ಆ್ಯಪ್ನಗರ

ವನ್ಯಜೀವಿ ಧಾಮ ವಾಪಸ್‌ ಪಡೆದರೆ ಹೋರಾಟ

ಮುಂಡರಗಿ : ಸರಕಾರ ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಣೆ ಮಾಡಿದ್ದನ್ನು ವಾಪಸ್‌ ಪಡೆದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪುರಸಭೆಯ ಸದಸ್ಯ ನಾಗೇಶ ಹುಬ್ಬಳ್ಳಿ ಹೇಳಿದ್ದಾರೆ.

Vijaya Karnataka 11 Jul 2019, 5:00 am
ಮುಂಡರಗಿ : ಸರಕಾರ ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಣೆ ಮಾಡಿದ್ದನ್ನು ವಾಪಸ್‌ ಪಡೆದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪುರಸಭೆಯ ಸದಸ್ಯ ನಾಗೇಶ ಹುಬ್ಬಳ್ಳಿ ಹೇಳಿದ್ದಾರೆ.
Vijaya Karnataka Web struggling to get back to the sanctuary
ವನ್ಯಜೀವಿ ಧಾಮ ವಾಪಸ್‌ ಪಡೆದರೆ ಹೋರಾಟ


ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕ ರೈತರು ಪತ್ರ ಚಳವಳಿ ನಡೆಸಿರುವುದು ಈ ಭಾಗದ ದುರಂತವಾಗಿದೆ. ಅನೇಕ ಸ್ವಾಮಿಗಳ ಮತ್ತು ಪರಿಸರವಾದಿ ಹೋರಾಟದ ಬಲದಿಂದ ಕಪ್ಪತಗುಡ್ಡಕ್ಕೆ ಈ ಸ್ಥಾನಮಾನ ಸಿಕ್ಕಿದೆ. ಇದು ಸಂತೋಷ ಪಡುವ ಸಂಗತಿ. ಅದನ್ನು ಬಿಟ್ಟು ಬೇರೆ-ಬೇರೆ ಕಾರಣ ಮುಂದೆಮಾಡಿ ಕಪ್ಪತಗುಡ್ಡಕ್ಕೆ ನೀಡಲಾದ ವನ್ಯಜೀವಿ ಧಾಮ ಸ್ಥಾನಮಾನ ವಾಪಸ್‌ ಪಡೆಯಬೇಕೆಂದು ಆಗ್ರಹಿಸುವುದು ದುರುದ್ದೇಶದಿಂದ ಕೂಡಿದೆ ಎಂದರು.

ಅಪರೂಪದ ಸಸ್ಯ ಪ್ರಭೇದಗಳನ್ನು ಮತ್ತು ಪ್ರಾಣಿ ಸಂಕುಲ ಹೊಂದಿದ್ದ ಕಪ್ಪತಗುಡ್ಡ ಉತ್ತರ ಕರ್ನಾಟಕದ ಜೀವ. ಕಪ್ಪತಗುಡ್ಡ ಇರುವುದರಿಂದಲೇ ಉತ್ತರ ಕರ್ನಾಟಕದಲ್ಲಿ ಆಗಾಗ ಅಲ್ಪ-ಸ್ವಲ್ಪ ಮಳೆಯಾಗುತ್ತಿದೆ. ವನ್ಯಜೀವಿ ಸ್ಥಾನಮಾನದ ಘೋಷಣೆಯ ಹಿನ್ನೆಲೆಯಲ್ಲಿ ಕಪ್ಪತಗುಡ್ಡಕ್ಕೆ ಮತ್ತಷ್ಟು ರಕ್ಷ ಣೆ ಸಿಕ್ಕು ಪರಿಸರಕ್ಕೆ ಪೂರಕವಾಗುತ್ತದೆ. ಕಪ್ಪತಗುಡ್ಡಕ್ಕೆ ವನ್ಯಜೀವಿ ಧಾಮ ಸ್ಥಾನಮಾನ ಸಿಗಬೇಕೆಂದು ಲಿಂ ಡಾ.ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಮತ್ತು ಜ. ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಹಾಗೂ ಅನೇಕ ಪರಿಸರವಾದಿಗಳ ಹೋರಾಟದ ಬಲದಿಂದ ಕಪ್ಪತಗುಡ್ಡ ವನ್ಯಜೀವಿ ಧಾಮವಾಗಿ ಸರಕಾರ ಘೋಷಣೆ ಮಾಡಿದೆ. ಇದರಿಂದ ಯಾವ ರೈತರಿಗೂ ತೋದರೆಯಾಗುವುದಿಲ್ಲ. ಇಲ್ಲಿಯ ಔಷಧಿಯ ಸಸ್ಯಗಳು, ಖನಿಜ, ಪ್ರಾಣಿ , ಅರಣ್ಯ ಸಂಪತ್ತು ಮತ್ತಷ್ಟು ಹೇರಳವಾಗಿ ಬೆಳೆಯಲು ಅನಕೂಲವಾಗುತ್ತದೆ ಎಂದರು.

ಕಪ್ಪತಗುಡ್ಡದ ಸಸ್ಯಗಳನ್ನು ಮತ್ತು ಅಲ್ಲಿಯ ಖನಿಜ ಸಂಪತ್ತು ಲೂಟಿ ಮಾಡುವ ಜನರು ವನ್ಯಜೀವಿ ಧಾಮ ಸ್ಥಾನಮಾನ ವಾಪಸ್‌ ಪಡೆಯಬೇಕೆಂದು ಆಗ್ರಹಿಸುವ ಪ್ರತಿಭಟನೆಗೆ ರೈತರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ನಾವು ಸಹ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ , ಪತ್ರ ಚಳವಳಿಯನ್ನು ಕೈಗೊಳ್ಳಬೇಕಾಗುತ್ತದೆ. ರಾಜ್ಯದ ತುಂಬೆಲ್ಲ ಜನರು ವನ್ಯಜೀವಿ ಧಾಮ ಸ್ಥಾನಮಾನವನ್ನು ಸ್ವಾಗತಿಸುತ್ತಿರುವುವಾಗ,ಬಗರ್‌ ಹುಕುಂ ಸಾಗುವಳಿದಾರರ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವುದು ಸಮಂಜಸವಲ್ಲ ಎಂದರು.

ಕಪ್ಪತಗುಡ್ಡಕ್ಕೆ ನೀಡಲಾಗಿರುವ ವನ್ಯಜೀವಿ ಧಾಮ ಸ್ಥಾನಮಾನ ವಾಪಸ್‌ ಪಡೆಯಬಾರದು ಪಡೆದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ