ಆ್ಯಪ್ನಗರ

ಆರು ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ನರಗುಂದ: ಕೊರೊನಾ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿಸಾರಿಗೆ ಬಸ್‌ನಲ್ಲಿಸಂಚರಿಸಲು ಆತಂಕ ಪಡುತ್ತಿರುವ ಸಂದರ್ಭದಲ್ಲಿಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುವ ಗ್ರಾಮೀಣ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಬಸ್‌ ಓಡಿಸಲು ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.

Vijaya Karnataka 25 Jun 2020, 5:00 am
ನರಗುಂದ: ಕೊರೊನಾ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿಸಾರಿಗೆ ಬಸ್‌ನಲ್ಲಿಸಂಚರಿಸಲು ಆತಂಕ ಪಡುತ್ತಿರುವ ಸಂದರ್ಭದಲ್ಲಿಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುವ ಗ್ರಾಮೀಣ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಬಸ್‌ ಓಡಿಸಲು ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.
Vijaya Karnataka Web 24NRD1A_25
ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆಯ ಅಣಕು ಪ್ರದರ್ಶನದಲ್ಲಿಪಾಲ್ಗೊಂಡ ಶಿಕ್ಷಕರು.


ನರಗುಂದ ಆರು ಪರೀಕ್ಷಾ ಕೇಂದ್ರಗಳಲ್ಲಿ1376 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬಸ್‌ ಓಡಿಸಲು ಮುಂದಾಗಿದೆ.

ಆರು ಕೇಂದ್ರಗಳಲ್ಲಿ ಪರೀಕ್ಷೆ

ನರಗುಂದ ನಾಲ್ಕು ಮತ್ತು ಕೊಣ್ಣೂರು, ಶಿರೋಳದಲ್ಲಿತಲಾ ಒಂದು ಪರೀಕ್ಷಾ ಕೇಂದ್ರಗಳಲ್ಲಿಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಇಡೀ ಶಾಲೆಯನ್ನು ಸ್ಯಾನಿಟೈಸರ್‌ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿಎರಡು ಪ್ರತ್ಯೇಕ ಕೊಠಡಿ ಕಾಯ್ದಿರಿಸಿದ್ದು, 18ರಿಂದ 20 ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಕೊಠಡಿಯಲ್ಲಿಪರೀಕ್ಷೆ ಬರೆಯಲಿದ್ದಾರೆ. ಸ್ಕೌಟ್ಸ್‌ ಗೈಡ್ಸ್‌ ಮತ್ತು ಜಿಪಂ ಕೊಡಮಾಡಿದ ಮಾಸ್ಕ್‌ ಪ್ರತಿ ವಿದ್ಯಾರ್ಥಿಗಳಿಗೆ ಎರಡು ಮಾಸ್ಕ್‌ ನೀಡಲಾಗಿದೆ. ಮಾಸ್ಕ್‌ ಧರಿಸಿ ಬರುವ ವಿದ್ಯಾರ್ಥಿಗಳನ್ನು ಥರ್ಮಲ್‌ ಸ್ಕಾನಿಂಗ ಮಾಡಿ ಸ್ಯಾನಿಟೈಸರ್‌ ನೀಡಿ ಒಳಗೆ ಬಿಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ತಿಳಿಸಿದರು.

ಆರು ಕೇಂದ್ರಗಳ 86 ಕೊಠಡಿಗೆ 124 ಮೇಲ್ವಿಚಾರಕರಿದ್ದು, 18 ಶಿಕ್ಷಕರನ್ನು ಕಾಯ್ದಿರಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಮೂವರು ದೈಹಿಕ ಶಿಕ್ಷಕರನ್ನು, ಮುವರು ಪೊಲೀಸರನ್ನು ಮತ್ತು ಸ್ಕೌಟ್ಸ್‌ ಗೈಡ್ಸ್‌ ಶಿಕ್ಷಕರನ್ನು ನೇಮಿಸಲಾಗಿದೆ. ಬೆಳಗ್ಗೆ 10.30ರಿಂದ 1.30ರವರೆಗೆ ಪರೀಕ್ಷೆ ನಡೆಯಲಿದ್ದು, ಒಂದು ಗಂಟೆ ಮೊದಲೇ ವಿದ್ಯಾರ್ಥಿಗಳಿಗೆ ಬರಲು ಅವಕಾಶವಿದೆ. ಗುಂಪು ಕಟ್ಟಿಕೊಂಡು ಬರಬಾರದು. ಸಾರ್ವಜನಿಕರಿಗೆ ಕೇಂದ್ರದಲ್ಲಿಪ್ರವೇಶ ನೀಡಲಾಗುವುದಿಲ್ಲಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ