Please enable javascript.ರಾಜ್ಯ-ಕೇಂದ್ರ, ಆರೋಪ-ಪ್ರತ್ಯಾರೋಪ - State-Center, Charges-Rejection - Vijay Karnataka

ರಾಜ್ಯ-ಕೇಂದ್ರ, ಆರೋಪ-ಪ್ರತ್ಯಾರೋಪ

ವಿಕ ಸುದ್ದಿಲೋಕ 13 Nov 2017, 5:00 am
Subscribe

ಗದಗ: ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದ್ದ 22 ಕೋಟಿ ರೂ. ವೆಚ್ಚದ ಹುಡ್ಕೋ ಅಂಬಾಭವಾನಿ ಗುಡಿಯಿಂದ ಅಂಜುಮನ್‌ ಕಾಲೇಜ್‌ವರೆಗಿನ 4 ಕಿಮೀ ಉದ್ದದ ಚತುಷ್ಪಥ ನಿರ್ಮಾಣ ಭೂಮಿಪೂಜೆ ಸಮಾರಂಭ ಬಿಜೆಪಿ-ಕಾಂಗ್ರೆಸ್‌ ನಾಯಕರ ಸ್ವಸಾಧನೆ ಬಣ್ಣನೆ, ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಯಿತು.

state center charges rejection
ರಾಜ್ಯ-ಕೇಂದ್ರ, ಆರೋಪ-ಪ್ರತ್ಯಾರೋಪ

ಗದಗ: ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದ್ದ 22 ಕೋಟಿ ರೂ. ವೆಚ್ಚದ ಹುಡ್ಕೋ ಅಂಬಾಭವಾನಿ ಗುಡಿಯಿಂದ ಅಂಜುಮನ್‌ ಕಾಲೇಜ್‌ವರೆಗಿನ 4 ಕಿಮೀ ಉದ್ದದ ಚತುಷ್ಪಥ ನಿರ್ಮಾಣ ಭೂಮಿಪೂಜೆ ಸಮಾರಂಭ ಬಿಜೆಪಿ-ಕಾಂಗ್ರೆಸ್‌ ನಾಯಕರ ಸ್ವಸಾಧನೆ ಬಣ್ಣನೆ, ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹಾಗೂ ಸಂಸದ ಶಿವಕುಮಾರ ಉದಾಸಿ ಏಕಕಾಲಕ್ಕೆ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಂಡ ಖುಷಿಯನ್ನು ಮೇಲ್ನೋಟಕ್ಕೆ ತೋರ್ಪಡಿಸಿದರು. ಆದರೆ, ವೇದಿಕೆಯಲ್ಲಿ ಮಾತನಾಡುವ ಸಂದರ್ಭ ಆಂತರಿಕ ಅಸಮಾಧಾನ ಆರೋಪ-ಪ್ರತ್ಯಾರೋಪವಾಗಿ ಹೊಮ್ಮಿದವು.

ಭೂಮಿಪೂಜೆ ಸಮಾರಂಭಕ್ಕಾಗಿ ಕೆಲವು ದಿನಗಳ ಹಿಂದೆ ನಗರದಲ್ಲಿ ಪ್ರತ್ಯೇಕ ಬ್ಯಾನರ್‌ ಅಳವಡಿಸಿದ್ದು ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿತ್ತು. ಬಿಜೆಪಿ-ಕಾಂಗ್ರೆಸ್‌ ಬೆಂಬಲಿಗರು ಪತ್ರಿಕಾ ಪ್ರಕಟಣೆ ಮೂಲಕ ಪರಸ್ಪರ ನಾಯಕರ ಪ್ರತಿಷ್ಠೆ ಕೆಣಕಿದ್ದರು. ಸಮಾರಂಭ ಪ್ರತ್ಯೇಕವಾಗಿ ನಡೆಯತ್ತದೆ ಎಂಬ ಮಟ್ಟಿಗೆ ಇದು ಬೆಳೆದಿತ್ತು.

ರಾಜ್ಯದ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಚತುಷ್ಪಥ ಕಾಮಗಾರಿಗೆ ರಾಜ್ಯ ಸರಕಾರ 12 ಕೋಟಿ ರೂ. ಒದಗಿಸಿದೆ ಎಂಬುದು ಕಾಂಗ್ರೆಸ್‌ ಬೆಂಬಲಿಗರ ವಾದವಾಗಿತ್ತು. ಅತ್ತ ಕೇಂದ್ರದ ರಾಷ್ಟ್ರೀಯ ರಸ್ತೆ ನಿಧಿಯಡಿ ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂ. ನೀಡಲಾಗಿದೆ ಎಂಬುದು ಬಿಜೆಪಿ ಬೆಂಬಲಿಗರ ಪ್ರತಿವಾದವಾಗಿತ್ತು.

ಆರೋಪ-ಪ್ರತ್ಯಾರೋಪ: ಬ್ಯಾನರ್‌, ಪತ್ರಿಕಾ ಪ್ರಕಟಣೆ ಮೂಲಕ ಬೆಂಬಲಿಗರು ಹೊತ್ತಿಸಿದ ಅಸಮಾಧಾನದ ಕಾವು ಹಾಗೂ ರಾಜಕೀಯ ಪ್ರತಿಷ್ಠೆ ಮುಂದು ಮಾಡಿಕೊಂಡು ಇಬ್ಬರು ನಾಯಕರು ಭೂಮಿಪೂಜೆ ಸಮಾರಂಭದಲ್ಲಿ, ತಮ್ಮ ಪಕ್ಷದ ಸಾಧನೆ ಬಣ್ಣಿಸಿಕೊಳ್ಳುತ್ತ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದರು.

ಮೊದಲು ಭಾಷಣ ಮಾಡಿದ ಸಂಸದ ಶಿವಕುಮಾರ ಉದಾಸಿ ಅವರು, ಗದಗ-ಬೆಟಗೇರಿ ನಗರದಲ್ಲಿ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರ ನೀಡಿದ ಅನುದಾನ ಲೆಕ್ಕ ಒದಗಿಸಿದರು. ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರು, ಅವಳಿ ನಗರದ ಅಭಿವೃದ್ಧಿ ಬಗೆಗಿನ ತಮ್ಮ ಸಾಧನೆ ಹೇಳಿಕೊಂಡರು.

ನೆರೆಯ ಹಾವೇರಿಯಲ್ಲೂ ನಿರಂತರ ನೀರು ಯೋಜನೆ ಪ್ರಗತಿಯಾಗಿಲ್ಲ. 2006 ರಲ್ಲಿ ಹುಬ್ಬಳ್ಳ್ಳಿ-ಧಾರವಾಡದಲ್ಲಿ ಆರಂಭವಾದ 24*7 ನೀರು ಯೋಜನೆ ಪ್ರಗತಿ ಈವರೆಗೆ ಶೇ.30 ರಷ್ಟು ದಾಟಿಲ್ಲ. ಗದಗನಲ್ಲಿ ಕಡಿಮೆ ಅವಧಿಯಲ್ಲಿ ಶೇ.65 ರಷ್ಟು ಸಾಧನೆ ಮಾಡಲಾಗಿದೆ ಎಂದು ಪರೋಕ್ಷ ವಾಗಿ ಬಿಜೆಪಿಯನ್ನು ಕುಟುಕಿದರು.

ನರೇಗಾದಡಿ ರಾಜ್ಯಕ್ಕೆ ಕೇಂದ್ರ ಸರಕಾರ ನೀಡಬೇಕಿದ್ದ ಹಣದ ಬಾಕಿಯ ಎಚ್‌ಕೆಪಿ ಪ್ರಸ್ತಾಪಕ್ಕೆ ಉತ್ತರಿಸಿದ ಉದಾಸಿ, ಖಾತ್ರಿ ಜಾಬ್‌ ಕಾರ್ಡ್‌ಗಳಿಗೆ ಆಧಾರ್‌ ಲಿಂಕ್‌ ಮಾಡಿದ ತಕ್ಷ ಣವೇ ಕೇಂದ್ರ ಸರಕಾರ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕಲಿದೆ. ಈ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕು ಎಂದು ತಿವಿದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ