತರನ್ನು ನಗೆ ಲೋಕಕ್ಕೆ ತೆಗೆದುಕೊಂಡು ಹೋದರು.

ಈ ಸಂದರ್ಭದಲ್ಲಿ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು, ಧಾರವಾಡದ ಖ್ಯಾತ ಹಿಂದೂಸ್ಥಾನಿ ಗಾಯಕ ಮೃತ್ಯುಂಜಯ ಶೆಟ್ಟರ , ಜಾತ್ರಾ ಕಮಿಟಿ ಅಧ್ಯಕ್ಷ ಷಣ್ಮುಖಪ್ಪ.ಸಿ.ಬಡ್ನಿ, ಅನಿಲ. ವೈದ್ಯ, ಶಿವಾನಂದ. ಹುಣಸಿಮರದ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ