ಆ್ಯಪ್ನಗರ

ಈರುಳ್ಳಿ ಬೆಳೆಗೆ ಪರಿಹಾರ ನೀಡಿ

ಗದಗ: ಜಿಲ್ಲೆಯಲ್ಲಿಸುರಿದ ಮಳೆಯಿಂದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಈ ಭಾಗದ ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಆದರಿಂದ ಕೂಡಲೇ ಈರುಳ್ಳಿ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸೋಮವಾರ ರಾಜ್ಯ ಈರುಳ್ಳಿ ಬೆಳಗಾರರ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 5 Nov 2019, 5:24 pm
ಗದಗ: ಜಿಲ್ಲೆಯಲ್ಲಿಸುರಿದ ಮಳೆಯಿಂದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಈ ಭಾಗದ ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಆದರಿಂದ ಕೂಡಲೇ ಈರುಳ್ಳಿ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸೋಮವಾರ ರಾಜ್ಯ ಈರುಳ್ಳಿ ಬೆಳಗಾರರ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web solve the onion crop
ಈರುಳ್ಳಿ ಬೆಳೆಗೆ ಪರಿಹಾರ ನೀಡಿ


ಜಿಲ್ಲೆಯಲ್ಲಿಕಳೆದ ಆರು ವರ್ಷದಿಂದ ನಿರಂತರವಾಗಿ ಬರಗಾಲದಿಂದ ರೈತರು ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿಉತ್ತಮ ಮಳೆಯಾದ ಹಿನ್ನೆಲೆಯಲ್ಲಿರೋಣ, ನರಗುಂದ, ಗಜೇಂದ್ರಗಡ, ಗದಗ ತಾಲೂಕುಗಳಲ್ಲಿಹೆಚ್ಚಿನ ಪ್ರಮಾಣದಲ್ಲಿಈರುಳ್ಳಿ ಬೆಳೆಯಲಾಗಿದೆ. ಕಳೆದ ಎರಡೂ ತಿಂಗಳ ಹಿಂದೆ ಸುರಿದ ಮಾಹಾ ಮಳೆಗೆ ಜಿಲ್ಲೆಯ ಈರುಳ್ಳಿ ಬೆಳೆಯೂ ಸಂಪೂರ್ಣ ನಾಶವಾಗಿದೆ. ಅಲ್ಪ ಸ್ವಲ್ಪ ಉಳಿದ ಈರುಳ್ಳಿಗೆ ಕೊಳೆ ರೋಗ ಬಂದು ನಾಶವಾಗುತ್ತಿದೆ. ಸಾಲ ಮಾಡಿ ಮುಂಗಾರು ಹಂಗಾಮಿನಲ್ಲಿರೈತರು ಈರುಳ್ಳಿ ಬಿತ್ತನೆ ಮಾಡಿದ್ದರು. ಜತೆಗೆ ಅದಕ್ಕೆ ಸಾಕಷ್ಟು ಸಲ ಗೊಬ್ಬರ, ಕಸ ತೆಗೆಸಲಾಗಿದೆ. ಹೀಗಾಗಿ ಬೆಳೆ ಬರುವುದಕ್ಕಿಂತ ಮುಂಚಿತವಾಗಿ ಸಾಕಷ್ಟು ಪ್ರಮಾಣದಲ್ಲಿರೈತರು ಸಾಲ ಮಾಡಿಕೊಂಡಿದ್ದಾರೆ. ಜತೆಗೆ ಕಳೆದ ಆರು ವರ್ಷಗಳಿಂದ ನಿರಂತರ ಬರಲಗಾಲದಿಂದ ಮೊದಲೆ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಪ್ರಸಕ್ತ ಸಾಲಿನ ಈರುಳ್ಳಿ ಬೆಳೆ ಪರಿಹಾರ ನೀಡುವ ಮೂಲಕ ರೈತರ ಆಸರೆಯಾಗುತ್ತಿದೆ. ಪ್ರತಿ ಎಕರೆಗೆ ಮೂವತ್ತು ಸಾವಿರ ನೀಡಬೇಕು ಎಂದು ಮನವಿ ಮೂಲಕ ಈರುಳ್ಳಿ ಬೆಳಗಾರರು ಒತ್ತಾಯಿಸಿದರು.

ಮಂಜುನಾಥ ನೀಲಗುಂದ, ನಾಮದೇವ ಚಿಕ್ಕಣ್ಣವರ, ಶಾಂತಸಾಗರ, ಶರಣಪ್ಪ ಮ್ಯಾಗೇರಿ, ಬಸವಣ್ಣಯ್ಯ ಹಿರೇಮಠ, ಬಸವರಾಜ ಕೋಟಿ, ಬಾಬು ಯಲಿಗಾರ, ಅರವಿಂದ ಹುಲ್ಲೂರ, ಅಂಬರೀಷ ಹಿರೇಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ