ಆ್ಯಪ್ನಗರ

ಹೈಮಾಸ್ಟ್‌ ದುರಸ್ತಿ, ಇಂದಿರಾಕ್ಯಾಂಟಿನ್‌ ಆರಂಭಿಸಿ

ಶಿರಹಟ್ಟಿ : ಪಟ್ಟಣದ ಹೈಮಾಸ್ಟ್‌ ದೀಪ ದುರಸ್ತಿ ಮತ್ತು ಇಂದಿರಾ ಕ್ಯಾಂಟಿನ್‌ ಪ್ರಾರಂಭಿಸುವಂತೆ ಆಗ್ರಹಿಸಿ ಕರವೇ ಕಾರ‍್ಯಕರ್ತರು ಬುಧವಾರ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 19 Sep 2019, 5:00 am
ಶಿರಹಟ್ಟಿ : ಪಟ್ಟಣದ ಹೈಮಾಸ್ಟ್‌ ದೀಪ ದುರಸ್ತಿ ಮತ್ತು ಇಂದಿರಾ ಕ್ಯಾಂಟಿನ್‌ ಪ್ರಾರಂಭಿಸುವಂತೆ ಆಗ್ರಹಿಸಿ ಕರವೇ ಕಾರ‍್ಯಕರ್ತರು ಬುಧವಾರ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web start highmast repair indira canteen
ಹೈಮಾಸ್ಟ್‌ ದುರಸ್ತಿ, ಇಂದಿರಾಕ್ಯಾಂಟಿನ್‌ ಆರಂಭಿಸಿ


ಕರವೇ ತಾಲೂಕು ಅಧ್ಯಕ್ಷ ರಫೀಕ್‌ ಕೆರಿಮನಿ ಮಾತನಾಡಿ, ಶಿರಹಟ್ಟಿ ಪಟ್ಟಣದ ಪ್ರಮುಖ ರಸ್ತೆಯಾದ ಮಾಗಡಿ ರಸ್ತೆ ಮತ್ತು ಛಬ್ಬಿ ರಸ್ತೆಗೆ ಹೈಮಾಸ್ಟ್‌ ಬೀದಿ ದೀಪಗಳನ್ನು ಸರಕಾರ ಅಳವಡಿಸಿದ್ದು, 2 ವರ್ಷಗಳಿಂದ ಕೆಟ್ಟು ಕೆಲಸಕ್ಕೆ ಬಾರದಂತಾಗಿವೆ. ದುರಸ್ತಿ ಬಗ್ಗೆ ಹಲವಾರು ಮನವಿ ಸಲ್ಲಿಸಿದರೂ ಇಲಾಖೆ ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿಉಪಹಾರ ಮತ್ತು ಊಟ ಒದಗಿಸುವುದಕ್ಕೆ ತಾಲೂಕು ಕಚೇರಿ ಹತ್ತಿರ ಇರುವ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಮುಕ್ತಾಯಗೊಂಡಿದ್ದರೂ ಕಾರಾರ‍ಯರಂಭವಾಗಿಲ್ಲ. ಪಟ್ಟಣವನ್ನು ಸುಂದರವಾಗಿ ಇಡಬೇಕಾದ ಪಪಂ ಸಿಬ್ಬಂದಿ ಮತ್ತು ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಮನವಿಯಲ್ಲಿದೂರಿದ್ದಾರೆ.

ಜಿಲ್ಲಾಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಮನ್ಸೂರ ಮಕಾನದಾರ, ಗೌಸ ಕಲಾವಂತ, ದೇವಪ್ಪ ಬಟ್ಟೂರ, ನೂರಹುಸೇನ ಕಾರಬೂದಿ, ದಾದಾಪೀರ ಮುಳಗುಂದ, ಖಾದರ ಟಪಾಲ್‌, ಚಾಂದ ಕವಲೂರ, ಶಹರಾಬಾನು ಒಂಟಿ, ಕಲಾವತಿ ನಾವಿ, ಯೋಗಿತಾ ದೇಸಾಯಿಪಟ್ಟಿ, ವಿಜಯವ್ವ ತಳವಾರ, ಶೋಭಾ ಬಳಿಗೇರ, ರೇಖಾ ಮುಧೋಳಕರ, ವೀಣಾ ಮುಧೋಳಕರ, ಲಕ್ಷಿತ್ರ್ಮೕಬಾಯಿ ಮುಧೋಳಕರ, ಶೋಭಾ ದೊಡ್ಡೂರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ