ಆ್ಯಪ್ನಗರ

ಎತ್ತುಗಳಿಗೆ ವಿಶೇಷ ಅಲಂಕಾರ

ಶಿರಹಟ್ಟಿ : ಸತತ ಬರಗಾಲದ ಮಧ್ಯೆಯು ಸಹ ವರ್ಷದುದ್ದಕ್ಕೂ ತಮ್ಮ ಜಮೀನಿನಲ್ಲಿ ತಮ್ಮೊಂದಿಗೆ ಇರುವಂತಹ ಎತ್ತಿಗೆ ವಿಶೇಷ ಅಲಂಕಾರ ಮಾಡಿ ಕರಿ ಹರಿಯುವ ಸ್ಪರ್ಧೆ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.

Vijaya Karnataka 18 Jun 2019, 5:00 am
ಶಿರಹಟ್ಟಿ : ಸತತ ಬರಗಾಲದ ಮಧ್ಯೆಯು ಸಹ ವರ್ಷದುದ್ದಕ್ಕೂ ತಮ್ಮ ಜಮೀನಿನಲ್ಲಿ ತಮ್ಮೊಂದಿಗೆ ಇರುವಂತಹ ಎತ್ತಿಗೆ ವಿಶೇಷ ಅಲಂಕಾರ ಮಾಡಿ ಕರಿ ಹರಿಯುವ ಸ್ಪರ್ಧೆ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
Vijaya Karnataka Web GDG-17SHT1
ಶಿರಹಟ್ಟಿಯಲ್ಲಿ ಕಾರ ಹುಣ್ಣಿಮೆಯ ಅಂಗವಾಗಿ ಕರಿ ಹರಿಯುವ ಸ್ಪರ್ಧೆಯಲ್ಲಿ ಓಡುತ್ತಿರುವ ಎತ್ತುಗಳು.


ಬೆಳಗ್ಗೆಯಿಂದಲೇ ರೈತರು ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ, ಅವುಗಳಿಗೆ ವಿಶೇಷ ಅಲಂಕಾರ ಮಾಡಿ, ಎತ್ತುಗಳ ಮೈ-ಮೇಲೆ ಚಿತ್ರಗಳನ್ನು ಬಿಡಿಸಿ ಕರಿ ಹರಿಯುವ ಸ್ಪರ್ಧೆಗೆ ಸಿದ್ಧಗೊಳಿಸುತ್ತಿದ್ದರು. ವಿಶೇಷವಾಗಿ ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಲ್ಲೂ ಸಹ ರೈತ ಸಮೂಹವು ಅತ್ಯಂತ ಶ್ರದ್ಧೆಯಿಂದ ಇದರಲ್ಲಿ ಭಾಗವಹಿಸುತ್ತಾರೆ. ಯುವಕರಂತು ಸ್ಪರ್ಧೆಯಲ್ಲಿ ತಮ್ಮ ಎತ್ತುಗಳನ್ನು ಹಿಡಿದುಕೊಂಡು ಕೇಕೇ ಹಾಕುತ್ತ ಸಂಭ್ರಮಿಸುತ್ತಾರೆ. ಇದನ್ನು ನೋಡಲು ದಾರಿಯುದ್ದಕ್ಕೂ ಜನಸ್ತೋಮ ಸೇರಿ ಕೇಕೆ ಚಪ್ಪಾಳೆಯನ್ನು ಹಾಕಿ ಖುಷಿಪಡುತ್ತಾರೆ. ಈ ಸ್ಪರ್ಧೆಯಲ್ಲಿ ವಿಜೇತವಾದ ಎತ್ತುಗಳ ಮಾಲೀಕರಿಗೆ ಬಹುಮಾನ ನೀಡಿ ರಾತ್ರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ